ಚಾಮರಾಜನಗರ : ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿ  ನೂತನ ಸಚಿವರಾದ ನಂತರ ಇಂದು ಚಾಮರಾಜನಗರಕ್ಕೆ ಪುಟ್ಟರಂಗ ಶೆಟ್ಟಿ ಭೇಟಿ ನೀಡಿದರು. ಚಾಮರಾಜನಗರ ನಗರದ ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು, ಪ್ರಸ್ತುತ ತ ಮಂತ್ರಿಯಾಗಿದ್ದಾರೆ ಪುಟ್ಟರಂಗಶೆಟ್ಟಿ.  ಜಿಲ್ಲೆಗೆ ಬಂದ  ಸಚಿವರಿಗೆ  ಜನತೆ ಅಭೂತಪೂರ್ವ ಸ್ವಾಗತ ಕೊರಿದರು.

ನಂತರ ಮಾತನಾಡಿದ ಪುಟ್ಟರಂಗಶೆಟ್ಟಿ, ನನಗೆ ಸಚಿವ ಸ್ಥಾನ ಸಿಕ್ಕಿರುವುದು ತುಂಬಾನೆ ಸಂತೋಷ ಆಗಿದೆ. ಅಲ್ಲದೆ ನಾನು ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದವನಾದ್ದರಿಂದ, ಹಿಂದುಳಿದ ವರ್ಗಗಳ ಕಲ್ಯಾಣಾಭಿವೃದ್ಧಿ ಸಚಿವ ಸ್ಥಾನ ಸಿಕ್ಕಿರುವುದು ಇನ್ನೂ ಹೆಮ್ಮೆಯಾಗುತ್ತಿದೆ.

ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಸಚಿವ ಸ್ಥಾನ ಸಿಕ್ಕಿರುವುದು ಇತಿಹಾಸವೇ ಸರಿ. ಇದೂವರೆಗೂ ಅಕ್ಕಪಕ್ಕದ ವಿಧಾನ ಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗುತ್ತಿತ್ತು.ನನಗೆ ಸಚಿವ ಸ್ಥಾನ ಸಿಗಲು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ದೃವನಾರಾಯಣ್ ಶ್ರಮ ಪ್ರಮುಖವಾಗಿದೆ.ನನಗೆ ಸಿಕ್ಕಿರುವ ಸ್ಥಾನದಲ್ಲಿಯೇ ಉತ್ತಮವಾದ ಕೆಲಸ ಮಾಡುತ್ತೇನೆ. ಜಿಲ್ಲಾ ಉಸ್ತುವಾರಿ ಸ್ಥಾನ ನನಗೆ ಸಿಗುತ್ತೆ ಎನ್ನುವ ನಂಬಿಕೆ ಇದೆ. ನನಗೆ ಸಿಗಬೇಕು ಕೂಡ. ಇನ್ನೂ ಎರಡು ಮೂರು ದಿನಗಳಲ್ಲಿ ಅದು ಗೊತ್ತಾಗುತ್ತೆ  ಎಂದರು.

 

 

Please follow and like us:
0
http://bp9news.com/wp-content/uploads/2018/06/Karnatakada-Miditha-68.jpeghttp://bp9news.com/wp-content/uploads/2018/06/Karnatakada-Miditha-68-150x150.jpegBP9 Bureauಚಾಮರಾಜನಗರರಾಜಕೀಯಚಾಮರಾಜನಗರ : ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿ  ನೂತನ ಸಚಿವರಾದ ನಂತರ ಇಂದು ಚಾಮರಾಜನಗರಕ್ಕೆ ಪುಟ್ಟರಂಗ ಶೆಟ್ಟಿ ಭೇಟಿ ನೀಡಿದರು. ಚಾಮರಾಜನಗರ ನಗರದ ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು, ಪ್ರಸ್ತುತ ತ ಮಂತ್ರಿಯಾಗಿದ್ದಾರೆ ಪುಟ್ಟರಂಗಶೆಟ್ಟಿ.  ಜಿಲ್ಲೆಗೆ ಬಂದ  ಸಚಿವರಿಗೆ  ಜನತೆ ಅಭೂತಪೂರ್ವ ಸ್ವಾಗತ ಕೊರಿದರು.  ನಂತರ ಮಾತನಾಡಿದ ಪುಟ್ಟರಂಗಶೆಟ್ಟಿ, ನನಗೆ ಸಚಿವ ಸ್ಥಾನ ಸಿಕ್ಕಿರುವುದು ತುಂಬಾನೆ ಸಂತೋಷ ಆಗಿದೆ. ಅಲ್ಲದೆ ನಾನು ಒಬ್ಬ ಹಿಂದುಳಿದ ವರ್ಗಕ್ಕೆ...Kannada News Portal