ಬೆಂಗಳೂರು : ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಲಾಗಿದೆ. ನಾನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯ ಹುದ್ದೆ ಕಡೆಗೆ ಪ್ರಯತ್ನ ಮುಂದುವರಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಏಕೈಕ ಬಹುಮತ ಉಳ್ಳ ದೊಡ್ಡ ಪಕ್ಷವಾಗಿದ್ದು, ನಮಗೇ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಬಿಎಸ್ವೈ ಮನವಿ ಪತ್ರ ಸಲ್ಲಿಸಿದ್ದಾರೆ.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನನ್ನು ನಮ್ಮ ಪಕ್ಷದ ಎಲ್ಲಾ ಶಾಸಕರು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೀಗ ರಾಜ್ಯಪಾಲರಿಗೆ ನಮ್ಮ ಪಕ್ಷಕ್ಕೆ ಜನರು ಬಹುಮತ ನೀಡಿದ್ದು, ನಮಗೇ ಸರ್ಕಾರ ರಚಿಸಲು ಅವಕಾಶ ಕೇಳೀದ್ದೇನೆ.

ರಾಜ್ಯಪಾಲರು ನಮಗೆ ಆಹ್ವಾನ ನೀಡುತ್ತಾರೆ ಎಂಬ ವಿಶ್ವಾಸ ಇದೆ. ನಮಗೆ ಬೇಕಾದ ಮ್ಯಾಜಿಕ್ ನಂಬರ್ ದೊರಕಲಿದೆ. ನಾನು ಮುಖ್ಯಮಂತ್ರಿಯಾಗಿ ಆಗುತ್ತೇನೆ ಎಂದಿದ್ದಾರೆ.

ಇನ್ನು ಪರ್ತಕರ್ತರು ಯಾವಾಗ ನಿಮ್ಮ ಪ್ರಮಾಣ ವಚನ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಮುಚ್ಚಿಡುವ ವಿಚಾರ ಏನಿದೆ, ರಾಜ್ಯಪಾಲರು ನಮಗೆ ಸರ್ಕಾರ ರಚನೆ ಮಾಡಲು ಕರೆಯುತ್ತಿದ್ದಂತೆ ನಿಮ್ಮ ಮೂಲಕವೇ ಕರ್ನಾಟಕದ ಆರುವರೇ ಕೋಟಿ ಜನರಿಗೆ ತಿಳಿಸ ಬೇಕಿದ್ದು, ರಾಜ್ಯಪಾಲರ ಆಹ್ವಾನ ಬರುತ್ತಿದ್ದಂತೆ ಮುಂದಿನ ನಡೆ ತಿಳಿಸುವುದಾಗಿ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/05/dc-Cover-3v55gebjlq8lap5oa826l3p6m7-20160511064926.Medi_.jpeghttp://bp9news.com/wp-content/uploads/2018/05/dc-Cover-3v55gebjlq8lap5oa826l3p6m7-20160511064926.Medi_-150x150.jpegPolitical Bureauಪ್ರಮುಖರಾಜಕೀಯBSY elected as legislator party leader Appeals to governor to create governmentಬೆಂಗಳೂರು : ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಲಾಗಿದೆ. ನಾನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯ ಹುದ್ದೆ ಕಡೆಗೆ ಪ್ರಯತ್ನ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಏಕೈಕ ಬಹುಮತ ಉಳ್ಳ ದೊಡ್ಡ ಪಕ್ಷವಾಗಿದ್ದು, ನಮಗೇ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಬಿಎಸ್ವೈ ಮನವಿ ಪತ್ರ ಸಲ್ಲಿಸಿದ್ದಾರೆ. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನನ್ನು ನಮ್ಮ ಪಕ್ಷದ ಎಲ್ಲಾ ಶಾಸಕರು ಸರ್ವಾನುಮತದಿಂದ...Kannada News Portal