ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಎದ್ದಿದೆ. ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದ ಚಂದ್ರಕಲಾ ಬಾಯಿ ಮನೆಯಲ್ಲಿ ಅವರ ಬೆಂಬಲಿಗರ ಸಭೆ ನಡೆಸಿದ್ದು, ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.

ಸಭೆಯ ನಂತರ ಮಾತನಾಡಿದ  ಚಂದ್ರಕಲಾಬಾಯಿ ನಾನು ಕಳೆದ ಹಲವಾರು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ.ನಾನು ಸಮಾಜ ಸೇವೆ ಕೂಡ ಮಾಡುತ್ತಾ ಬಂದಿದ್ದೇನೆ.ಆದರೆ ಏಕೆ ನನಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ.

ನಾನು ಲಂಬಾಣಿ ಮಹಿಳೆಯಾಗಿರುವುದಕ್ಕೆ ಟಿಕೆಟ್ ನೀಡುತ್ತಿಲ್ಲವೋ ಏನು ಗೊತ್ತಿಲ್ಲ. ಜಿಲ್ಲೆಯಲ್ಲಿ ಒಂದು ಮಹಿಳೆಗೆ ಕೂಡ ನೀಡಿಲ್ಲ.ನಾನು ಪ್ರಬಲವಾಗಿ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದೀನಿ ಏಕೆ ನನಗೆ ಟಿಕೆಟ್ ನೀಡುತ್ತಿಲ್ಲ ಎಂಬುದು ಗೊತ್ತಿಲ್ಲ.ಅದಕ್ಕೆ ವರಿಷ್ಠರೆ ಉತ್ತರ ನೀಡಬೇಕು ಎಂದಿದ್ದಾರೆ.

ನಾನು ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಬಂಡಾಯವಾಗಿ ಸ್ಪರ್ಧೆ ಮಾಡುತ್ತೇನೆ.ಈ ಕ್ಷೇತ್ರದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ.ಅವರ ಬೆಂಬಲ ನಮಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ವರದಿ:ಮೋಹನ್​​ಕುಮಾರ್​​

Please follow and like us:
0
http://bp9news.com/wp-content/uploads/2018/04/BJP-chandracala-but-BP9-News-Web-Portal.jpeghttp://bp9news.com/wp-content/uploads/2018/04/BJP-chandracala-but-BP9-News-Web-Portal-150x150.jpegBP9 Bureauಚಾಮರಾಜನಗರರಾಜಕೀಯಚಾಮರಾಜನಗರ : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಎದ್ದಿದೆ. ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದ ಚಂದ್ರಕಲಾ ಬಾಯಿ ಮನೆಯಲ್ಲಿ ಅವರ ಬೆಂಬಲಿಗರ ಸಭೆ ನಡೆಸಿದ್ದು, ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ಸಭೆಯ ನಂತರ ಮಾತನಾಡಿದ  ಚಂದ್ರಕಲಾಬಾಯಿ ನಾನು ಕಳೆದ ಹಲವಾರು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ.ನಾನು ಸಮಾಜ ಸೇವೆ ಕೂಡ ಮಾಡುತ್ತಾ ಬಂದಿದ್ದೇನೆ.ಆದರೆ ಏಕೆ ನನಗೆ ಟಿಕೆಟ್ ತಪ್ಪಿಸುತ್ತಿದ್ದಾರೆ...Kannada News Portal