fbpx

ಉತ್ತರ ಕನ್ನಡ - Page 2

ಉತ್ತರ ಕನ್ನಡ

ರಾಮಚಂದ್ರಾಪುರ ಮಠದ ಕೈ ತಪ್ಪಿದ ಗೋಕರ್ಣ : ದೇವಾಲಯವನ್ನ ಮತ್ತೆ ಧಾರ್ಮಿಕ ದತ್ತಿ ಇಲಾಖೆಗೆ ನೀಡಿ ಹೈಕೋರ್ಟ್ ಆದೇಶ!!!

ಉತ್ತರಕನ್ನಡ : ಹೊಸನಗರ ರಾಮಚಂದ್ರಾಪುರ ಮಠಕ್ಕೆ ಸರ್ಕಾರಿ ಆದೇಶದ ಮುಖಾಂತರ ಹಸ್ತಾಂತರಿಸಲ್ಪಟ್ಟಿದ್ದ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯವನ್ನು ಇದೀಗ ಹೈಕೋರ್ಟ್ ರದ್ದು ಪಡಿಸಿ ತೀರ್ಪು ನೀಡಿದೆ. ಇದರಿಂದ ರಾಮಚಂದ್ರಪುರ ಮಠಕ್ಕೆ ಭಾರೀ ಹಿನ್ನಡೆಯಾದಂತಾಗಿದೆ. ಸರ್ಕಾರದಿಂದ ಮಠಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

12 ವರ್ಷದ ಬಾಲಕನ ಮೇಲೆ 18ರ ಯುವಕನ ಲೈಂಗಿಕ ದೌರ್ಜನ್ಯ !!! ಭಟ್ಕಳದಲ್ಲಿ ವಿಚಿತ್ರ ಘಟನೆ !!!

ಭಟ್ಕಳ : 12 ವರ್ಷದ ಬಾಲಕನೊಬ್ಬನ ಮೇಲೆ 18 ವರ್ಷದ ಯುವಕನೊಬ್ಬ ಲೈಂಗಿಕವಾಗಿ ದೌರ್ಜನ್ಯ ಎಸಗಿರುವ ವಿಚಿತ್ರ ಘಟನೆ ಪಟ್ಟಣದ ಗುಡ್‌ಲಕ್‌ ರಸ್ತೆಯ ಎರಡನೇ ಕ್ರಾಸ್ ನಲ್ಲಿ ನಡೆದಿದೆ. ಪಟ್ಟಣದ ಗುಡ್ ಲಕ್‌ ರಸ್ತೆಯ ಎರಡನೇ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ದೊರೆತಿರುವ ಆಯಸ್ಸು ಲೋಕದ ಶ್ರೇಯಸ್ಸಿಗೆ ಬಳಕೆಯಾಗಬೇಕು: ರಾಘವೇಶ್ವರ ಶ್ರೀಗಳು

ಬೆಂಗಳೂರು: ಜನ್ಮದಿನವು ಆತ್ಮಾವಲೋಕನೆಯ ದಿನ, ಪ್ರಪಂಚಕ್ಕೆ ನಾವು ಬಂದ ಉದ್ದೇಶವನ್ನು ನೆನಪಿಸಿಕೊಂಡು, ಆ ಗುರಿಯತ್ತ ನಾವು ಸಾಗುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ದಿನ ಜನ್ಮದಿನ ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವ ಶ್ರೀಗಳು ಹೇಳಿದರು. ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ನಡೆದ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ದಿಢೀರ್​​​​ ಬದಲಾಯ್ತು ರಾಘವೇಶ್ವರ ಶ್ರೀಗಳ‌ ಚಾತುರ್ಮಾಸ ಸ್ಥಳ: ಮಠದ ವಿರೋಧಿಗಳಿಗೆ ಭಕ್ತರ ಮಾಸ್ಟರ್ ಸ್ಟ್ರೋಕ್..?

ಬೆಂಗಳೂರು : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ‌ ಚಾತುರ್ಮಾಸ ಸ್ಥಳ ದಿಢೀರ್​​​ ಬದಲಾಗಿದ್ದು, ಮಠದ ವಿರೋಧಿಗಳಿಗೆ ಶಾಕ್​​ ಆಗಿದ್ದು, ಅಲ್ಲದೆ ಹತಾಶರಾಗಿದ್ದಾರೆ ಎಂದು ಮಠದ ಭಕ್ತವಲಯ ಮಾತನಾಡಿಕೊಳ್ಳುತ್ತಿದೆ. ರಾಘವೇಶ್ವರ ಶ್ರೀಗಳು ಈ ಬಾರಿಯ ಚಾತುರ್ಮಾಸ ವ್ರತವನ್ನ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ದಾಂಡೇಲಿ ಹೋರಾಟಗಾರನ ಬರ್ಬರ ಹತ್ಯೆ !!! ತಾಲೂಕು ಮಾಡಿ ಎಂದು ಹೋರಾಡುತ್ತಿದ್ದ ವಕೀಲ !!!

ಉತ್ತರ ಕನ್ನಡ : ದಾಂಡೇಲಿ ಹೋರಾಟ ಸಮಿತಿ ಅಧ್ಯಕ್ಷ ವಕೀಲ ಅಜಿತ್ ನಾಯ್ಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಳೆದ ರಾತ್ರಿ 11 ಗಂಟೆ ಸಮಯದಲ್ಲಿ ದುಷ್ಕರ್ಮಿಯೊರ್ವ ಅಜಿತ್ ನಾಯ್ಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

 ರಾಘವೇಶ್ವರಶ್ರೀಗಳು ಕ್ಷೇಮವಾಗಿದ್ದಾರೆ: ಭಕ್ತರು ಆತಂಕ ಪಡಬೇಕಾಗಿಲ್ಲ ಎಂದು ವೈದ್ಯರ ಸ್ಪಷ್ಟನೆ!!!

ಬೆಂಗಳೂರು:ಕಳೆದ ಎರಡು ದಿನಗಳ ಹಿಂದೆ ರಾಘವೇಶ್ವರಶ್ರೀಗಳಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಂಡಿದ್ದು, ಸಣ್ಣ ಪುಟ್ಟ ಚಿಕಿತ್ಸೆಗಳ ನಂತರಗುಣಮುಖರಾಗಿದ್ದಾರೆ. ಪೂಜ್ಯರಿಗೆ ವಿಶ್ರಾಂತಿ ಅಗತ್ಯವಾದ್ದರಿಂದ ಚಾತುರ್ಮಾಸ್ಯ ವ್ರತದ ಸ್ಥಳ ಹಾಗೂ ದಿನಾಂಕಗಳನ್ನು ಬದಲಾಗಿಸಲಾಗಿದೆ. ಶ್ರೀಸಂಸ್ಥಾನದವರು ಕ್ಷೇಮವಾಗಿದ್ದು, ಶಿಷ್ಯ ಭಕ್ತರುಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಶ್ರೀಗಳ ಆರೋಗ್ಯದ ನಿಗಾವಹಿಸುವ  ಡಾ. ವೇಣುಗೋಪಾಲ್ ಅವರು ತಿಳಿಸಿದ್ದಾರೆ. ಶ್ರೀಮಠದ ಶಿಷ್ಯ ಭಕ್ತರ ಆಗ್ರಹ, ಹಿರಿಯ ಕಾರ್ಯಕರ್ತರ ವಿಜ್ಞಾಪನೆ ಹಾಗೂ ವೈದ್ಯರ ಸಲಹೆಯನ್ನು ಮನ್ನಿಸಿ; ಪೂಜ್ಯ ಶ್ರೀಸಂಸ್ಥಾನದವರು ಸಿದ್ದಾಪುರದ ಭಾನ್ಕುಳಿ ಮಠದ ಬದಲಾಗಿ ಗಿರಿನಗರದ ಶಾಖಾಮಠದಲ್ಲಿ ಮಠೀಯ ಪದ್ಧತಿಯಂತೆ  ಚಾತುರ್ಮಾಸ್ಯ ವ್ರತದೀಕ್ಷೆಯನ್ನು ಕೈಗೊಳ್ಳುತ್ತಿದ್ದಾರೆ. ಕಿಡ್ನಿ ಸ್ಟೋನ್ ಹೊರತಾಗಿ ಶ್ರೀಗಳಿಗೆ ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರುವುದಿಲ್ಲ. ಈ ಕುರಿತಾಗಿ ಯಾವುದೇ ವದಂತಿಗಳಿಗೆ ಕಿವಿಗೊಡಬೇಕಾದ ಅವಶ್ಯಕತೆ ಇಲ್ಲ, ಶ್ರೀಗಳುಆರೋಗ್ಯದಿಂದಿದ್ದು ಭಕ್ತರು ಆತಂಕ ಪಡಬೇಕಾಗಿಲ್ಲ ಎಂದು ಶ್ರೀಗಳ ಆರೋಗ್ಯದ ನಿಗಾ ವಹಿಸಿರುವ ತಜ್ಞ ವೈದ್ಯಕೀಯ ತಂಡದ ಪರವಾಗಿ ಡಾ. ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಆನಾರೋಗ್ಯ ಹಿನ್ನಲೆ ಭಾನ್ಕುಳಿ ಬದಲು ಬೆಂಗಳೂರಿನಲ್ಲಿ ಚಾತುರ್ಮಾಸ್ಯವ್ರತ ಕೈಗೊಳ್ಳಲು ರಾಘವೇಶ್ವರ ಶ್ರೀ ನಿರ್ಧಾರ!!!

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳ ಬೇಕೆಂದು,  ರಾಮಚಂದ್ರಾಪುರಮಠದ  ರಾಘವೇಶ್ವರ ಶ್ರೀಗಳು ಯೋಚಿಸಿದ್ದರು. ಆದರೆ ಈಗ  ಶಿಷ್ಯರ ಆಗ್ರಹದಂತೆ ಚಾತುರ್ಮಾಸ್ಯ ವ್ರತ ಸ್ಥಳ ಬದಾವಣೆಗೆ ಶ್ರೀಗಳು ನಿರ್ಧರಿಸಿದ್ದು, ಬೆಂಗಳೂರಿನ ಗಿರಿನಗರ ಮಠದಲ್ಲಿ ಈ ಬಾರಿಯ ಚಾತುರ್ಮಾಸ ನಡೆಯಲಿದೆ ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಾಜದ ಹಾಗೂ ಶಿಷ್ಯ ಸಮುದಾಯದ ಪದಾಧಿಕಾರಿಗಳೊಂದಿಗೆ, ಸಮ್ಮುಖ ಸರ್ವಾಧಿಕಾರಿಗಳಾದ  ತಿಮ್ಮಪ್ಪಯ್ಯ ಮಡಿಯಾಲ ರವರು ಹಾಗೂ ಮುಖ್ಯ ನಿರ್ವಹಣಾಧಿಕಾರಿಗಳಾದ  ಕೆ. ಜಿ. ಭಟ್ಟ ರವರು ಶ್ರೀಸಂಸ್ಥಾನದವರನ್ನು ಭೇಟಿ ಮಾಡಿಕಿಡ್ನಿ ಸ್ಟೋನ್ ಗೆ ಸಂಬಂಧಿಸಿದ ಸಣ್ಣ ಪುಟ್ಟ ಚಿಕಿತ್ಸೆಯ ಅವಶ್ಯಕತೆ ಇರುವದರಿಂದಲೂ,  ವಿಶ್ರಾಂತಿಯ ಅಗತ್ಯ ಇರುವದರಿಂದಲೂ  ಚಾತುರ್ಮಾಸ್ಯವನ್ನು ಬೆಂಗಳೂರಿನಲ್ಲಿಯೇ ಕೈಗೊಂಡು, ವಿಶ್ರಾಂತಿಯನ್ನೂ ಪಡೆಯುತ್ತಾ ಗೋಸ್ವರ್ಗದ ಕುರಿತು ಹೆಚ್ಚಿನ ಮಾರ್ಗದರ್ಶನನೀಡಬೇಕೆಂದು ವಿನಂತಿಸಿದರು. ಇವರೆಲ್ಲರ ಒಕ್ಕೊರಲ ವಿನಂತಿಯನ್ನು ಮನ್ನಿಸಿದ ಶ್ರೀಸಂಸ್ಥಾನ ದವರು ಈ ವರ್ಷ ಸಂಕಲ್ಪಿಸಿದ ಗೋ ಸ್ವರ್ಗ ಚಾತುರ್ಮಾಸ್ಯವನ್ನು ಇದೇ ಬರುವ  ಆಷಾಢ ಕೃಷ್ಣ ಚತುರ್ಥಿಯಿಂದ (01-08-2018) ಬೆಂಗಳೂರಿನ ಗಿರಿನಗರ ಮಠದಲ್ಲಿ ಕೈಗೊಳ್ಳುವದಾಗಿ ಸಮ್ಮತಿ ಸೂಚಿಸಿದ್ದಾರೆ. ಎಲ್ಲಾ ಶಿಷ್ಯ ಭಕ್ತ ಸಮಾಜ ಬಾಂಧವರು ಈ ಬದಲಾವಣೆಯನ್ನು ಗಮನಿಸಿ, ಚಾತುರ್ಮಾಸ್ಯದ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಗಿರಿನಗರದ ಶ್ರೀ ರಾಮಾಶ್ರಮಕ್ಕೆ ಆಗಮಿಸಿ, ಶ್ರೀಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಮಠ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಶಿರಸಿ ಬಳಿ ಭೀಕರ ರಸ್ತೆ ಅಘಾತ : ಸ್ಥಳದಲ್ಲೇ ಮೃತ ಪಟ್ಟ ಶಾಲಾ ಬಾಲಕಿ !!!

ಉತ್ತರಕನ್ನಡ : ಸಾರಿಗೆ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಶಿರಸಿ- ಹುಬ್ಬಳ್ಳಿ ರಸ್ತೆಯ ಚಿಪ್​​ಗಿಯಲ್ಲಿ ನಡೆದಿದೆ. ಚಿಪ್​​ಗಿ  ಚೆಕ್ ಪೋಸ್ಟ್ ಘಟನೆ…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಜುಲೈ 27 ರಿಂದ ಬಾನ್ಕುಳಿಯಲ್ಲಿ ರಾಘವೇಶ್ವರ ಶ್ರೀಗಳಿಂದ “ಗೋಸ್ವರ್ಗ ಚಾತುರ್ಮಾಸ” ಆರಂಭ!!!!

  ಉತ್ತರಕನ್ನಡ : ಗೋಸಂರಕ್ಷಣೆಗಾಗಿ ಕಳೆದ ಎರಡು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ರಾಘವೇಶ್ವರಭಾರತೀ ಶ್ರೀಗಳ 25ನೇ ಚಾತುರ್ಮಾಸ್ಯ ವ್ರತ ಈ ಬಾರಿ “ಗೋಸ್ವರ್ಗ ಚಾತುರ್ಮಾಸ್ಯ”ವಾಗಿ ಆಚರಿಸಲ್ಪಡುತ್ತಿದ್ದು, ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆಯವರೆಗೆ (ಜುಲೈ 27 ರಿಂದ ಸೆಪ್ಟೆಂಬರ್ 25ರವರೆಗೆ)…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಶಿರಸಿಯಲ್ಲಿ ಪಶ್ಚಿಮಘಟ್ಟ ಉಳಿಸಿ ಸಮಾವೇಶ!!!

ಉತ್ತರ ಕನ್ನಡ: ಶಿರಸಿಯ ಲಯನ್ಸ್ ಸಭಾಭವನದಲ್ಲಿ ನಡೆಯುತ್ತಿರುವ  ಪಶ್ಚಿಮಘಟ್ಟ ಉಳಿಸಿ ಸಮಾವೇಶವನ್ನ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಪರಿಸರ ಕಾನೂನು ತಜ್ಞರಾದ ಪ್ರೊ. ಎಂ ಕೆ ರಮೇಶ ಅವರು ಕಾರ್ಯಕ್ರಮವನ್ನ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಶ್ಚಿಮಘಟ್ಟ ಉಳಿಕೆಗೆ…
ಹೆಚ್ಚಿನ ಸುದ್ದಿಗಾಗಿ...