ಸ್ಯಾಂಡಲ್​​ ​ವುಡ್​ನ ರಾಕಿಂಗ್​ ಸ್ಟಾರ್​ ಯಶ್​  ಕೊಲೆಗೆ ಸುಪಾರಿ ವಿಚಾರವಾಗಿ ಸ್ಫೋಟಕ ಮಾಹಿತಿಯೊಂದು ಹರಿದಾಡುತ್ತಿದೆ. 2 ವರ್ಷಗಳ ಹಿಂದೆ  ಯಶ್​ ಚಲಿಸುತ್ತಿದ್ದ  ಕಾರಿನ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಬಗ್ಗೆ ನಟ ಯಶ್​ಕೂಡ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದರು. ಅದಾದ ನಂತರ ಯಶ್​ ಮೇಲೆ ಕೊಲೆ ಸ್ಕೆಚ್ಚು ..? ಹತ್ಯೆ ಸುಪಾರಿ ಕೊಟ್ಟಿದ್ದಾರಾ…? ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದವು.ಯಶ್​ ಪೊಲೀಸರನ್ನು ಭೇಟಿಯಾಗಿದ್ದೂ ನಿಜ. ಆದರೆ ಹತ್ಯೆ ಬಗ್ಗೆ ಯಾವ ಅನುಮಾನವನ್ನು ವ್ಯಕ್ತಪಡಿಸಿರಲಿಲ್ಲ.

ಈ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದರು ನಟ. ಅಲ್ಲದೇ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಯಶ್​ ಸುಮ್ಮನಾಗಿಬಿಟ್ಟಿದ್ದರು. ಇನ್ನು ಸಿಸಿಬಿಯ ಹೆಚ್ಚುವರಿ ಪೊಲೀಸ್​ ಕಮಿಷನರ್​ ಈ ಸಂಬಂಧ ನಮಗೆ ಯಾವುದೇ ಸುಳಿವು ದೊರೆತಿಲ್ಲ ಎಂದಿದ್ರು. ಇನ್ನು ನನ್ನ ಹತ್ಯೆಗೆ ಸ್ಕೆಚ್ಚು ನಡೆದಿದೆ ಎನ್ನುವುದಾದರೇ ನಾನು ಖಂಡಿಸುತ್ತೇನೆ ಎಂದಷ್ಟೇ ಹೇಳಿದ್ದಾರೆ. ಪೊಲೀಸರಿಂದ ಯಾವುದೇ ಮಾಹಿತಿ ಬಾರದ ಕಾರಣ ನಾನು ಯಾವುದೇ ಸ್ಪಷ್ಟನೆ ಕೊಡುವುದಿಲ್ಲ ಎಂದಿದ್ದಾರೆ.

ಇತ್ತೀಚೆಗೆ   ರೌಡಿ ಸೈಕಲ್​ ರವಿ  ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ  ಹಾಸ್ಯ ಕಲಾವಿದ ಸಾಧು ಕೋಕಿಲ ಅವರನ್ನು ವಿಚಾರಣೆ ನಡೆಸಲಾಗಿದೆ. ಸಾಧು ಮೊಬೈಲ್​ನಿಂದ  ಸೈಕಲ್​ ರವಿ ಫೋನ್​ಗೆ  ಹತ್ತಾರು ಬಾರಿ ಕರೆ ಹೋಗಿದೆ ಎಂಬ ವಿಚಾರಕ್ಕೆ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸಾಧು ಈ ಬಗ್ಗೆ  ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸದ್ಯ ಈ  ವಿಚಾರಣೆಯ ಸಂದರ್ಭದಲ್ಲಿ ಸೈಕಲ್​ ರವಿ ನಟ ಯಶ್ ​ಅವರ ಕೊಲೆ ಸ್ಕೆಚ್​ ನಡೆಸಲಾಗಿತ್ತು. ಇನ್ನೊಬ್ಬ ರೌಡಿ ಕೋದಂಡನ ಜೊತೆ ಸೇರಿ ಯಶ್​ ಹತ್ಯೆ ಸುಪಾರಿಯನ್ನು  ಒಪ್ಪಿಕೊಂಡಿದ್ದೆವು. ಕುಡಿದ ಅಮಲಿನಲ್ಲಿ ಕೆಲ ರೌಡಿಗಳು ಯಶ್​ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಎಂಬ ವಿಚಾರವನ್ನು ಬಾಯಿಬಿಟ್ಟಿದ್ದಾನೆ ಎಂಬುದು ಸದ್ಯ ಹರಿದಾಡುತ್ತಿರುವ ಸ್ಫೋಟಕ ಮಾಹಿತಿ. ಈ ಬಗ್ಗೆ ಪೊಲೀಸರಾಗಲೀ ಅಥವಾ ಯಶ್​ ಆಗಲೀ ಯಾವುದೇ  ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಸುಪಾರಿ  ಸತ್ಯವೋ, ಅಥವಾ ಸುಳ್ಳೋ ಎಂಬುದು ಕೂಡ ಸ್ಪಷ್ಟವಾಗಿಲ್ಲ. ವಿಚಾರಣೆಯಲ್ಲಿ ಯಶ್​ ಬಗ್ಗೆ ರೌಡಿ ರವಿ ಮಾತನಾಡಿದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಒಟ್ಟಾರೆ ಯಶ್​ ಅವರ ಕಾರಿನ ಮೇಲೆ 2 ವರ್ಷಗಳ ಹಿಂದೆ ಕಲ್ಲು ತೂರಾಟ ನಡೆಸಿದ್ದಂತೂ ನಿಜ. ಮಾಧ್ಯಮಗಳಲ್ಲಿ ಭಿತ್ತರವಾದ ಹತ್ಯೆ ಸುಪಾರಿ ವರದಿ ನೋಡಿ ಸ್ವತಃ ತಾವೇ ಮೌಖಿಕವಾಗಿ ಯಶ್​ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ರೌಡಿ ರವಿ ಬಾಯಿಬಿಟ್ಟ ಎನ್ನಲಾಗುತ್ತಿರುವ ರೌಡಿ ಕೋದಂಡ ಎಂಬುವವನು ಸದ್ಯ ಕಣ್ಮರೆಯಾಗಿದ್ದೂ, ಈ ಬಗ್ಗೆ ಪೊಲೀಸರೇ ಸ್ವತಃ ಮಾಹಿತಿ ನೀಡಬೇಕಾಗಿದೆ.

Please follow and like us:
0
http://bp9news.com/wp-content/uploads/2018/07/Odtl_CV_400x400-1.jpghttp://bp9news.com/wp-content/uploads/2018/07/Odtl_CV_400x400-1-150x150.jpgBP9 Bureauಪ್ರಮುಖಸಿನಿಮಾಸ್ಯಾಂಡಲ್​​ ​ವುಡ್​ನ ರಾಕಿಂಗ್​ ಸ್ಟಾರ್​ ಯಶ್​  ಕೊಲೆಗೆ ಸುಪಾರಿ ವಿಚಾರವಾಗಿ ಸ್ಫೋಟಕ ಮಾಹಿತಿಯೊಂದು ಹರಿದಾಡುತ್ತಿದೆ. 2 ವರ್ಷಗಳ ಹಿಂದೆ  ಯಶ್​ ಚಲಿಸುತ್ತಿದ್ದ  ಕಾರಿನ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಬಗ್ಗೆ ನಟ ಯಶ್​ಕೂಡ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದರು. ಅದಾದ ನಂತರ ಯಶ್​ ಮೇಲೆ ಕೊಲೆ ಸ್ಕೆಚ್ಚು ..? ಹತ್ಯೆ ಸುಪಾರಿ ಕೊಟ್ಟಿದ್ದಾರಾ...? ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದವು.ಯಶ್​ ಪೊಲೀಸರನ್ನು ಭೇಟಿಯಾಗಿದ್ದೂ ನಿಜ. ಆದರೆ...Kannada News Portal