ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಉದ್ಯೋಗಾವಕಾಶಕ್ಕೆ ನೆರವಾಗುವ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿಗಳನ್ನು ನೀಡುತ್ತಾ ಬಂದಿದ್ದು ಈ ಬಾರಿಯೂ ಸಹ ಉಪಯೋಗವಾಗುವ ಹಲವು ತರಬೇತಿಯನ್ನು ನೀಡಲು ಸಜ್ಜಾಗಿದೆ.

2007ರಲ್ಲಿ ಫ್ರಾರಂಭವಾದ ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ದೀರ್ಘಾವಧಿ ಕೋರ್ಸು ಅಧ್ಯ್ಯಯನಕ್ಕೆ ಅವಕಾಶ ನೀಡಿದ್ದು ಇದುವರೆಗೆ 140 ವಿದ್ಯಾರ್ಥಿಗಳು ತರಬೇತಿ ಪಡೆದು ರಾಷ್ಟ್ರಮಟ್ಟದ ಪ್ರತಿಷ್ಠಿತ ಕೈಗಾರಿಕೆ ಉದ್ಯಮಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ನೌಕರಿ ಅವಕಾಶ ಲಭಿಸಿದೆ.

ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸಿಗೆ ಈ ಹಿಂದಿನ ವರ್ಷಗಳಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು, ಈ ಕೋರ್ಸು ವ್ಯಾಸಂಗಮಾಡಿದ ವಿದ್ಯಾರ್ಥಿಗಳಿಗೆ ದೇಶವಿದೇಶಗಳಲ್ಲೂ ಹೆಚ್ಚಿನ ಉದ್ಯೋಗ ಅವಕಾಶ ಲಭಿಸುತ್ತಿತ್ತು. ಹೀಗಾಗಿ ಸಹಜವಾಗಿ ಕೋರ್ಸು ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಮನಗಂಡು ಕರ್ನಾಟಕ ಸರ್ಕಾರ ಮತ್ತು ಎಐಸಿಟಿಇ ಅನುಮೋದನೆ ಪಡೆದು 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ, ಜಿಲ್ಲೆಯಲ್ಲಿ ಇಂತಹ ಕೋರ್ಸು ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿರುವುದು ವಿಶೇಷವಾಗಿದೆ.

ತರಬೇತಿ ಕೇಂದ್ರದಲ್ಲಿ ಇತರೆ ಸರ್ಟಿಫೈಡ್ ಕೋರ್ಸು ವ್ಯಾಸಂಗಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಇದೆ. ಟೂಲ್ ರೂಂ ಮೆಷಿನಿಷ್ಟ್, ಟೂಲ್ ಅಂಡ್ ಡೈ ಟೆಕ್ನಿಷಿಯನ್ ಕೋರ್ಸುಗಳಲ್ಲಿ ತರಬೇತಿ ಪಡೆಯಬಹುದಾಗಿದೆ.

ಅಲ್ಲದೆ ಕೌಶಲಾಭಿವೃದ್ಧಿ ಇಲಾಖೆ ಪ್ರಾಯೋಜನೆಯಡಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಟೂಲ್ ರೂಂ ಮೆಷಿನಿಷ್ಟ್, ಸಿ.ಎನ್.ಸಿ ಟೆಕ್ನಾಲಜಿಸ್ಟ್ ಕ್ಯಾಡ್/ಕ್ಯಾಮ್ ಸ್ಪೆಷಲಿಸ್ಟ್, ಟರ್ನರ್, ಮಿಲ್ಲರ್ ವಿಷಯದಲ್ಲಿ ಅಲ್ಪಾವಧಿಯ ತರಬೇತಿಯನ್ನು ತರಬೇತಿ ಕೇಂದ್ರವು ನೀಡುತ್ತಿದೆ.

ನೂತನ ತಂತ್ರ ವಿಧಾನ ಸೌಕರ್ಯಗಳನ್ನು ಬಳಸಿಕೊಂಡು ಕೈಗಾರಿಕೆಗಳಲ್ಲಿ ಗರಿಷ್ಠ ಉತ್ಪಾದನೆಗಾಗಿ ತರಬೇತಿ ಹಾಗೂ ಆವಿಷ್ಕಾರಕ್ಕಾಗಿ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಮಹತ್ತರ ಆಶಯದೊಂದಿಗೆ  ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಆರಂಭವಾಯಿತು. ಉನ್ನತ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ಕೇಂದ್ರದ ಮುಖ್ಯ ಉದ್ದೇಶವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಅಭ್ಯರ್ಥಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸಲು ಬೇಕಿರುವ ತರಬೇತಿ ತಂತ್ರಜ್ಞಾನ ಕ್ರಮಗಳನ್ನು ರೂಪಿಸುವುದು ಆಗಿದೆ.

ಗುಂಡ್ಲುಪೇಟೆ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ದುಂದಾಸನಪುರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೋರ್ಸುಗಳ ಪ್ರವೇಶಕ್ಕಾಗಿ ಈಗಾಗಲೇ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜೂನ್ 8 ಕಡೆಯ ದಿನವಾಗಿದೆ. ಉದ್ಯೋಗಾವಕಾಶಗಳನ್ನು ಹೆಚ್ಚು ಕಲ್ಪಿಸುವ ಕೋರ್ಸುಗಳ ಅಧ್ಯಯನಕ್ಕೆ  ಅಭ್ಯರ್ಥಿಗಳು ಮುಂದಾಗಬೇಕು. ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಕೇಂದ್ರದ ಪ್ರಾಂಶುಪಾಲರಾದ ಗಣಪತಿ ಎಸ್. ಮೇತ್ರಿ ಮನವಿ ಮಾಡುತ್ತಾರೆ. ಕೋರ್ಸುಗಳ ವಿವರಗಳಿಗೆ ದೂರವಾಣಿ 08229-222344, ಅಥವಾ ಮೊಬೈಲ್ 9880800692, 9945697513 ಸಂಪರ್ಕಿಸುವಂತೆ ಮೇತ್ರಿ ಅವರು ಮಾಹಿತಿ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/WORKSHOP-1.jpghttp://bp9news.com/wp-content/uploads/2018/06/WORKSHOP-1-150x150.jpgBP9 Bureauಉದ್ಯೋಗಚಾಮರಾಜನಗರಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಉದ್ಯೋಗಾವಕಾಶಕ್ಕೆ ನೆರವಾಗುವ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿಗಳನ್ನು ನೀಡುತ್ತಾ ಬಂದಿದ್ದು ಈ ಬಾರಿಯೂ ಸಹ ಉಪಯೋಗವಾಗುವ ಹಲವು ತರಬೇತಿಯನ್ನು ನೀಡಲು ಸಜ್ಜಾಗಿದೆ. 2007ರಲ್ಲಿ ಫ್ರಾರಂಭವಾದ ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ದೀರ್ಘಾವಧಿ ಕೋರ್ಸು ಅಧ್ಯ್ಯಯನಕ್ಕೆ ಅವಕಾಶ ನೀಡಿದ್ದು ಇದುವರೆಗೆ 140 ವಿದ್ಯಾರ್ಥಿಗಳು ತರಬೇತಿ ಪಡೆದು ರಾಷ್ಟ್ರಮಟ್ಟದ ಪ್ರತಿಷ್ಠಿತ ಕೈಗಾರಿಕೆ ಉದ್ಯಮಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ....Kannada News Portal