ಚಾಮರಾಜನಗರ : ಇಡಿ ದೇಶಕ್ಕೆ ಅನ್ನ ಹಾಕುವ ಅನ್ನ ದಾತ ರೈತ. ದೇಶ ಬೆನ್ನೆಲುಬು ಕೂಡಾ ರೈತನೆ. ಆದರೆ ರೈತನ ಬೆನ್ನು ಮಾತ್ರ  ಸವೆಯುತ್ತಲೇ ಇದೆ. ಅದಕ್ಕೆ ಎಷ್ಟೇ ಬಲ ತುಂಬುವ ಪ್ರಯತ್ನವನ್ನ ಸರ್ಕಾರ ಮಾಡಿದರೂ ಅದು ಸಾಲುತ್ತಿಲ್ಲ. ಇನ್ನು ರೈತನಿಗೆ ಬೆಳೆ ಬೆಳೆಯುವಲ್ಲಿ ಆಧುನಿಕ ತಂತ್ರಜ್ಞಾನ ಪರಿಚಯವಿಲ್ಲದೆ ಕಷ್ಟ ಪಟ್ಟು, ಭಾರೀ ಪ್ರಮಾಣದ ವೆಚ್ಚವನ್ನ ಮಾಡಿ ಬೆಳೆ ಬೆಳೆದು, ಸರಿಯಾದ ಬೆಲೆ ಸಿಗದೆ ನಷ್ಟದಲ್ಲಿ ನೊಂದು ಬೆಯುತ್ತಿದ್ದಾನೆ.

ಅದರಲ್ಲೂ ಭತ್ತ ಬೆಳೆಯುವಲ್ಲಿ ರೈತ ಹೈರಾಣಾತ್ತಿದ್ದಾನೆ. ಕೂಲಿ ಆಳುಗಳು ಸಿಗದೆ, ಸಿಕ್ಕರೂ ಅಧಿಕ ಕೂಲಿಯಿಂದ  ಭತ್ತದ ನಾಟಿ ಮಾಡಲು ಕಷ್ಟಪಡುತ್ತಿದ್ದಾನೆ. ಇದರಿಂದ ಭತ್ತ ಬೆಳೆಯಲು ಖರ್ಚು ಜಾಸ್ತಿ ಹೊರತು ಲಾಭ ಕಡಿಮೆ. ಆದ್ದರಿಂದ ಭತ್ತ ಬೆಳೆಯುವ ರೈತನ ಜೀವನ ಭತ್ತದ ಗದ್ದೆಯ ರಾಡಿಯಂತೆ ಆಗುತ್ತಿದೆ. ಆದರೆ ಸರ್ಕಾರ ಭತ್ತ ಬೆಳೆಯುವ ರೈತನ ಈ ಸಮಸ್ಯೆಗೆ ಪರಿಹಾರ ಕೊಡಲು ಹೊರಟಿದ್ದು, ರೈತ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯನ್ನ ಪಡೆಯಬಹುದಾಗಿದೆ.

ಹೌದು.. ಸರ್ಕಾರ    ಆತ್ಮ ಯೋಜನೆಯಡಿ  ಆಧುನಿಕ ತಂತ್ರಜ್ಞಾನವಾದ   ‘ಡ್ರಂ ಸೀಡರ್​​​’ ಪದ್ದತಿಯನ್ನ ಪರಿಚಯಿಸುತ್ತಿದೆ. ಕೃಷಿ ಇಲಾಖೆ ಕೊಳ್ಳೇಗಾಲ ಹಾಗೂ ಜಿಲ್ಲಾಪಂಚಾಯತ್​​​ ಚಾಮರಾಜನಗರ ಸಹಯೋಗದಲ್ಲಿ ಕಸಬ ಹೋಬಳಿಯ ಸಿದ್ದಯ್ಯನಪುರ ಗ್ರಾಮದ ಜಾರ್ಜ್​ ಲಾರ್ಜರಸ್​​ ಅವರ ಗದ್ದೆಯಲ್ಲಿ  ಪಾಯೋಗಿಕ ಹಂತವಾಗಿ ಈ ನೂತನ  ಡ್ರಂ ಸೀಡರ್​​​ ಪದ್ದತಿಯನ್ನ ಪರಿಚಯಿಸುತ್ತಿದೆ.

ಏನಿದು ಡ್ರಂ ಸೀಡರ್​​​ ಪದ್ದತಿ

ಭತ್ತ ಬೆಳೆಯಲು ಗದ್ದೆಗಳನ್ನ ಹದ ಮಾಡಿ, ಭತ್ತದ ಬೀಜವನ್ನ ಹೊಟ್ಲು ಹಾಕಿ ನಂತರ ಅದು ಮೊಳಕೆಯೊಡೆದು, ಸಸಿಯಾದಾಗ ಮತ್ತೆ ಅದನ್ನ ಕಿತ್ತು ನಾಟಿ ಹಾಕಬೇಕಾಗುತ್ತದೆ.  ಇದಕ್ಕೆ ಸುಮಾರು 20ದಿ ಸಮಯ ಹಿಡಿವುದರ ಜೊತೆಗೆ ನಿರ್ವಹಣೆಯ ವೆಚ್ಚ, ಕೂಲಿ ವೆಚ್ಚ ಸೇರಿ ರೈತನಿಗೆ ಅಧಿಕ ವೆಚ್ಚವಾಗುತ್ತದೆ.

ಆದರೆ ಡ್ರಂ ಸೀಡರ್​​​ ಪದ್ದತಿಯಲ್ಲಿ ಹದಮಾಡಿದ ಗದ್ದೆಗೆ ನೇರವಾಗಿ ಭತ್ತದ ಬೀಜವನ್ನ ಡ್ರಂ ಸೀಡರ್​​​ ಯಂತ್ರದ ಮೂಲಕ ಹಾಕಬಹುದು. ಇದರಿಂದ ಸಸಿ ಮಾಡಿ, ಮತ್ತೆ ನೆಡುವ ಕಾರ್ಯದ ಕೂಲಿ ವೆಚ್ಚ ಉಳಿಯುದರ ಜೊತೆಗೆ, ಸಮಯ ಕೂಡಾ ಉಳಿಯುತ್ತದೆ. ಜೊತೆಗೆ ಈ ಡ್ರಮ್​​ ಸೀಡರ್​​ನಲ್ಲಿ ನಾಟಿ ಮಾಡಿದ ಭತ್ತ ಬೇಗ ಕಾಟಾವಿಗೆ ಬರುವುದರ ಜೊತೆಗೆ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ.

ಡ್ರಂ ಸೀಡರ್​​​ನಲ್ಲಿ ನಾಟಿ ಮಾಡಿದ ಗದ್ದೆ..

ಇದರಿಂದ ರೈತನಿಗೆ ಕೂಲಿ ವೆಚ್ಚೆ, ಸಮಯ ಎಲ್ಲಾ ಉಳಿದು, ಭತ್ತದ ಬೆಳೆಯಲ್ಲಿ ಲಾಭವನ್ನ ಕಾಣಬಹುದಾಗಿದೆ. ಅಂದಹಾಗೆ ಭತ್ತ ಬೆಳೆಗೆ ಮಾಮೂಲಿಯಾಗಿ ಏಕರೆಗೆ  5000 ಸಾವಿರ ಕರ್ಚು ತಗುಲಿದರೆ. ಈ ಪದ್ದತಿಯಲ್ಲಿ ಕೇವಲ 500 ರೂ ವೆಚ್ಚಬಿಳಲಿದೆ. ಇದರಿಂದ  ಸಾವಿರಾರು ರೂಪಯಿಗಳು ರೈತನ ಕಿಸೆಯಲ್ಲಿಯೇ ಉಳಿಯಲಿದ್ದು, ಭತ್ತ ಬೆಲೆಯುವ ವೆಚ್ಚವು ಕಡಿಮೆ ಆಗಿ ಲಾಭವೇ ಹೆಚ್ಚಾಗಲಿದೆ. ಇನ್ನು ಈ ಪದ್ದತಿ ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಈ ಪದ್ದತಿ ಪರಿಚಯಿಸಲು ಸರ್ಕಾರ ಮುಂದಾಗಿದ್ದು, ರೈತನ ಮೊಗದಲ್ಲಿ ಸಂತಸ ಮೂಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ರೈತರು ಜಿಲ್ಲಾ ಕೃಷಿ ಇಲಾಖೆ ನಿರ್ದೇಶಕರನ್ನ ಸಂಪರ್ಕಿಸಬಹುದಾಗಿದೆ.

ಇನ್ನು ಡ್ರಂ ಸೀಡರ್​​​ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂದು ಕೇಳಗಿನ ವಿಡಿಯೋ ನೋಡಿ…

Please follow and like us:
0
http://bp9news.com/wp-content/uploads/2018/06/factsheet-using_a_drum_seeder_5.pnghttp://bp9news.com/wp-content/uploads/2018/06/factsheet-using_a_drum_seeder_5-150x150.pngBP9 Bureauಕೃಷಿಚಾಮರಾಜನಗರಪ್ರಮುಖಚಾಮರಾಜನಗರ : ಇಡಿ ದೇಶಕ್ಕೆ ಅನ್ನ ಹಾಕುವ ಅನ್ನ ದಾತ ರೈತ. ದೇಶ ಬೆನ್ನೆಲುಬು ಕೂಡಾ ರೈತನೆ. ಆದರೆ ರೈತನ ಬೆನ್ನು ಮಾತ್ರ  ಸವೆಯುತ್ತಲೇ ಇದೆ. ಅದಕ್ಕೆ ಎಷ್ಟೇ ಬಲ ತುಂಬುವ ಪ್ರಯತ್ನವನ್ನ ಸರ್ಕಾರ ಮಾಡಿದರೂ ಅದು ಸಾಲುತ್ತಿಲ್ಲ. ಇನ್ನು ರೈತನಿಗೆ ಬೆಳೆ ಬೆಳೆಯುವಲ್ಲಿ ಆಧುನಿಕ ತಂತ್ರಜ್ಞಾನ ಪರಿಚಯವಿಲ್ಲದೆ ಕಷ್ಟ ಪಟ್ಟು, ಭಾರೀ ಪ್ರಮಾಣದ ವೆಚ್ಚವನ್ನ ಮಾಡಿ ಬೆಳೆ ಬೆಳೆದು, ಸರಿಯಾದ ಬೆಲೆ ಸಿಗದೆ ನಷ್ಟದಲ್ಲಿ ನೊಂದು ಬೆಯುತ್ತಿದ್ದಾನೆ. ಅದರಲ್ಲೂ ಭತ್ತ...Kannada News Portal