ಚಾಮರಾಜನಗರ : ಗಡಿಜಿಲ್ಲೆ ಚಾಮರಾಜನಗರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಿದ್ದು, ಒಟ್ಟು 976 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹನೂರು ಕ್ಷೇತ್ರದಲ್ಲಿ 247, ಕೊಳ್ಳೇಗಾಲದಲ್ಲಿ 243, ಚಾಮರಾಜನಗರದಲ್ಲಿ 236, ಗುಂಡ್ಲುಪೇಟೆ ಕ್ಷೇತ್ರದಲ್ಲಿ 250 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 10 ಪಿಂಕ್ ಮತಗಟ್ಟೆಗಳಿದ್ದು, 6 ನಗರ ಪ್ರದೇಶ, 4 ಗ್ರಾಮೀಣ ಪ್ರದೇಶದಲ್ಲಿವೆ.

ಜಿಲ್ಲೆಯಲ್ಲಿರುವ 976 ಮತಗಟ್ಟೆಗಳ ಪೈಕಿ 165 ಮತ ಕೇಂದ್ರಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಸ್‍ಎಸ್‍ಬಿ 2 ಪ್ಲಟೂನ್, ಸಿಆರ್‍ಪಿಎಫ್-2, ಸಿಎಎಸ್‍ಎಫ್-2, ಸೇರಿದಂತೆ ಒಟ್ಟು 2400 ಪೊಲೀಸರನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಪುರುಷರು-414366, ಮಹಿಳೆಯರು-416430, ಇತರೆ 61 ಸೇರಿದಂತೆ ಒಟ್ಟು 830887 ಮತದಾರರಿದ್ದಾರೆ. ಕ್ಷೇತ್ರಾವಾರು ಮತದಾರರು ಈ ರೀತಿ ಇದ್ದಾರೆ ಹನೂರಿನಲ್ಲಿ ಪುರುಷರು-105638, ಮಹಿಳೆಯರು-101949, ಇತರೆ 16 ಒಟ್ಟು 207603 ಮತದಾರರಿದ್ದಾರೆ. ಕೊಳ್ಳೇಗಾಲದಲ್ಲಿ ಪುರುಷರು-105129, ಮಹಿಳೆಯರು-106380, ಇತರೆ 13 ಒಟ್ಟು 211522 ಮತದಾರರಿದ್ದಾರೆ. ಚಾಮರಾಜನಗರದಲ್ಲಿ ಪುರುಷರು-101659, ಮಹಿಳೆಯರು-104471, ಇತರೆ-16 ಒಟ್ಟು 206146 ಮತದಾರರು. ಗುಂಡ್ಲುಪೇಟೆಯಲ್ಲಿ ಪುರುಷರು-101940, ಮಹಿಳೆಯರು-416460 ಇತರೆ 16 ಸೇರಿದಂತೆ ಒಟ್ಟು 205616 ಮತದಾರರಿದ್ದಾರೆ. ಇವರೆಲ್ಲರ ಚಿತ್ತ ಯಾವ ಪಕ್ಷ ಮತ್ತು ಅಭ್ಯರ್ಥಿಯತ್ತ ಎಂಬುದನ್ನು ಕಾದು ನೋಡ್ಬೇಕಿದೆ.

ಕೊಳ್ಳೇಗಾಲ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಕುಟುಂಬ ಸಮೇತ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.ತಮ್ಮ ಸ್ವಗ್ರಾಮ ಆಲೂರಿನಲ್ಲಿ ಪತ್ನಿ ಮಂಜುಳಾ ಹಾಗೂ ಬೆಂಬಲಿಗರೊಂದಿಗೆ ತೆರಳಿ ಮತ ಹಾಕಿದ ಕೃಷ್ಣಮೂರ್ತಿ.

ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಪುತ್ರರಾದ ಕೃಷ್ಣಮೂರ್ತಿ ಎರಡು ತಿಂಗಳ ಹಿಂದಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಕೊಳ್ಳೇಗಾಲದ ಅಭ್ಯರ್ಥಿ ಆಗಿದ್ದಾರೆ. ಸ್ವಗ್ರಾಮ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ಸಚಿವೆ ಹಾಗೂ ಗುಂಡ್ಲುಪೇಟೆ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ರಿಂದ ಮತದಾನ ಮಾಡಿದ್ದಾರೆ. ಮತದಾನಕ್ಕೂ‌ ಮುನ್ನ ಪತಿ ಮಹದೇವಪ್ರಸಾದ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ನಂತ್ರ ಕುಟುಂಬ ಸಮೇತ ಮತದಾನ ಮಾಡಿದ ಗೀತಾ ಮಹದೇವಪ್ರಸಾದ್.

Please follow and like us:
0
http://bp9news.com/wp-content/uploads/2018/05/Karnatakada-Miditha-46.jpeghttp://bp9news.com/wp-content/uploads/2018/05/Karnatakada-Miditha-46-150x150.jpegBP9 Bureauಚಾಮರಾಜನಗರಪ್ರಮುಖರಾಜಕೀಯಚಾಮರಾಜನಗರ : ಗಡಿಜಿಲ್ಲೆ ಚಾಮರಾಜನಗರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಿದ್ದು, ಒಟ್ಟು 976 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹನೂರು ಕ್ಷೇತ್ರದಲ್ಲಿ 247, ಕೊಳ್ಳೇಗಾಲದಲ್ಲಿ 243, ಚಾಮರಾಜನಗರದಲ್ಲಿ 236, ಗುಂಡ್ಲುಪೇಟೆ ಕ್ಷೇತ್ರದಲ್ಲಿ 250 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 10 ಪಿಂಕ್ ಮತಗಟ್ಟೆಗಳಿದ್ದು, 6 ನಗರ ಪ್ರದೇಶ, 4 ಗ್ರಾಮೀಣ ಪ್ರದೇಶದಲ್ಲಿವೆ. ಜಿಲ್ಲೆಯಲ್ಲಿರುವ 976 ಮತಗಟ್ಟೆಗಳ ಪೈಕಿ 165 ಮತ ಕೇಂದ್ರಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ...Kannada News Portal