fbpx

ಆಧ್ಯಾತ್ಮ - Page 2

ಬೆಂಗಳೂರು

ಹವ್ಯಕ ಮಹಾಸಭೆಯಲ್ಲಿ 75ನೇ ವರ್ಷದ ಸಂಸ್ಥಾಪನೋತ್ಸವ..!

ಬೆಂಗಳೂರು : ಬೆಂಗಳೂರಿನ ಅಖಿಲ ಹವ್ಯಕ ಮಹಾಸಭೆಯ 75ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ "ಹವ್ಯಕ ವಿಭೂಷಣ" ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಂಜುನಾಥ ಭಾಗವತರು, ಪ್ರಶಸ್ತಿ ಬಂದಾಗ ಹಮ್ಮು ಪಡಬಾರದು,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

 ಗೋಕಳ್ಳತನ ವಿರುದ್ಧ ಪ್ರತಿಭಟನೆಗೆ ಗೋಪರಿವಾರ ಬೆಂಬಲ : ಯುವಾ ಬ್ರಿಗೇಡ್​​​ನಿಂದ  ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ..!

ಮಂಗಳೂರು:ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ ವಿರೋಧಿಸಿ, ಗೋಶಾಲೆಯ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ, ಹಲ್ಲೆ ಮಾಡಿಗೋವುಗಳನ್ನು ದರೋಡೆ ಮಾಡುವ ಗೋಕಳ್ಳರ ವಿರುದ್ಧ ಆಡಳಿತ ವ್ಯವಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯುವಾ ಬ್ರಿಗೇಡ್ ಕರೆಕೊಟ್ಟಿರುವಒಂದು ದಿನದ ಸಾಂಕೇತಿಕ ಉಪವಾಸಕ್ಕೆ ಭಾರತೀಯ ಗೋಪರಿವಾರ ಬೆಂಬಲ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದೆ ಮಂಗಳೂರು ಸಮೀಪ ಕೈರಂಗಳದ ಗೋಶಾಲೆಗೆ ನುಗ್ಗಿ ಅಲ್ಲಿನ ಕಾರ್ಯಕರ್ತರಿಗೆ ತಲವಾರು ತೋರಿಸಿ ಬೆದರಿಸಿ ಗೋವನ್ನು ಕದ್ದೊಯ್ದಿದ್ದನ್ನುವಿರೋಧಿಸಿ, ದರೋಡೆಕೋರರನ್ನು ಬಂಧಿಸುವಂತೆ ಆಗ್ರಹಿಸಿ ಗೋಶಾಲೆಯ ಮುಖ್ಯಸ್ಥ ರಾಜಾರಾಮ್ ಭಟ್ ಆಮರಣಾಂತ ಉಪವಾಸ ಕೈಗೊಂಡಿದ್ದರು. ಈಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು, ರೈತರ ಜೀವನಕ್ಕೆ ಧಕ್ಕೆ ತರುತ್ತಿರು  ಗೋಕಳ್ಳರಇಂತಹ ಕ್ರಮದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದರು‌. ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯದ ಯೋಜಕರೂ ಆಗಿರುವ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದ ಯುವಾ ಬ್ರಿಗೇಡ್ ರಾಜ್ಯಾದ್ಯಂತಕೈಗೊಂಡಿರುವ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸುತ್ತದೆ ಹಾಗೂ ಗೋರಕ್ಷಣೆ ಕುರಿತಾದ ಈ ಹೋರಾಟಕ್ಕಾಗಿ ಅವರನ್ನು ಅಭಿನಂದಿಸುತ್ತದೆಎಂದು ಭಾರತೀಯ ಗೋಪರಿವಾರದ ಕರ್ನಾಟಕ ರಾಜ್ಯಾಧ್ಯಕ್ಷ ಗಂವ್ಹಾರದ ತ್ರಿವಿಕ್ರಾಮನಂದ ಮಠದ ಪೂಜ್ಯ ಪಾಂಡುರಂಗ ಮಹಾರಾಜ್ ಅವರು ಘೋಷಿಸಿದರು. ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭಾನ್ಕುಳಿಯಲ್ಲಿನ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಮಾತನಾಡುತ್ತಾ, ಗೋವುಗಳುನಮಗೆಲ್ಲರಿಗೂ ಪೂಜನೀಯ ಸ್ಥಾನದಲ್ಲಿದೆ ಮಾತ್ರವಲ್ಲ, ಅದು ರೈತನ ಬದುಕು, ಗೋವುಗಳ ಕೊಡುವ ಹಾಲು, ಗೋಮೂತ್ರ ಸಗಣಿಗಳಿಂದ ರೈತ ಜೀವನಕಟ್ಟಿಕೊಳ್ಳುತ್ತಾನೆ. ಗೋಶಾಲೆಗಳಿಂದ ಗೋವುಗಳನ್ನು ಕಳ್ಳತನ ಮಾಡುವ ಮೂಲಕ ರೈತನ ಜೀವನವನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಬಾರದು ಎಂದರು.ಕಣ್ಮುಂದೆ ಅವ್ಯಾಹತವಾಗಿ ಗೋಹತ್ಯೆ, ಗೋದರೋಡೆ, ಗೋಕಳ್ಳರ ಅಟ್ಟಹಾಸ ನಡೆಯುತ್ತಿದ್ದರೂ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ,ಉದ್ದೇಶಪೂರ್ವಕವಾಗಿ ಅಪರಾಧಿಗಳನ್ನು ಬಂಧಿಸದೆ, ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಈ ಕ್ರಮವನ್ನು ಭಾರತೀಯಗೋಪರಿವಾರ ಖಂಡಿಸುತ್ತದೆ. ಸರ್ಕಾರ ಗೋಕಳ್ಳರ ವಿರುದ್ಧ ಕಠಿಣ‌ ಕ್ರಮ ಜರುಗಿಸಿ ಅಮಾಯಕ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಭಾರತೀಯ ಗೋಪರಿವಾರದ ಕಾರ್ಯದರ್ಶಿ ಮಧು ಗೋಮತಿ, ಸಹಕಾರ್ಯದರ್ಶಿ ಶಿಶಿರ ಹೆಗಡೆ, ಸಂಯೋಜಕರಾದ ವಿದ್ವಾನ್ ಜಗದೀಶ್ ಶರ್ಮ,ಕರ್ನಾಟಕ ರಾಜ್ಯ ಗೋಪರಿವಾರದ ಪ್ರಧಾನ ಕಾರ್ಯದರ್ಶಿ ಡಾ|| ವೈ.ವಿ.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಕಾರ್ಯಾಲಯಕಾರ್ಯದರ್ಶಿ ಡಾ|| ರವಿ ಉಪಸ್ಥಿತಿರಿದ್ದರು. ಶ್ರೀ ರಾಮಚಂದ್ರಾಪುರ ಮಠದ ಕಗ್ಗಲಿಪುರ, ಮಾಲೂರು, ಮುಳಿಯ, ಬಜಕೂಡ್ಲು, ಮಾಣಿಮಠ ಗೋಶಾಲೆಗಳಲ್ಲಿ ಕೂಡಾ ಉಪವಾಸ ಸತ್ಯಾಗ್ರಹ ನಡೆಸಲಾಯಿತು.  ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಉಪವಾಸ ನಡೆಸಲಾಯಿತು.  
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಹವ್ಯಕ ಮಹಾಸಭೆ 75ನೇ ವರ್ಷದ ಸಂಸ್ಥಾಪನೋತ್ಸವ : 15ಕ್ಕೆ ವಾರ್ಷಿಕ ವಿಶೇಷ ಹವ್ಯಕ ಪ್ರಶಸ್ತಿ ಪುರಸ್ಕಾರ..!

ಬೆಂಗಳೂರು:  ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಅಖಿಲ ಹವ್ಯಕ ಮಹಾಸಭೆ 75ನೇ ವರ್ಷದ ಸಂಸ್ಥಾಪನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ದಿನಾಂಕ 15/04/2018 ಭಾನುವಾರ ಸಂಜೆ ೪.೦೦ ಗಂಟೆಗೆ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಸ್ಥಾಪನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಭೂಸ್ವರ್ಗದಲ್ಲೊಂದು ‘ಗೋಸ್ವರ್ಗ’ : ಇದು ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ: ಮೇ 27ಕ್ಕೆ ಲೋಕಾರ್ಪಣೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶ್ರೀರಾಮದೇವ ಭಾನ್ಕುಳಿ ಮಠದ ಪರಿಸರದಲ್ಲಿ ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ, ಭೂಸ್ವರ್ಗದಲ್ಲಿ "ಗೋಸ್ವರ್ಗ"ದ ಬಗ್ಗೆ  ಶ್ರೀರಾಮಚಂದ್ರಾಪುರಮಠದ ಶಾಖಾಮಠ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಗದ್ಗುರು ಶಂಕರಾಚಾರ್ಯ  ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ನಾಗಪುರದ ಗೋವಿಜ್ಞಾನ ಅನುಸಂಧಾನ ಕೇಂದ್ರದಲ್ಲಿ 2 ದಿನಗಳ ರಾಷ್ಟ್ರೀಯ ಚಿಂತನಾ ಬೈಠಕ್ : ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ  ರಾಷ್ಟ್ರಮಟ್ಟದ ಸಂಯೋಜನಾ ಸಮಿತಿ..!

ನಾಗಪುರ:  ಗೋವಿಜ್ಞಾನ ಅನುಸಂಧಾನ ಕೇಂದ್ರದಲ್ಲಿ ಎರಡು ದಿನಗಳ ರಾಷ್ಟ್ರೀಯ ಚಿಂತನಾ ಬೈಠಕ್ ಇಂದು ಹಾಗೂ ನಾಳೆ ( ಏ. 8-9) ನಡೆಯುತ್ತಿದ್ದು,  ರಾಷ್ಟ್ರೀಯ ಚಿಂತನಾ ಬೈಠಕ್'ಅನ್ನು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದರು. ರಾಷ್ಟ್ರೀಯ ಚಿಂತನಾ ಬೈಠಕ್'ನಲ್ಲಿ ಮೊದಲದಿನವಾದ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

2ನೇ ವಿಶ್ವಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವಕ್ಕೆ ಹಸಿರುನಿಶಾನೆ : ಚಾಲನೆಗೊಂಡ 21 ವಿವಿಧ ಹವ್ಯಕ ವೇದಿಕೆ..!

ಬೆಂಗಳೂರು : ಹಿಂದೂ ಧರ್ಮದ ರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಸಮಾಜಕ್ಕೆ ಇದೆ. ಆದರೆ ಆಧುನಿಕತೆಯ ಪರಿಣಾಮವಾಗಿ ನಾವು ನಮ್ಮ ಸಂಸ್ಕೃತಿಯನ್ನು ಬಿಡುತ್ತಿರುವುದು ಖೇದಕರ ವಿಚಾರವಾಗಿದೆ. ಸಮಾಜದ ಸಮಸ್ಯೆಗಳಿಗೆ ನಾವೆಲ್ಲರೂ ಕಾರಣರಾಗಿದ್ದು, ನಾವು ಗಂಭೀರವಾಗಿ ಚಿಂತಿಸಬೇಕಾದ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಕಾಂಚಿ ಕಾಮಕೋಟಿ ಮಠಕ್ಕೆ ರಾಘವೇಶ್ವರ ಶ್ರೀಗಳ ಭೇಟಿ: ವಿಜಯೇಂದ್ರಸರಸ್ವತಿ ಶ್ರೀಗಳೊಂದಿಗೆ ಚರ್ಚೆ..!

ಬೆಂಗಳೂರು:  ಕಾಂಚಿ ಕಾಮಕೋಟಿ ಶಂಕರ ಪೀಠದ ಬ್ರಹ್ಮೈಕ್ಯ ಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಗಳ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಗೋಕರ್ಣ ಮಂಡಲಾಧೀಶ್ವರ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಕಾಂಚಿ ಕಾಮಕೋಟಿಗೆ ಭೇಟಿ ನೀಡಿ ನಡೆಯುತ್ತಿದ್ದ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ರಾಘವೇಶ್ವರ ಶ್ರೀಗಳ ಸಂಕಲ್ಪದ ಜಗತ್ತಿನಲ್ಲೇ ವಿಶಿಷ್ಟ ಗೋಶಾಲೆ ‘ಗೋಸ್ವರ್ಗ’ ಕ್ಕೆ ಶಂಕುಸ್ಥಾಪನೆ..!

ಉತ್ತರಕನ್ನಡ : ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಶ್ರೀಗಳ ಸಂಕಲ್ಪದ ಮಲೆನಾಡುಗಿಡ್ಡ ಗೊತಳಿಯ ಸಂರಕ್ಷಣೆ, ಸಂವರ್ಧನೆಯ ಮಹಾ ಉದ್ದೇಶದ, ಸಹಸ್ರ ಗೋವುಗಳ ರಕ್ಷಣೆ - ಗೋವು ಲಕ್ಷ್ಮೀ ಎಂಬ ಪರಿಕಲ್ಪನೆಯ, ಮಾದರಿಯಾದ ಹಾಗೂ ವಿಶಿಷ್ಟವಾದ ಗೋಶಾಲೆ…
ಹೆಚ್ಚಿನ ಸುದ್ದಿಗಾಗಿ...
ಆಧ್ಯಾತ್ಮ

ಗೋವುಗಳಿಲ್ಲದೆ ಮನೆಗೂ ಮಠಕ್ಕೂ ಶೋಭೆ ಇಲ್ಲ : ಶ್ರೀರಾಘವೇಶ್ವರಭಾರತೀ ಶ್ರೀಗಳು

ಬೆಂಗಳೂರು: ಗೋವುಗಳಿಲ್ಲದ ಗೋಪಾಲರಿಗೆ ಶೋಭೆ ಇಲ್ಲ, ಗೋಪಾಲನಿಲ್ಲದೆ ಗೋವುಗಳಿಗೂ ಶೋಭೆ ಇಲ್ಲ ಅಂತಯೇ ಗೋವುಗಳಿಲ್ಲದೆ ಮನೆಗೂ ಮಠಕ್ಕೂ ಶೋಭೆ ಇಲ್ಲ, ಮಠವಿಲ್ಲದೆ ಸಮಾಜಕ್ಕೆ ಶೋಭೆ ಇಲ್ಲ ಹೀಗೆ ಗೋವು ಎಲ್ಲ ಕಡೆಗಳಲ್ಲಿಯೂ ಶೋಭಿತ ಅಗತ್ಯವಿರುವ ತಾಯಿ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಜಗತ್ತಿಗೇ ಮೌಲ್ಯವರ್ಧಿತ ತೆರಿಗೆ ಸೇವೆಗಳನ್ನು ಕೊಡಬಹುದಾದ ಕೌಶಲ್ಯ ಭಾರತದಲ್ಲಿದೆ…!

ಬೆಂಗಳೂರು: ನಮ್ಮ ಕೌಶಲ್ಯವನ್ನು ಸರಿಯಾಗಿ ಬಳಸಿಕೊಂಡರೆ ಜಗತ್ತಿಗೇ ಮೌಲ್ಯವರ್ಧಿತ ತೆರಿಗೆ ಸೇವೆಗಳನ್ನು ಕೊಡಬಹುದಾದ ಸಾಧ್ಯತೆಗಳಿವೆ. ಯುವ ಜನಾಂಗ ಹೊಸ ಹೊಸ ಅವಕಾಶಗಳನ್ನು ಹುಡುಕಿ ಮುನ್ನುಗ್ಗಬೇಕಿದೆ ಎಂದು ಸಿಎ ಇನ್ಸ್ಟಿಟೂಟಿನ ಕೇಂದ್ರೀಯ ಐಡಿಟಿ ಕಮಿಟಿಯ  ಛೇರ್ಮನ್ ಸಿಎ. ಮಧುಕರ್ ಹಿರೆಗಂಗೆ ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...