ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಮೈಸೂರು ನ್ಯಾಯಾಲಯ ಸೂಚಿಸಿದೆ. ಸಿದ್ದರಾಮಯ್ಯ ಸೇರಿದಂತೆ ನಾಲ್ಕು ಮಂದಿ ವಿರುದ್ಧ ನಗರದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 25 ವರ್ಷಗಳ ಹಳೆಯ ಕೇಸಿಗೆ ನ್ಯಾಯಾಲಯ ಮರುಜೀವ ನೀಡಿದೆ. ವಕೀಲರಾದ ಗಂಗರಾಜು ಮತ್ತು ಸಂಗಮೇಶ್ ಅವರು ಸಿದ್ದರಾಮಯ್ಯ ವಿರುದ್ಧ ಅಕ್ರಮ ಭೂ ವ್ಯವಹಾರದಲ್ಲಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಮೈಸೂರು ನ್ಯಾಯಾಲಯ ಇವರ ಮನವಿ ಮೇರೆಗೆ ಎಫ್ಐಆರ್ ದಾಖಲಿಸಲು ಅನುಮತಿಸಿದೆ. ಮೈಸೂರಿನ 2ನೇ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶವನ್ನು ನೀಡಿದ್ದಾರೆ.

ಸಿದ್ದರಾಮಯ್ಯನವರು ಡಿಸಿಎಂ ಆಗಿದ್ದಾಗ ನಗರದ ವಿಜಯನಗರದ ಎರಡನೇ ಹಂತದಲ್ಲಿ ಅಕ್ರಮ ನಿವೇಶನ ಪಡೆದಿದ್ದಾರೆ ಹಾಗೂ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಆಪ್ತರಿಗೆ ನಿವೇಶನ ಕೊಡಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಗಂಗರಾಜು ಮತ್ತು ಸಂಗಮೇಶ್ ನ್ಯಾಯಾಲಯದ ಮೊರೆ ಹೋಗಿದ್ದರು.

Please follow and like us:
0
http://bp9news.com/wp-content/uploads/2017/09/1458917035-5468-1.jpghttp://bp9news.com/wp-content/uploads/2017/09/1458917035-5468-1-150x150.jpgPolitical Bureauಪ್ರಮುಖಮೈಸೂರುರಾಜಕೀಯBreaking: Siddaramaiah gets FIR Court order !!!ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಮೈಸೂರು ನ್ಯಾಯಾಲಯ ಸೂಚಿಸಿದೆ. ಸಿದ್ದರಾಮಯ್ಯ ಸೇರಿದಂತೆ ನಾಲ್ಕು ಮಂದಿ ವಿರುದ್ಧ ನಗರದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 25 ವರ್ಷಗಳ ಹಳೆಯ ಕೇಸಿಗೆ ನ್ಯಾಯಾಲಯ ಮರುಜೀವ ನೀಡಿದೆ. ವಕೀಲರಾದ ಗಂಗರಾಜು ಮತ್ತು ಸಂಗಮೇಶ್ ಅವರು ಸಿದ್ದರಾಮಯ್ಯ ವಿರುದ್ಧ ಅಕ್ರಮ ಭೂ ವ್ಯವಹಾರದಲ್ಲಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೈಸೂರು ನ್ಯಾಯಾಲಯ ಇವರ ಮನವಿ ಮೇರೆಗೆ ಎಫ್ಐಆರ್...Kannada News Portal