ಕೆಹೆಡಾ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗುಜರಾತಿನಾದ್ಯಂತ ಸಾರ್ವಜನಿಕರು ಕಡು ಕಷ್ಟದಲ್ಲಿ ಮುಳುಗಿದ್ದಾರೆ. ಅದರಲ್ಲೂ ದೂರದ ಹಳ್ಳಿಗಾಡಿನ ಪ್ರದೇಶ ಖೇಡಾ ಪಟ್ಟಣದಲ್ಲಿ ಅಕ್ಷರ ಸಹ ವರುಣನ ಆರ್ಭಟಕ್ಕೆ ನಲುಗಿ ಹೋಗಿದ್ದಾರೆ.

ಇನ್ನು ಖೇಡಾ ಪಟ್ಟಣದಿಂದ ನಗರ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಇದ್ದ ಸೇತುವೆ ಧಾರಾಕಾರ ಮಳೆಗೆ ಹಾನಿಯಾಗಿದ್ದು, ಇದೀಗ ಆ ಕುಸಿದ ಸೇತುವೆ ಮೂಲಕವೇ ಜನ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇತುವೆ ದಾಟುತ್ತಿದ್ದಾರೆ…, ಜೊತೆಗೆ ಶಾಲಾ ಮಕ್ಕಳೂ ಸಹ ಇದೇ ಪರಿಸ್ಥಿತಿಯಲ್ಲಿ ಸೇತುವೆ ದಾಟುತ್ತಿದ್ದು ನೋಡುಗರ ಮೈ ಜುಮ್ ಎನಿಸುವಂತೆ ಇದೆ.

ಆಯತಪ್ಪಿ , ಕಾಲು ಜಾರಿ ತುಸು ಕೆಳಗೆ ಬಿದ್ದರೆ ನದಿಯ ಪಾಲಾಗುವುದು ಗ್ಯಾರೆಂಟಿ . ಇದೀಗ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಳೆದ ಎರಡು ತಿಂಗಳುಗಳಿಂದ, ಸ್ಥಳೀಯರು ನಾಯ್ಕಾ ಮತ್ತು ಭೇರೈ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯನ್ನು ನಿರ್ಮಿಸಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೂ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿ ಇದೆ.

ಇನ್ನು “ನಾವು ಈ ಸೇತುವೆಯನ್ನು ಬಳಸದಿದ್ದರೆ, 1 ಕಿ.ಮೀ ಬದಲಿಗೆ 10 ಕಿ.ಮೀ ದೂರ ಬಳಸಿಕೊಂಡು ಪ್ರಯಾಣಿಸಬೇಕು.” ಆದಷ್ಟು ಬೇಗ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/07/ani.jpghttp://bp9news.com/wp-content/uploads/2018/07/ani-150x150.jpgBP9 Bureauಪ್ರಮುಖರಾಷ್ಟ್ರೀಯBridge collapses Children and villagers crossing the bridge with their lives !!!ಕೆಹೆಡಾ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗುಜರಾತಿನಾದ್ಯಂತ ಸಾರ್ವಜನಿಕರು ಕಡು ಕಷ್ಟದಲ್ಲಿ ಮುಳುಗಿದ್ದಾರೆ. ಅದರಲ್ಲೂ ದೂರದ ಹಳ್ಳಿಗಾಡಿನ ಪ್ರದೇಶ ಖೇಡಾ ಪಟ್ಟಣದಲ್ಲಿ ಅಕ್ಷರ ಸಹ ವರುಣನ ಆರ್ಭಟಕ್ಕೆ ನಲುಗಿ ಹೋಗಿದ್ದಾರೆ. ಇನ್ನು ಖೇಡಾ ಪಟ್ಟಣದಿಂದ ನಗರ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಇದ್ದ ಸೇತುವೆ ಧಾರಾಕಾರ ಮಳೆಗೆ ಹಾನಿಯಾಗಿದ್ದು, ಇದೀಗ ಆ ಕುಸಿದ ಸೇತುವೆ ಮೂಲಕವೇ ಜನ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇತುವೆ ದಾಟುತ್ತಿದ್ದಾರೆ..., ಜೊತೆಗೆ ಶಾಲಾ ಮಕ್ಕಳೂ...Kannada News Portal