ಚಾಮರಾಜನಗರ: ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಚಾಮರಾಜನಗರದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಚಾಮರಾಜನಗರದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ರೈತರು, ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತ ಮೆರವಣಿಗೆ ಸಾಗಿದರು.

ಸಿಎಂ ಕುಮಾರಸ್ವಾಮಿ 15 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೆಳಿದ್ದು, ಈಗ ಹಿಂದೇಟು ಹಾಕುತ್ತಿದ್ದಾರೆ. ನಾನು ಚುನಾವಣೆಯ ಪೂರ್ವದಲ್ಲಿ ಹೇಳಿದ ಹಾಗೆ ರೈತರ ಸಾಲ ಮನ್ನಾ ಮಡುತ್ತೇನೆ. 15 ದಿನಗಳಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಮತನಾಡಿ ರೈತರ ಸಾಲ ಮನ್ನಾ ಮಾಡುವ ವಿಚಾರ ತಿಳಿಸುವುದಾಗಿ ತಿಳಿಸಿದ್ದರು.ಆದರೆ ಇದುವರೆಗೆ 20 ದಿನಗಳು ಕಳೆದರೂ, ಸರ್ಕಾರದ ಅಧಿಕೃತ ಆದೇಶ ಅಥವಾ ಹೇಳಿಕೆ ಹೊರಬಿದ್ದಿಲ್ಲ. ಸರ್ಕಾರದ ಈ ವಿಳಂಬ ನೀತಿಯನ್ನ ಖಂಡಿಸಿ ಇಂದು ಪ್ರತಿಭಟನೆ ನಡೆಸಿದರು.ನೂತನ ಸಿಎಂ. ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ವಿಚಾರವಾಗಿ ಆದಷ್ಟು ಬೇಗ ಸರ್ಕಾರದ ಅಧಿಕೃತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

Please follow and like us:
0
http://bp9news.com/wp-content/uploads/2018/06/Karnatakada-Miditha-69.jpeghttp://bp9news.com/wp-content/uploads/2018/06/Karnatakada-Miditha-69-150x150.jpegBP9 Bureauಚಾಮರಾಜನಗರಪ್ರಮುಖಚಾಮರಾಜನಗರ: ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಚಾಮರಾಜನಗರದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಚಾಮರಾಜನಗರದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ರೈತರು, ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತ ಮೆರವಣಿಗೆ ಸಾಗಿದರು. ಸಿಎಂ ಕುಮಾರಸ್ವಾಮಿ 15 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೆಳಿದ್ದು, ಈಗ ಹಿಂದೇಟು ಹಾಕುತ್ತಿದ್ದಾರೆ. ನಾನು ಚುನಾವಣೆಯ ಪೂರ್ವದಲ್ಲಿ ಹೇಳಿದ ಹಾಗೆ ರೈತರ ಸಾಲ ಮನ್ನಾ ಮಡುತ್ತೇನೆ. 15 ದಿನಗಳಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ...Kannada News Portal