ಬೆಂಗಳೂರು: ಕಲರ್ಫುಲ್ ರಾಜಕಾರಣಿ ರಾಜ್ಯದ 12ನೇ ಮುಖ್ಯಮಂತ್ರಿಯಾಗಿದ್ದ ದಿವಂಗತ ಬಂಗಾರಪ್ಪ ಸೊರಬ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದಿದ್ದರೆ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರದಿಂದ 8 ಬಾರಿ ಸ್ಪರ್ಧಿಸಿ 7 ಬಾರಿ ಜಯಗಳಿಸಿದ್ದು ಈ ಬಾರಿ ಗೆದ್ದರೆ ಬಂಗಾರಪ್ಪನವರ ದಾಖಲೆಯನ್ನು ಮುರಿಯಲಿದ್ದಾರೆ. ಬಂಗಾರಪ್ಪನವರ ಕಾಲದಲ್ಲಿದ್ದ ಚುನಾವಣಾ ಹವಾ ಈ ಕಾಲಕ್ಕೆ ಸಾಕಷ್ಟು ಬದಲಾಗಿದೆ. ಜಾತಿ, ಹಣ, ಪಕ್ಷ ಎಂದೆಲ್ಲಾ ರಾಜಕಾರಣ ಬೆಳೆದು ನಿಂತಿದೆ. ಜನರೂ ಕೂಡ ಇದೇ ತರಹ ಯೋಚಿಸಲಾರಂಭಿಸಿದ್ದಾರೆ. ಆದರೆ ಬಿ.ಎಸ್. ಯಡಿಯೂರಪ್ಪನವರೂ ಕೂಡ ಮುತ್ಸದಿ ರಾಜಕಾರಣಿಯಾಗಿದ್ದು ಬಂಗಾರಪ್ಪನವರಷ್ಟೇ ಅಭಿಮಾನ ಗಳಿಸಿದ್ದಾರೆಂಬುದಕ್ಕೆ ಅವರ ಗೆಲುವುಗಳೇ ಸಾಕ್ಷಿ.

ಇನ್ನೂ ದೇವರಾಜ್ ಅರಸು ತರುವಾಯ ಇಡೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಬಲಿಷ್ಠ ನಾಯಕನಾಗಿ ಬೆಳೆದವರು. ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗಷ್ಟೇ ಅಲ್ಲ ತಮ್ಮ ಪಕ್ಷಕ್ಕೆ ಕೂಡ ನಡುಕ ಹುಟ್ಟಿಸುವಷ್ಟು ರಾಜ್ಯದ ಉದ್ದಗಲಕ್ಕೆ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಕ್ಷೇತ್ರಕ್ಕೆ ಬಾರದೇ ನನ್ನ ಜನ ಗೆಲ್ಲಿಸುತ್ತಾರೆ ಬಿಡ್ರಿ ಎಂದು ಬೀಗುತ್ತಾ ಬಹುಮತದೊಂದಿಗೆ ಆರಿಸಿ ಬರುತ್ತಿದ್ದ ಬಂಗಾರಪ್ಪ ಸತತ ಏಳು ಬಾರಿ ವಿಧಾನಸಭೆ ಪ್ರವೇಶ ಮಾಡಿ ಅಭಿಮಾನಿಗಳಿಂದ ಸೋಲಿಲ್ಲದ ಸರದಾರ ಎಂದು ಕರೆಸಿಕೊಂಡವರು. ಈಗ ಶಿವಮೊಗ್ಗದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ದಾಖಲೆಯನ್ನು ಮುರಿಯುವ ಹವಣಿಕೆಯಲ್ಲಿದ್ದಾರೆ.

ಅಂದು ಮಾಜಿ ಸಿಎಂ ಬಂಗಾರಪ್ಪನವರು 1967ರಿಂದ 1996ರವರೆಗೆ ನಿರಂತರವಾಗಿ ಏಳು ಚುನಾವಣೆ ಎದುರಿಸಿ ಗೆಲುವು ಸಾಧಿಸಿದರು. ಶಿವಮೊಗ್ಗ ಲೋಕಸಭೆಯಿಂದ ನಾಲ್ಕು ಬಾರಿ ಚುನಾಯಿಸಿ ಬಂದಿರುವ ದಾಖಲೆಯೂ ಇದೆ. ಒಟ್ಟು 15 ಚುನಾವಣೆಯಲ್ಲಿ 11 ಬಾರಿ ಜಯಗಳಿಸಿದರು. ಅವರ ಜೀವನದ ಕೊನೆಯ ಸೋಲುಗಳು ಬಂಗಾರಪ್ಪನವರನ್ನು ಜರ್ಜರಿತರನ್ನಾಗಿಸಿದವು. ಶಿಕಾರಿಪುರ ಕ್ಷೇತ್ರದಿಂದ 1983ರಿಂದ ಗೆಲುವಿನ ಓಟ ಕಾಣುತ್ತಿದ್ದ ಯಡಿಯೂರಪ್ಪ 1999ರಲ್ಲಿ ಐದನೇ ಗೆಲುವು ಕಾಣದೇ ಸೋತರು. ಒಟ್ಟು 8 ಚುನಾವಣೆಯಲ್ಲಿ 7 ಬಾರಿ ಗೆದ್ದಿದ್ದಾರೆ. ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ಒಮ್ಮೆ ಗೆಲವು ಕಂಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ಸಾರೆಕೊಪ್ಪದ ಸರದಾರನ ದಾಖಲೆಯನ್ನು ಬಿಎಸ್​​ವೈ ಮುರಿಯಲಿದ್ದಾರೆ.

Please follow and like us:
0
http://bp9news.com/wp-content/uploads/2018/04/bangara-yaddi.jpghttp://bp9news.com/wp-content/uploads/2018/04/bangara-yaddi-150x150.jpgPolitical Bureauಪ್ರಮುಖರಾಜಕೀಯಶಿವಮೊಗ್ಗBS Yeddyurappa achieved the highest score in Bangarappaಬೆಂಗಳೂರು: ಕಲರ್ಫುಲ್ ರಾಜಕಾರಣಿ ರಾಜ್ಯದ 12ನೇ ಮುಖ್ಯಮಂತ್ರಿಯಾಗಿದ್ದ ದಿವಂಗತ ಬಂಗಾರಪ್ಪ ಸೊರಬ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದಿದ್ದರೆ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರದಿಂದ 8 ಬಾರಿ ಸ್ಪರ್ಧಿಸಿ 7 ಬಾರಿ ಜಯಗಳಿಸಿದ್ದು ಈ ಬಾರಿ ಗೆದ್ದರೆ ಬಂಗಾರಪ್ಪನವರ ದಾಖಲೆಯನ್ನು ಮುರಿಯಲಿದ್ದಾರೆ. ಬಂಗಾರಪ್ಪನವರ ಕಾಲದಲ್ಲಿದ್ದ ಚುನಾವಣಾ ಹವಾ ಈ ಕಾಲಕ್ಕೆ ಸಾಕಷ್ಟು ಬದಲಾಗಿದೆ. ಜಾತಿ, ಹಣ, ಪಕ್ಷ ಎಂದೆಲ್ಲಾ ರಾಜಕಾರಣ ಬೆಳೆದು ನಿಂತಿದೆ. ಜನರೂ ಕೂಡ ಇದೇ ತರಹ ಯೋಚಿಸಲಾರಂಭಿಸಿದ್ದಾರೆ....Kannada News Portal