ಬೆಂಗಳೂರು :  ಹಲವು ಗೊಂದಲಗಳ ನಡುವೆಯೂ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್​ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಳಗ್ಗೆ 9 ಕ್ಕೆ  ರಾಜಭವನಕ್ಕೆ ಆಗಮಿಸಿದ ಬಿಎಸ್​ವೈ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು, ಶಾಸಕರು, ಮಾಜಿ ಮಂತ್ರಿಗಳ ಸಮ್ಮುಖದಲ್ಲಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣ  ಮಾಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇವರೊಂದಿಗೆ ನಾಲ್ಕೈದು ಮಂದಿ ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ವದಂತಿಗಳಿದ್ದರೂ  ಯಡಿಯೂರಪ್ಪ ಒಬ್ಬರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಾದ ನಂತರ ವಿದಾನಸೌಧಕ್ಕೆ ತೆರಳಿದ ಯಡಿಯೂರಪ್ಪ ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಒಳ ಪ್ರವೇಶಿಸಿದರು. ಇವರೊಂದಿಗೆ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​, ಶಾಸಕರಾದ ಶ್ರೀ ರಾಮುಲು ಸೇರಿದಂತೆ ಹಲವು ಮಂದಿ ಮುಖಂಡರು ಯಡಿಯೂರಪ್ಪರಿಗೆ ಸಾಥ್​ ನೀಡಿದರು. ಸರ್ಕಾರದ ರಚನೆಗೆ ಬಿಜೆಪಿ ಮುಂದಾಗುತ್ತಿದ್ದಂತೆ,ರಾತ್ರಿಯೇ ನಗರಕ್ಕೆ ಆಗಮಿಸಿದ, ಬಿಜೆಪಿ, ಆರ್​ಎಸ್​ಎಸ್​, ಎಬಿವಿಪಿ, ವಿಶ್ವ ಹಿಂದೂ ಪರಿಷತ್​ ಇತರೆ ಹಿಂದೂ ಪರ  ಸಂಘಟನೆಗಳ ಕಾರ್ಯಕರ್ತರು ರಾಜಭವನದಲ್ಲೆ ನೆರೆದಿದ್ದರು.

ರಾಜ್ಯಪಾಲ ವಾಜುಭಾಯಿ ಆರ್​ ವಾಲಾ ಯಡಿಯೂರಪ್ಪನವರಿಗೆ  ಪ್ರತಿಜ್ಞಾ ವಿಧಿ ಭೋದಿಸಿ ನೂತನ ಮುಖ್ಯಮಂತ್ರಿಗೆ ಶುಭಾಶಯ ಕೋರಿದರು. ಹಸಿರು ಶಾಲು ಒದ್ದ ಬಿ.ಎಸ್​. ಯಡಿಯೂರಪ್ಪ ನಗುಮುಖದಿಂದಲೇ ಇದ್ದರು. ತಾವು ಚುನಾವಣಾ ಪ್ರಚಾರದ ವೇಳೆ ಮೇ. 17, 18 ಕ್ಕೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುತ್ತೇನೆ ಎಂದು ಸತತವಾಗಿ ಹೇಳುತ್ತಲೇ ಬಂದರು. ಆದರೆ ಅವರ ಮಾತನ್ನು ನೆರವೇರಿಸಿಕೊಂಡರೂ ಪ್ರಮಾಣ ವಚನ ಸ್ವೀಕರಿಸಿದ ಸ್ಥಳ ಮಾತ್ರ ಬದಲಾವಣೆ ಆಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಹಸ್ರಾರು ಬೆಂಬಲಿಗರ ಸಮ್ಮುಖದಲ್ಲಿ ಪ್ರಮಾಣ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಸರ್ಕಾರದ ರಚನೆಗೆ ಬೇಕಿರುವ ಮ್ಯಾಜಿಕ್​ ನಂ 113 ಕ್ಕೆ ಬಿಜೆಪಿ ತಲುಪದ ಕಾರಣ ಅತಂತ್ರ  ವಿಧಾನಸಭೆ ಸೃಷ್ಟಿಯಾಗಿದೆ. ಒಂದೆಡೆ ಕುಮಾರಸ್ವಾಮಿ, ಪರಮೇಶ್ವರ್​ ಜಂಟಿಯಾಗಿ ಸಮ್ಮಿಶ್ರ ಸರ್ಕಾರದ ರಚನೆಗೆ ಮುಂದಾಗಿದ್ದು ರಾಜ್ಯಪಾಲರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಆದರೆ ರಾಜ್ಯದಲ್ಲಿ  ಅಧಿಕ ಸಂಖ್ಯೆಯಲ್ಲಿ ಶಾಸಕರನ್ನು ಹೊಂದಿರುವ ಬಿಜೆಪಿ ಸರ್ಕಾರ ರಚನೆಗೆ ಮುಂದಾದ ಕಾರಣ ಬಹುಮತ ಸಾಭೀತು ಪಡಿಸಬೇಕು ಎಂಬ ಷರತ್ತಿನೊಂದಿಗೆ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿದ್ದಾರೆ. ಈ ಮಧ್ಯೆ ಬುಧವಾರ ರಾತ್ರಿಯೇ ಕಾಂಗ್ರೆಸ್​ನ ಹೈಕಮಾಂಡ್​ ಸುಪ್ರೀಂ ಕೋರ್ಟ್​ ಮೆಟ್ಟಿಲು ಹತ್ತಿದ್ದು ಇದರೊಂದಿಗೆ ಜೆಡಿಎಸ್​ ಕೂಡ ಕೈ ಜೋಡಿಸಿದೆ.ಬುಧವಾರ ಮಧ್ಯರಾತ್ರಿ 1:45 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ರಾಜ್ಯಪಾಲರು ಸಂವಿಧಾನ ಬದ್ಧವಾಗಿ ನಡೆದುಕೊಂಡಿದ್ದಾರೆ. ಯಡಿಯೂರಪ್ಪನವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಲು ಸಾಧ್ಯವಿಲ್ಲವೆಂದು ಹೇಳಿದೆ.

ಈ ಎಲ್ಲಾ ಗೊಂದಲಗಳಿದ್ದರೂ ಒಲ್ಲದ ಮನಸ್ಸಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/PSX_20180514_174418-1-1024x631.jpghttp://bp9news.com/wp-content/uploads/2018/05/PSX_20180514_174418-1-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು :  ಹಲವು ಗೊಂದಲಗಳ ನಡುವೆಯೂ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್​ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಳಗ್ಗೆ 9 ಕ್ಕೆ  ರಾಜಭವನಕ್ಕೆ ಆಗಮಿಸಿದ ಬಿಎಸ್​ವೈ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು, ಶಾಸಕರು, ಮಾಜಿ ಮಂತ್ರಿಗಳ ಸಮ್ಮುಖದಲ್ಲಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣ  ಮಾಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇವರೊಂದಿಗೆ ನಾಲ್ಕೈದು ಮಂದಿ ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ವದಂತಿಗಳಿದ್ದರೂ  ಯಡಿಯೂರಪ್ಪ...Kannada News Portal