ಚಾಮರಾಜನಗರ: ಜೂನ್ 8 ರಂದು ನಡೆಯುವ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಲಕ್ಷ್ಮಣ್ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಅಭ್ಯರ್ಥಿಯಾದ ಲಕ್ಷ್ಮಣ್ ಮಾತನಾಡಿ ನಾನು 2008ರಿಂದ ವಿವಿಧ ಚುನಾವಣೆಯಲ್ಲಿ ಸ್ಪರ್ಧಿಸುತ್ತ ಬಂದಿದ್ದೆನೆ 2012.18ರ ಚುನಾವಣೆಯಲ್ಲಿ ನನನ್ನು ಅಧಿಕೃತ ಅಭ್ಯಥಿಯಾಗಿ ಮಾಡಿ ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ  ಪರಾಭವ ಗೊಂಡಿದ್ದರು ಶಿಕ್ಷಕರ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಇಲ್ಲಿಯವರೆಗೆ ಬಗೆಹರಿಸಿದ್ದು ಕಳೆದ ಆರು ತಿಂಗಳುಗಳಿಂದಲು ಶಿಕ್ಷಕರೊಂದಿಗೆ ನಿಕಟ ಸಂಭಂದ ಹೊಂದಿ ಗೆಲುವಿನ ಹಂಚಿನಲ್ಲಿ ಇದ್ದೆನೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾದ ನಾನು ಕಾರ್ಯಕರ್ತರ ಒಡನಾಟ ವಿಲ್ಲದೆ ಮತ್ತು ಸಹಕಾರವಿಲ್ಲದೆ ಗೆಲುವು ಅಸಾಧ್ಯವಾಗಿರುವುದರಿಂದ ಕ್ಷೇತ್ರದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಹೆಚ್ಚಿನ ಪ್ರಯತ್ನ ದೊಂದಿಗೆ ನನನ್ನು ಗೆಲ್ಲಿಸಬೇಕು ಹಾಗೂ ಈ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿದೆ ಅದುದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬೆಂಬಲ ಮತ್ತು 29 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಕಾಂಗ್ರೆಸ್ ಬಂಧುಗಳ ನೆರವಿನೊಂದಿಗೆ ನನನ್ನು ಗೆಲಿಸಬೇಕು ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಶಾಸಕ ಬಾಲರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಕೆ.ಪಿ.ಸಿಸಿ ಸದಸ್ಯ ಸೈಯದ್‍ರಫಿ, ಮುಂಖಡರಾದ ಸೋಮನಾಯಕ, ಚಿಕ್ಕಮಹದೇವು, ಕೃಷ್ಣ, ಲತಾಜಯಣ್ಣ, ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಪಿ.ಮರಿಸ್ವಾಮಿ ಮಾತನಾಡಿ  ಚಾಮರಾಜನಗರ ಜಿಲ್ಲೆ ಕಾಂಗ್ರೆಸ್‍ನ ಭದ್ರಕೋಟೆಯಾಗಿತ್ತು ಅದರೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ  ಮೈಮರೆತ ಕಾರಣ ಪ್ರಮುಖವಾದ 2 ವಿಧಾನಸಭಾ ಕ್ಷೇತ್ರಗಳು ಕಳೆದು ಕೊಳ್ಳಬೇಕಾಯಿತು ಅದರೆ ಪ್ರಸ್ತುತ ನಮ್ಮ ಮುಂದೆ 2 ಚುನಾವಣೆಗಳು ಇದ್ದು ವಿಧಾನಪರಿಷತ್ ಶಿಕ್ಷಕ ಕ್ಷೇತ್ರದ ಈ ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲೆ ಬೇಕು ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಗೆಲುವಿನ ನಾಂದಿಯಾಗಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಸದಾಶಿವಮೂರ್ತಿ, ಚಿನ್ನಪ್ಪ, ಬೊಮ್ಮಯ್ಯ, ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಅಧ್ಯಕ್ಷರಾದ ಗುರುಸ್ವಾಮಿ, ಕೆಂಪಯ್ಯ, ಮುನ್ನ, ತೊಂಟೆಶ್, ಕಾಡ ಅಧ್ಯಕ್ಷ ನಂಜಪ್ಪ, ಮಾಧ್ಯಮ ಕಾರ್ಯದರ್ಶಿ ಅರುಣ್, ಸೋಮಲಿಂಗಪ್ಪ, ಅಲಿಮುಲ್ಲ, ಕಾಂತರಾಜು, ಪುಟ್ಟಸ್ವಾಮಿ, ಚನ್ನಪ್ಪ, ಪುರುಷೊತ್ತಮ್, ಕಾಗಲವಾಡಿಚಂದ್ರು ಇನ್ನು ಮುಂತಾದರು ಹಾಜರಿದ್ದರು.

 

Please follow and like us:
0
http://bp9news.com/wp-content/uploads/2018/05/Congress-e1527599210818-1024x464.jpghttp://bp9news.com/wp-content/uploads/2018/05/Congress-e1527599210818-150x150.jpgBP9 Bureauಚಾಮರಾಜನಗರಚಾಮರಾಜನಗರ: ಜೂನ್ 8 ರಂದು ನಡೆಯುವ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಲಕ್ಷ್ಮಣ್ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಅಭ್ಯರ್ಥಿಯಾದ ಲಕ್ಷ್ಮಣ್ ಮಾತನಾಡಿ ನಾನು 2008ರಿಂದ ವಿವಿಧ ಚುನಾವಣೆಯಲ್ಲಿ ಸ್ಪರ್ಧಿಸುತ್ತ ಬಂದಿದ್ದೆನೆ 2012.18ರ ಚುನಾವಣೆಯಲ್ಲಿ ನನನ್ನು ಅಧಿಕೃತ ಅಭ್ಯಥಿಯಾಗಿ ಮಾಡಿ ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ  ಪರಾಭವ ಗೊಂಡಿದ್ದರು ಶಿಕ್ಷಕರ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು...Kannada News Portal