ಚಾಮರಾಜನಗರ: ಕಣ್ಣು‌ ಕಳೆದು ಕೊಂಡ ವಿದ್ಯಾರ್ಥಿಯ ಕುಟುಂಬ ಸ್ಥಿತಿ ನೋಡಿದರೆ ಎಂತಹವನ ಮನ ಕರಗದೆ ಇರಲಾರದು. ವಿದ್ಯಾರ್ಥಿ ತಂದೆ ಸೋಮೇಶ್ ಗೊರವರ ಕುಣಿತದ ಕಲಾವಿದನಾದ ಈತ ಮನೆ ಮನೆಗೆ ಹೋಗಿ ಉಪಾದಾನ(ಮನೆ ಮನೆಗೆ ಹೊಗಿ ಅಕ್ಕಿ, ಬೇಳೆ, ಹಣ ಪಡೆವುದಕ್ಕೆ ಉಪಾದಾನ ಎನ್ನಲಾಗುವುದು) ಮಾಡಿ ಕುಟುಂಬ ನಿರ್ವಹಣೆ‌ ಮಾಡಬೇಕಾದ ಸ್ಥಿತಿ. ಈತನ ಪತ್ನಿ ರತ್ನಮ್ಮ ಕೂಲಿ ನಾಲಿ ‌ಮಾಡಬೇಕಾದ ಸ್ಥಿತಿ. ಇವರ ಮಕ್ಕಳೆ ದರ್ಶನ್ ಮತ್ತು ಗಿರಿಮಲ್ಲೇಶ್.ದರ್ಶನ್ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಎಡಕಣ್ಣು ಕಳೆದುಕೊಂಡ ಗಿರಿಮಲ್ಲೇಶ್ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಯಲ್ಲಿ  ಗಲಾಟೆ ಮಾಡುತ್ತಿದ್ದರು ಎಂಬ ನೆಪದಿಂದ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮೇಲೆ ಬಿಸಾಡಿದ ಸ್ಕೇಲ್ ವಿದ್ಯಾರ್ಥಿ ಗಿರಿಮಲ್ಲೇಶ್ ಕಣ್ಣಿಗೆ ಬಿದ್ದಿದ್ದರಿಂದ  ಈಗ ಕಣ್ಣೆ ಇಲ್ಲದಂತಾಗಿದೆ. ನಾವು ಓದಲಿಲ್ಲ, ಮಕ್ಕಳಾದರೂ ಓದಲಿ ಎಂಬ ಆಸೆ ಇಟ್ಟು ಕಳುಹಿಸಿದರೆ ಇಂತಹ ಸ್ಥಿತಿ ಬಂದೊದಗಿದೆ ಎಂದು ಕ ರಿಡುತ್ತಿದೆ ಈ ಕುಟುಂಬ. ಶಿಕ್ಷಣ ಸಚಿವ ಎನ್. ಮಹೇಶ್ ಅವರ ತವರು ಜಿಲ್ಲೆಯಲ್ಲಿ ಅಮಾನವೀಯತೆಯಲ್ಲಿ ಬೆಂದ ಕುಟುಂಬ ವರ್ಗವನ್ನ ಇದೀಗ ಕೇಳೋರೆ ಇಲ್ಲದಂತಾಗಿದೆ.

ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ಹಿನ್ನಲೆಯಲ್ಲಿ  ಚಾಮರಾಜನಗರ ಜಿಲ್ಲಾಧಿಕಾರಿ ಕಾವೇರಿ ಅವರನ್ನ ವರದಿ ಕೇಳಿದ್ದರು. ಇದಕ್ಕೂ ಮುನ್ನವೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿಯನ್ನಾಧರಿಸಿ ಶಿಕ್ಷಣ ಇಲಾಖೆಗೆ ವರದಿ ನೀಡುವಂತೆ ಸೂಚಿಸಿದ್ದರು.

ಪ್ರಕರಣಕ್ಕೆ ಸಂಬಂದಿಸಿದಂತೆ ಇಲಾಖೆಯಿಂದ ಅಂತಿಮ‌ ವರದಿ ಸಿದ್ದ ಮಾಡಿ ಇಲಾಖೆ ನೀಡಿದ್ದಾರೂ ಕಾನೂನಾತ್ಮಕ ಹೋರಾಟ ಮಾಡಲು ಬಡ ಕುಟುಂಬ ಅಶಕ್ತವಾಗಿದ್ದು, ಆದರೆ  ಪ್ರಕರಣವನ್ನ ಶಾಲಾ ಆಡಳಿತ ವರ್ಗ ಏನೇ ಆಗಲೀ ನ್ಯಾಯಾಲಯದಲ್ಲೆ ಇತ್ಯರ್ಥ ಪಡಿಸಿಕೊಳ್ಳುವ ಧೃಡ ನಿರ್ಧಾರ ಮಾಡಿದೆಯಂತೆ.

ಘಟನೆ ವಿವರ:

ರಾಮಸಮುದ್ರದ ಹಿ.ಪ್ರಾ.ಶಾಲೆಯ ಗಿರಿಮಲ್ಲೇಶ್ ಎಂಬಾತನ ಮೇಲೆ ಶಿಕ್ಷಕ ಯೋಸೆಪ್ ಸ್ಕೇಲ್ ಬಿಸಾಕಿದ್ದರು ಎನ್ನಲಾಗಿದೆ. ‌ ಆ ಸ್ಕೇಲ್ ಕಣ್ಣಿಗೆ ತಗುಲಿ ಆತನ ಎಡ ಕಣ್ಣು ಹೋಗಿದೆ ಎಂದು ಪೋಷಕರು ಆರೋಪಿಸಿದ್ದರು.  ಶಿಕ್ಷಕ ಮಾಡಿದ ಈ ಎಡವಟ್ಟಿನಿಂದ ವಿದ್ಯಾರ್ಥಿ  ಎಡ ಕಣ್ಣು ಕಳೆದುಕೊಂಡಿದ್ದಾನೆ ಎಂದು ಪಟ್ಟಣ ಠಾಣೆಗೆ ದೂರು ದಾಖಲಿಸಿದ್ದ ಪರಿಣಾಮ ಸಂಸ್ಥೆಯ ಆಡಳಿತ ಮಂಡಳಿ ತಕ್ಷಣ ಜಾರಿ ಬರುವಂತೆ ವಿಚಾರಣೆ ಮುಗಿಯುವವರೆಗೂ ಅಮಾನತ್ತಿನಲ್ಲಿ ಇಟ್ಟು ಆದೇಶ ಹೊರಡಿಸಿದ್ದರು. ‌

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಮಹದೇವು ಮತ್ತು ತಮ್ಮಯ್ಯ ಎಂಬುವವರ ನೇತೃತ್ವದಲ್ಲಿ ಎರಡು ತಂಡ ನಿಯೋಜಿಸಿ ವರದಿ ನೀಡುವಂತೆ ಸೂಚಿಸಿದ್ದರು. ಆದರೆ ನಿಯೋಜನೆಗೊಂಡವರು ಸಂಸ್ಥೆಯ ಪರವಾಗಿ ನಿಂತು ಕೆಲಸ ಮಾಡುತ್ತಿದ್ದು‌ ಗಮನಕ್ಕೆ ಬಂದು ವರದಿಯನ್ನ ತಿರುಚುತ್ತಿದ್ದ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ,  ಮತ್ತೊಂದು ವರದಿ ಸಿದ್ದ ಪಡಿಸಿ ವಿದ್ಯಾರ್ಥಿ ಚಿಕಿತ್ಸೆಗೆ ಇದುವರೆಗೆ ಆದ ಖರ್ಚು ವೆಚ್ಚದ ಹಣ ಭರಿಸಿಕೊಡುವಂತೆ ಆಡಳಿತ ಮಂಡಳಿಗೆ ಸೂಚಿಸುವಂತೆ ಆದೇಶಿಸಿದ್ದಾರಂತೆ.

ಒಟ್ಟಾರೆ ಖರ್ಚುವೆಚ್ಚದ ಮಾತಲ್ಲೆ ಕಾಲ ಕಳೆಯಿತ್ತಿರುವ ಅಧಿಕಾರಿಗಳು ಮರು ಕಣ್ಣು ಜೋಡಣೆ ಹಾಗೂ ವಿದ್ಯಾರ್ಥಿಯ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ಮಾಡದೆ ಇರುವುದು‌ ಮಾತ್ರ ವಿಪರ್ಯಾಸವಾಗಿದ್ದು ಕಾನೂನು ಹೋರಾಟ ಮಾಡಲು ಅಸಮರ್ಥರಾಗಿರುವ ಈ ಕುಟುಂಬಕ್ಕೆ  ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಯೇ ದಾರಿ ತೋರಿಸಬೇಕಾಗಿದೆ.

 

 

. ನೂತನ ಶಿಕ್ಷಣ ಸಚಿವರಾದ ಎನ್. ಮಹೇಶ್ ಅವರು ಆದಷ್ಟು ಬೇಗ ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸಲಿ ಎನ್ನುವುದು ಎಲ್ಲರ ಆಶಯ.

ವರದಿ: ಎಸ್.ವೀರಭದ್ರಸ್ವಾಮಿ, ರಾಮಸಮುದ್ರ

 

 

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-14-at-12.34.13-PM-e1528962951430.jpeghttp://bp9news.com/wp-content/uploads/2018/06/WhatsApp-Image-2018-06-14-at-12.34.13-PM-e1528962951430-150x150.jpegBP9 Bureauಚಾಮರಾಜನಗರಪ್ರಮುಖಚಾಮರಾಜನಗರ: ಕಣ್ಣು‌ ಕಳೆದು ಕೊಂಡ ವಿದ್ಯಾರ್ಥಿಯ ಕುಟುಂಬ ಸ್ಥಿತಿ ನೋಡಿದರೆ ಎಂತಹವನ ಮನ ಕರಗದೆ ಇರಲಾರದು. ವಿದ್ಯಾರ್ಥಿ ತಂದೆ ಸೋಮೇಶ್ ಗೊರವರ ಕುಣಿತದ ಕಲಾವಿದನಾದ ಈತ ಮನೆ ಮನೆಗೆ ಹೋಗಿ ಉಪಾದಾನ(ಮನೆ ಮನೆಗೆ ಹೊಗಿ ಅಕ್ಕಿ, ಬೇಳೆ, ಹಣ ಪಡೆವುದಕ್ಕೆ ಉಪಾದಾನ ಎನ್ನಲಾಗುವುದು) ಮಾಡಿ ಕುಟುಂಬ ನಿರ್ವಹಣೆ‌ ಮಾಡಬೇಕಾದ ಸ್ಥಿತಿ. ಈತನ ಪತ್ನಿ ರತ್ನಮ್ಮ ಕೂಲಿ ನಾಲಿ ‌ಮಾಡಬೇಕಾದ ಸ್ಥಿತಿ. ಇವರ ಮಕ್ಕಳೆ ದರ್ಶನ್ ಮತ್ತು ಗಿರಿಮಲ್ಲೇಶ್.ದರ್ಶನ್ 10 ನೇ ತರಗತಿಯಲ್ಲಿ...Kannada News Portal