ಬೆಂಗಳೂರು: ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಸರಿಯಾದ ಪರಿಹಾರ ಕಂಡು ಹಿಡಿಯಬೇಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇದು ಕೇವಲ ನಗರದ ಸಮಸ್ಯೆಯಲ್ಲ, ರಾಜ್ಯದ ಜನತೆ ಮಾನ ಮಾರ್ಯದೆ ಪ್ರಶ್ನೆ.  ಆದ್ದರಿಂದ ಕಸದ ಲಾಭಿಯನ್ನು ಮೆಟ್ಟಿನಿಲ್ಲಲು ದಿಟ್ಟ ಕ್ರಮ ಕೈಗೊಳ್ಳಲಾಗುವುದು ಎಂದು  ಬೆಂಗಳೂುರು ಪ್ರೆಸ್ ಕ್ಲಬ್​ ಮತ್ತು ವರದಿಗಾರರ ಕೂಟ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ವಿಷಯ ತಿಳಿಸಿದರು.

ಬೆಂಗಳೂರಿನ ರಸ್ತೆಗಳಲ್ಲಿ ಒಡಾಡುವಾಗ ಕಸದ ಸಮಸ್ಯೆಯನ್ನು ನಾನೆ ಕಣ್ಣಾರೆ ನೋಡಿದ್ದೇನೆ. ಏನೇ ಆಗಲಿ ಕಸದ ಸಮಸ್ಯೆ ಮತ್ತು ಲಾಬಿಯನ್ನು ಮೆಟ್ಟಿನಿಲ್ಲುವುದಾಗಿ ಹೇಳಿದರು. ಇನ್ನು ಕಾವೇರಿ ವಿಚಾರದಲ್ಲಿ ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿಲ್ಲ, ವಿರೋಧ ಮಾಡುತ್ತಿಲ್ಲ. ಮಂಡಳಿ ರಚನೆ ಮತು ಅದರ ವ್ಯಾಪ್ತಿ ಮತ್ತು ರಾಜ್ಯಗಳ ಅಧಿಕಾರವನ್ನು ಮೊಟಕು ಮಾಡುವ ಕ್ರಮದ ಬಗ್ಗೆ ಮಾತ್ರ ನಮ್ಮ ಆಕ್ಷೇಪವಿದೆ ಇದೆಲ್ಲವನ್ನು ದೆಹಲಿ ಭೇಟಿ ಸಮಯದಲ್ಲಿ ಪಿಎಂ ಮೊದಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ಇನ್ನು ಬಜೆಟ್ ಮಂಡನೆಯ ವಿಚಾರದಲ್ಲಿ ನಿತ್ಯವೂ ಚರ್ಚೆಯಾಗುತ್ತಿದೆ. ಇಲ್ಲ್ಲಿಯವರೆಗೆ ಚುನಾವಣಾ ಮಾದರಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಆಗುತ್ತಿರಲಿಲ್ಲ ಈ ಕಾರಣದಿಂದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನಲೆಯಲ್ಲಿ ಕಾರ್ಯಕ್ರಮಗಳಿಗೆ  ಹಣ ನಿಗದಿ ಮಾಡಿ ಹಣ ಬಿಡುಗಡೆ ಮಾಡಬೇಕಾದರೆ ಹೊಸ ಬಜೆಟ್ ಮಂಡನೆ ಅನಿವಾರ್ಯ ವಾಗಿದೆ ಇದರ ಜೊತೆಗೆ ಬಜೆಟ್ ಮಂಡನೆಯಲ್ಲಿ ಆರ್ಥಿಕ  ವಿಚಾರದಲ್ಲಿ ಅಪಾರ ಅನುಭವ ಪಡೆದಿರುವ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರ ಅನುಭವ ಉಪಯೋಗಮಾಡಿಕೊಳ್ಳುವುದಗಿ ಸಿಎಂ ಕುಮಾರಸ್ವಾಮಿ ಹೇಳಿದರು.

 

 

 

 

 

Please follow and like us:
0
http://bp9news.com/wp-content/uploads/2018/06/666927.jpghttp://bp9news.com/wp-content/uploads/2018/06/666927-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು: ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಸರಿಯಾದ ಪರಿಹಾರ ಕಂಡು ಹಿಡಿಯಬೇಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಕೇವಲ ನಗರದ ಸಮಸ್ಯೆಯಲ್ಲ, ರಾಜ್ಯದ ಜನತೆ ಮಾನ ಮಾರ್ಯದೆ ಪ್ರಶ್ನೆ.  ಆದ್ದರಿಂದ ಕಸದ ಲಾಭಿಯನ್ನು ಮೆಟ್ಟಿನಿಲ್ಲಲು ದಿಟ್ಟ ಕ್ರಮ ಕೈಗೊಳ್ಳಲಾಗುವುದು ಎಂದು  ಬೆಂಗಳೂುರು ಪ್ರೆಸ್ ಕ್ಲಬ್​ ಮತ್ತು ವರದಿಗಾರರ ಕೂಟ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ವಿಷಯ ತಿಳಿಸಿದರು. var domain = (window.location != window.parent.location)? document.referrer...Kannada News Portal