ಬೆಂಗಳೂರು: ಸುಪ್ರಿಂ ಕೋರ್ಟ್ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸ್ಕೀಂ ಕರುಡು ಸಿದ್ಧ ಪಡಿಸಿ ಸಲ್ಲಿಸುವಂತೆ ಗಡುವು ನೀಡಿತ್ತು . ಈ ಹಿನ್ನೆಲೆಯಲ್ಲಿ ಸೋಮವಾರ ಅಟಾರ್ನಿ ಜನರಲ್‌ ಕೆ. ಕೆ ವೇಣುಗೋಪಾಲ್ ಸುಪ್ರಿಂ ಕೋರ್ಟ್ ನ್ಯಾಯ ಮೂರ್ತಿಗಳ ಪೀಠದ ಮುಂದೆ ಇಲಾಖೆ ಸಿದ್ಧ ಪಡಿಸಿದ್ಧ 14 ಪುಟಗಳ ಸ್ಕೀಂ ಕರಡನ್ನು ಸಲ್ಲಿಸಿದ್ದಾರೆ.

ಕರ್ನಾಟಕ , ಪುದುಚೇರಿ, ತಮಿಳು ನಾಡು , ಕೇರಳ ರಾಜ್ಯಗಳಿಗೆ ಯಾವ ಯಾವ ಪ್ರಮಾಣದಲ್ಲಿ ಕಾವೇರಿ ನದಿ ನೀರು ಹಂಚಿಕೆಯಾಗ ಬೇಕು ಎಂಬುದನ್ನು ನಿಗಧಿ ಮಾಡುವ ಸಲುವಾಗಿ ಒಂದು ಸಮಿತಿ ಅಂದ್ರೆ ಸ್ಕೀಂ ಅನ್ನು ರಚಿಸಿ ಎಂದೇಳಿದ್ದ ನ್ಯಾಯಾಲಯದ ಮುಂದೆ ಇದೀಗ ಸ್ಕೀಂ ಕರಡು ಸಲ್ಲಿಕೆ ಆಗಿದೆ.

ಈ ಕರಡಿನಲ್ಲಿ ಐವರು ಶಾಶ್ವತ ಸದಸ್ಯರಿಗೆ, ನಾಲ್ವರು ತಾತ್ಕಾಲಿಕ ಸದಸ್ಯರ ನೇಮಕಕ್ಕೆ ಶಿಫಾರಸ್ಸು ಮಾಡಿದೆ. ಇದೀಗ ಈ ಕರಡನ್ನು ಪೂರ್ಣವಾಗಿ ಅಧ್ಯಯನ ಮಾಡಿ ವಿಚಾರಣೆ ನಡೆಸಿ ನಂತರ ತೀರ್ಪು ನೀಡುವುದಾಗಿ ನ್ಯಾಯಮೂರ್ತಿಗಳ ಪೀಠ ತಿಳಿಸಿದ್ದು, ವಿಚಾರಣೆಯನ್ನು ಮುಂದೂಡಿದೆ.

Please follow and like us:
0
http://bp9news.com/wp-content/uploads/2018/05/ಕಾವೇರಿ-1-1.jpghttp://bp9news.com/wp-content/uploads/2018/05/ಕಾವೇರಿ-1-1-150x150.jpgBP9 Bureauಪ್ರಮುಖರಾಷ್ಟ್ರೀಯಬೆಂಗಳೂರು: ಸುಪ್ರಿಂ ಕೋರ್ಟ್ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸ್ಕೀಂ ಕರುಡು ಸಿದ್ಧ ಪಡಿಸಿ ಸಲ್ಲಿಸುವಂತೆ ಗಡುವು ನೀಡಿತ್ತು . ಈ ಹಿನ್ನೆಲೆಯಲ್ಲಿ ಸೋಮವಾರ ಅಟಾರ್ನಿ ಜನರಲ್‌ ಕೆ. ಕೆ ವೇಣುಗೋಪಾಲ್ ಸುಪ್ರಿಂ ಕೋರ್ಟ್ ನ್ಯಾಯ ಮೂರ್ತಿಗಳ ಪೀಠದ ಮುಂದೆ ಇಲಾಖೆ ಸಿದ್ಧ ಪಡಿಸಿದ್ಧ 14 ಪುಟಗಳ ಸ್ಕೀಂ ಕರಡನ್ನು ಸಲ್ಲಿಸಿದ್ದಾರೆ. ಕರ್ನಾಟಕ , ಪುದುಚೇರಿ, ತಮಿಳು ನಾಡು , ಕೇರಳ ರಾಜ್ಯಗಳಿಗೆ ಯಾವ ಯಾವ...Kannada News Portal