ಬೆಂಗಳೂರು: ಒಂದೆಡೆ ಸರ್ಕಾರ ರಚಿಸಲು ಬಿಜೆಪಿ ಪ್ರಯತ್ನ ಪಟ್ಟಿದ್ದರ ಫಲವಾಗಿ ರಾಜ್ಯಪಾಲರು  ಷರತ್ತುಗಳನ್ನು ವಿಧಿಸಿ, ಸರ್ಕಾರ ರಚಿಸಲು ಆಹ್ವಾನ ನೀಡಿದ್ದರಿಂದ ನಾಳೆ  ಬಿಎಸ್‌ವೈ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ಫಿಕ್ಸ್‌ ಮಾಡಿಕೊಂಡಿದ್ದಾರೆ.

ಇದರ ಅನ್ವಯ ರಾಜ್ಯದ ಮುಖ್ಯಕಾರ್ಯದರ್ಶಿಯಾದ ರತ್ನಪ್ರಭಾ ಅವರಿಗೆ ರಾಜಭವನದಿಂದ ಸೂಚನೆ ರವಾನೆಯಾಗಿದ್ದು,ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಯಾವುದಕ್ಕೂ ಸಿದ್ಧರಾಗಿರಿ ಎಂದು ತಿಳಿಸಲಾಗಿದೆ. ಶಿಷ್ಟಾಚಾರದ ಅನ್ವಯ ರಾಜ್ಯದ ಮುಖ್ಯಕಾರ್ಯದರ್ಶಿಯವರಿಗೆ ಒಂದು ದಿನ ಮುಂಚಿತವಾಗಿ ರಾಜಭವನದಿಂದ ಮಾಹಿತಿ ನೀಡಬೇಕು. ಸಂಜೆಯಾದರೂ ಯಾವುದೇ ಮಾಹಿತಿ ಬರದ ಕಾರಣ, ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ರತ್ನಪ್ರಭ ಅವರು ರಾಜಭವನದಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದರು. ಈ ವಿಷಯ ಹೊರಬೀಳುತ್ತಿದ್ದಂತೆ, ಮೇಲಿನಂತೆ ಸೂಚನೆ  ನೀಡಲಾಗಿದೆ.

Please follow and like us:
0
http://bp9news.com/wp-content/uploads/2018/05/668482-yeddyurappa-1.jpghttp://bp9news.com/wp-content/uploads/2018/05/668482-yeddyurappa-1-150x150.jpgBP9 Bureauಪ್ರಮುಖಬೆಂಗಳೂರು: ಒಂದೆಡೆ ಸರ್ಕಾರ ರಚಿಸಲು ಬಿಜೆಪಿ ಪ್ರಯತ್ನ ಪಟ್ಟಿದ್ದರ ಫಲವಾಗಿ ರಾಜ್ಯಪಾಲರು  ಷರತ್ತುಗಳನ್ನು ವಿಧಿಸಿ, ಸರ್ಕಾರ ರಚಿಸಲು ಆಹ್ವಾನ ನೀಡಿದ್ದರಿಂದ ನಾಳೆ  ಬಿಎಸ್‌ವೈ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ಫಿಕ್ಸ್‌ ಮಾಡಿಕೊಂಡಿದ್ದಾರೆ. ಇದರ ಅನ್ವಯ ರಾಜ್ಯದ ಮುಖ್ಯಕಾರ್ಯದರ್ಶಿಯಾದ ರತ್ನಪ್ರಭಾ ಅವರಿಗೆ ರಾಜಭವನದಿಂದ ಸೂಚನೆ ರವಾನೆಯಾಗಿದ್ದು,ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಯಾವುದಕ್ಕೂ ಸಿದ್ಧರಾಗಿರಿ ಎಂದು ತಿಳಿಸಲಾಗಿದೆ. ಶಿಷ್ಟಾಚಾರದ ಅನ್ವಯ ರಾಜ್ಯದ ಮುಖ್ಯಕಾರ್ಯದರ್ಶಿಯವರಿಗೆ ಒಂದು ದಿನ ಮುಂಚಿತವಾಗಿ ರಾಜಭವನದಿಂದ...Kannada News Portal