ಬೆಂಗಳೂರು: ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ವಿಧಾನಸೌಧದಲ್ಲಿ ಓಡಾಡುವುದು, ರಾಜಕಾರಣಿಗಳ ಹಿಂದೆ ಸುತ್ತುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

ಬೇರೆ ಬೇರೆ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯಗಳ ಕುಲಸಚಿವರು ಸರ್ಕಾರಿ ವಾಹನಗಳಲ್ಲಿ ಬೆಂಗಳೂರಿಗೆ ಬರುವುದು, ರಾಜಕಾರಣಿಗಳ ಹಿಂದೆ ಸುತ್ತುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು. ‘ಅಧಿಕೃತ ಕಾರ್ಯಕ್ರಮ ಅಥವಾ ಅಧಿಕೃತ ಆಹ್ವಾನವಿಲ್ಲದೆ ಯಾವುದೇ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಕುಲಸಚಿವರು ವಿಧಾನಸೌಧಕ್ಕೆ ಬರದಂತೆ ತಡೆಯಲು ಆದೇಶ ಹೊರಡಿಸಲಾಗುವುದು’ ಎಂದರು.

‘ತುರ್ತಾಗಿ ವಿಧಾನಸೌಧಕ್ಕೆ ಬರಬೇಕಾದರೆ ಹಾಗೂ ಜಿಲ್ಲೆಗಳಿಗೆ ಹೋಗಬೇಕಾದರೂ ಅವರು ಇಲಾಖೆಯ ಅನುಮತಿ ಪಡೆಯಬೇಕು’ ಎಂದು ಅವರು ಹೇಳಿದರು.

‘ಕುಲಪತಿ ಹಾಗೂ ಕುಲಸಚಿವರ ಹಾಜರಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸರ್ಕಾರಿ ವಾಹನ ಬಳಸುವ ಕುರಿತು ಚಲನವಲನ (ಮೂವ್‌ಮೆಂಟ್‌) ಪುಸ್ತಕದಲ್ಲಿ ನಮೂದಿಸುವಂತೆ ಆದೇಶದಲ್ಲಿ ನಿರ್ಬಂಧಿಸಲಾಗುವುದು. ದುರ್ಬಳಕೆ ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಅವರು ಎಚ್ಚರಿಸಿದರು.

‘ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದ ಅಧಿಕಾರ ರಾಜ್ಯಪಾಲರಿಗಿದೆ. ಆದರೆ ನೇಮಕಾತಿಯ ಕಡತಗಳನ್ನು ಇಲಾಖೆ ಗಮನಕ್ಕೆ ತಾರದೇ ರಾಜಭವನಕ್ಕೆ ರವಾನಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

Please follow and like us:
0
http://bp9news.com/wp-content/uploads/2018/09/gtd.jpghttp://bp9news.com/wp-content/uploads/2018/09/gtd-150x150.jpgPolitical Bureauಪ್ರಮುಖರಾಜಕೀಯ'Chancellors,do not step into the legislature': Minister GTDಬೆಂಗಳೂರು: ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ವಿಧಾನಸೌಧದಲ್ಲಿ ಓಡಾಡುವುದು, ರಾಜಕಾರಣಿಗಳ ಹಿಂದೆ ಸುತ್ತುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು. ಬೇರೆ ಬೇರೆ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯಗಳ ಕುಲಸಚಿವರು ಸರ್ಕಾರಿ ವಾಹನಗಳಲ್ಲಿ ಬೆಂಗಳೂರಿಗೆ ಬರುವುದು, ರಾಜಕಾರಣಿಗಳ ಹಿಂದೆ ಸುತ್ತುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು. ‘ಅಧಿಕೃತ ಕಾರ್ಯಕ್ರಮ ಅಥವಾ ಅಧಿಕೃತ ಆಹ್ವಾನವಿಲ್ಲದೆ ಯಾವುದೇ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಕುಲಸಚಿವರು ವಿಧಾನಸೌಧಕ್ಕೆ ಬರದಂತೆ ತಡೆಯಲು...Kannada News Portal