ಬೆಂಗಳೂರು: ಚಾಲಕನೊಬ್ಬ 71 ಲಕ್ಷ ರೂಪಾಯಿಗಳನ್ನ ಎಗರಿಸಿ ಕಾರಿನೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೀದರ್ ತಾಲೂಕಿನ ಮನ್ನಾಕಿಳಿ ಎಂಬಲ್ಲಿ ಸೋಮವಾರ ನಡೆದಿದೆ.ಮನ್ನಾಕಿಳಿಯ ಮಾರುತಿ ಎಂಬಾತನೇ 71 ಲಕ್ಷ ರೂಪಾಯಿಗಳನ್ನ ಎಗರಿಸಿರುವವನು. ಈತ ರಾಜೇಶ್ ಎಂಬಾತನ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ರಾಜೇಶ್ ಸೋಯಾ ಸೀಡ್ ಕಂಪನಿಯೊಂದರ ಮಾಲೀಕನಾಗಿದ್ದಾರೆ. ವ್ಯಾಪಾರ ಸಂಬಂಧ ಹಣವನ್ನ ಮತ್ತೊಂದು ಬ್ಯಾಂಕಿಗೆ ಪಾವತಿಸಲು ಕಾರಿನಲ್ಲಿ ತರಲಾಗಿತ್ತು.

ಈ ಮಧ್ಯೆ ರಾಜೇಶ್ ಕಾರಿನಿಂದ ಇಳಿದು ಬೇರೆ ಕಚೇರಿಗೆ ಹೋದಾಗ ಈತ ಕಾರಿನ ಸಮೇತ ಪರಾರಿಯಾಗಿದ್ದಾನೆ. ರಾಜೇಶ್ ವಾಪಸ್ ಬಂದು ನೋಡಿದಾಗ ಅಲ್ಲಿ ಕಾರು ಇರಲಿಲ್ಲ, ಚಾಲಕನೂ ಇರಲಿಲ್ಲ. ಕೂಡಲೆ ರಾಜೇಶ್ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆ ನಡೆದ ನಂತ್ರ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಆತ ಹೈದರಾಬಾದ್ ನತ್ತ ತೆರಳಿರುವ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/06/1482129924_ozzsxl_demonetization.jpghttp://bp9news.com/wp-content/uploads/2018/06/1482129924_ozzsxl_demonetization-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು: ಚಾಲಕನೊಬ್ಬ 71 ಲಕ್ಷ ರೂಪಾಯಿಗಳನ್ನ ಎಗರಿಸಿ ಕಾರಿನೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೀದರ್ ತಾಲೂಕಿನ ಮನ್ನಾಕಿಳಿ ಎಂಬಲ್ಲಿ ಸೋಮವಾರ ನಡೆದಿದೆ.ಮನ್ನಾಕಿಳಿಯ ಮಾರುತಿ ಎಂಬಾತನೇ 71 ಲಕ್ಷ ರೂಪಾಯಿಗಳನ್ನ ಎಗರಿಸಿರುವವನು. ಈತ ರಾಜೇಶ್ ಎಂಬಾತನ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ರಾಜೇಶ್ ಸೋಯಾ ಸೀಡ್ ಕಂಪನಿಯೊಂದರ ಮಾಲೀಕನಾಗಿದ್ದಾರೆ. ವ್ಯಾಪಾರ ಸಂಬಂಧ ಹಣವನ್ನ ಮತ್ತೊಂದು ಬ್ಯಾಂಕಿಗೆ ಪಾವತಿಸಲು ಕಾರಿನಲ್ಲಿ ತರಲಾಗಿತ್ತು. var domain = (window.location != window.parent.location)? document.referrer...Kannada News Portal