ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯಲ್ಲಿನ ಸಿಬ್ಬಂದಿಗಳ ಚಲನವಲನ ಹಾಗೂ ಇರುವ ಸ್ಥಳದ ಖಚಿತ ಮಾಹಿತಿ ಪಡೆಯಲು ಅರಣ್ಯ ಇಲಾಖೆಯು ನೂತನ ಡಿಜಿಟಲ್ ವೈರ್ ಲೆಸ್ ಹ್ಯಾಂಡ್ ಸೆಟ್ ವಿತರಣೆ ಮಾಡಲಿದೆ. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ನೂತನ ಹ್ಯಾಂಡ್ ಸೆಟ್‍ಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಈವರೆಗೆ ಬಳಕೆ ಮಾಡುತ್ತಿದ್ದ ಅನಾಲಾಗ್ ಹ್ಯಾಂಡ್ ಸೆಟ್‍ಗಳಲ್ಲಿ ಸಿಬ್ಬಂದಿ ಯಾವ ಪ್ರದೇಶದಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ದೊರಕುತ್ತಿರಲಿಲ್ಲ. ಅಲ್ಲದೆ ಬ್ಯಾಟರಿಯ ಸಾಮರ್ಥ್ಯ ಕಡಿಮೆಯಾಗಿದ್ದು ದೀರ್ಘಕಾಲ ಬಾಳಿಕೆ ಬರುತ್ತಿರಲಿಲ್ಲ. ಅಲ್ಲದೆ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ತೆರಳದೆ ಸುಳ್ಳುಹೇಳಿದರೂ ಅಧಿಕಾರಿಗಳು ನಂಬಿಕೊಳ್ಳಬೇಕಾಗಿತ್ತು.

ಆದರೆ 24 ಸಾವಿರ ರೂಪಾಯಿ ಬೆಲೆಬಾಳುವ ನೂತನ ಹ್ಯಾಂಡ್ ಸೆಟ್‍ನಲ್ಲಿ ಜಿಪಿಎಸ್ ಬಳಕೆಯಿಂದ ಸಿಬ್ಬಂದಿಯಿರುವ ಸ್ಥಳದ ಖಚಿತ ಮಾಹಿತಿ ಕೇಂದ್ರ ಕಚೇರಿಗೆ ದೊರಕಲಿದೆ. ಇದರಿಂದ ಅರಣ್ಯದಲ್ಲಿ ಕಟ್ಟುನಿಟ್ಟಿನ ಗಸ್ತು ನಡೆಸಲು ಸಾಧ್ಯವಾಗಲಿದೆ. ಅಲ್ಲದೆ ಎರಡರಿಂದ ಮೂರು ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರಲಿದೆ. ಅಧಿಕಾರಿಗಳು, ಕಳ್ಳಬೇಟೆ ಶಿಬಿರ ಹಾಗೂ ಗಸ್ತು ಸಿಬ್ಬಂದಿಗಳಿಗೆ 101 ಸೆಟ್‍ಗಳ ಅಗತ್ಯವಿದ್ದು ಸದ್ಯ 5ನ್ನು ಖರೀದಿಸಿ ಉಪಯೋಗಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ವಿತರಣೆ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Please follow and like us:
0
http://bp9news.com/wp-content/uploads/2018/05/Bandipura.jpghttp://bp9news.com/wp-content/uploads/2018/05/Bandipura-150x150.jpgBP9 Bureauಚಾಮರಾಜನಗರಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯಲ್ಲಿನ ಸಿಬ್ಬಂದಿಗಳ ಚಲನವಲನ ಹಾಗೂ ಇರುವ ಸ್ಥಳದ ಖಚಿತ ಮಾಹಿತಿ ಪಡೆಯಲು ಅರಣ್ಯ ಇಲಾಖೆಯು ನೂತನ ಡಿಜಿಟಲ್ ವೈರ್ ಲೆಸ್ ಹ್ಯಾಂಡ್ ಸೆಟ್ ವಿತರಣೆ ಮಾಡಲಿದೆ. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ನೂತನ ಹ್ಯಾಂಡ್ ಸೆಟ್‍ಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು. ಈವರೆಗೆ ಬಳಕೆ ಮಾಡುತ್ತಿದ್ದ ಅನಾಲಾಗ್ ಹ್ಯಾಂಡ್ ಸೆಟ್‍ಗಳಲ್ಲಿ ಸಿಬ್ಬಂದಿ ಯಾವ ಪ್ರದೇಶದಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ದೊರಕುತ್ತಿರಲಿಲ್ಲ. ಅಲ್ಲದೆ ಬ್ಯಾಟರಿಯ ಸಾಮರ್ಥ್ಯ ಕಡಿಮೆಯಾಗಿದ್ದು ದೀರ್ಘಕಾಲ...Kannada News Portal