ಹನೂರು: ಮುಖ್ಯಮಂತ್ರಿ  ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡುವಲ್ಲಿ ವಿಫಲರಾಗಿದ್ದಾರೆ, ದಿನಕ್ಕೂಂದು ಹೇಳಿಕೆ ನೀಡುವ ಮೂಲಕ  ಇದು ಸಮ್ಮಿಶ್ರ ಸರ್ಕಾರ, ಇದು ನನ್ನ ಒಬ್ಬನ ತಿರ್ಮಾನವಲ್ಲ ಎಲ್ಲಾರ ಅಭಿಪ್ರಾಯ ಪಡೆದು ಸಾಲ ಮನ್ನಾ ಮಾಡಬೇಕು ಎನ್ನುತ್ತಾರೆ ಎಂದು ಮಾಜಿ ಶಾಸಕಿ ಪರಿಮಳನಾಗಪ್ಪ ಆರೋಪಿಸಿದರು.

ಹನೂರು ಪಟ್ಟಣದ ಪೆಟ್ರೋಲ್ ಬಂಕ್‍ನಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಾಣ ಮಾಡಿ ಘೋಷಣೆಗಳನ್ನು ಕೂಗುತ್ತಾ ನಂತರ ವಿಶೇಷ ತಹಶೀಲ್ದಾರ್ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ನಂತರ ಅವರು ಮಾತನಾಡಿದರು.

ರಾಜ್ಯದ ಮುಖ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲವನ್ನು ಸಂಪೂರ್ಣ ಮಾಡುತ್ತೇವೆ ಎಂದು ಹೇಳಿತ್ತಿದ್ದರು,  ಈಗಾಗಲೇ ವಾರ ಹತ್ತು ದಿವಸಗಳಾಗಿದೆ ಸಾಲ ಮನ್ನಾ ಮಾಡಿಲ್ಲ, ಚುನಾವಣಾ ಪೂರ್ವದಲ್ಲಿ ಉದ್ದ ಉದ್ದಕ್ಕೂ ಭಾಷಣ ಮಾಡುತ್ತಾ ಬಂದರು, ಆದರೆ ಇಂದು ದಿನಕ್ಕೂ ಹೇಳಿಕೆ ನೀಡುವ ಮೂಲಕ ನನ್ನ ಸರ್ಕಾರವಲ್ಲ ಸಮಿಶ್ರ ಸರ್ಕಾರ ಇದಕ್ಕೆ ಎಲ್ಲಾರ ಸಮ್ಮಿತಿ ಬೇಕು ಎಂದು ಹೇಳುತ್ತಿದ್ದಾರೆ, ಆದರೆ ಮಾನ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿ ಕೆಲವೇ ಗಂಟೆಗಳಲ್ಲಿ ರೈತರ ಸಾಲವನ್ನು 1 ಲಕ್ಷದವರೆಗೆ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದರು, ನಮ್ಮ ಪಕ್ಷ ಶಿಸ್ತಿನ ಪಕ್ಷ, ಯಾವುದೇ ಕಾರಣಕ್ಕೂ ಅಧಿಕಾರ ಸಿಕ್ಕಿಲ್ಲ ಎಂದು ದೃತಿಗೆಡುವುದಿಲ್ಲ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬೂದುಬಾಳು ವೆಂಕಟಸ್ವಾಮಿ ಮಾತನಾಡಿ, ಜೆಡಿಎಸ್ ಹಾಗೂ ಕಾಂಗ್ರೇಸ್ ಅಧಿಕಾರಕ್ಕೊಸ್ಕರ ಅನೈತಿಕ ಸರ್ಕಾರವನ್ನು ರಚನೆ ಮಾಡಿಕೊಂಡಿವೆ. ಚುನಾವಣೆಗೂ ಮುನ್ನ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ, ಅವರಿಗೆ ಅಪ್ಪನೇ ಇಲ್ಲ ಎಂಬ ಹೇಳಿಕೆಗಳನ್ನು ಹೇಳುತ್ತಿದ್ದರು ಅಂತವರು ಒಂದಾಗಿದ್ದಾರೆ. ಕುಮಾರಸ್ವಾಮಿ ಇಂದು ಇಬ್ಬಂದಿತನದ ರಾಜಕಾರಣವನ್ನು ಮಾಡುತ್ತಿದ್ದಾರೆ. ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ ಇಂದು ನನ್ನೊಬ್ಬನಿಂದ ಸಾಧ್ಯವಿಲ್ಲ ಎಂದು ಡೋಂಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಡೋಂಗಿ ಹೇಳಿಕೆಯನ್ನು ವಾಪಸ್ ಪಡೆದು ರೈತರ ಸಾಲಮನ್ನಾ ಮಾಡಬೇಕು. ಕುಮಾರಸ್ವಾಮಿ ವಚನ ಭ್ರಷ್ಟ ಎಂಬುದನ್ನು ಈಗಾಗಲೇ ರಾಜ್ಯದ ಜನತೆ ತಿಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉದ್ದನೂರು ಪ್ರಸಾದ್, ಹನೂರು ನಂಜಪ್ಪ, ಪುಟ್ಟರಾಜು, ಶಿವರಾಮು, ಜೈರಾಮ್, ಸುರೇಶ್, ಶಂಕರಪ್ಪ, ವೃಷಭೇಂದ್ರ, ಕಣ್ಣೂರು ಬಸವರಾಜಪ್ಪ, ಶಾಗ್ಯ ರಾಚಪ್ಪ ಒಡೆಯರಪಾಳ್ಯ ಬಸವಣ್ಣ ಇನ್ನಿತರೆ ಬಿಜೆಪಿ ಕಾರ್ಯಕರ್ತರು ಇದ್ದರು.

Please follow and like us:
0
http://bp9news.com/wp-content/uploads/2018/05/HANURU-01-1.jpghttp://bp9news.com/wp-content/uploads/2018/05/HANURU-01-1-150x150.jpgBP9 Bureauಚಾಮರಾಜನಗರರಾಜಕೀಯಹನೂರು: ಮುಖ್ಯಮಂತ್ರಿ  ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡುವಲ್ಲಿ ವಿಫಲರಾಗಿದ್ದಾರೆ, ದಿನಕ್ಕೂಂದು ಹೇಳಿಕೆ ನೀಡುವ ಮೂಲಕ  ಇದು ಸಮ್ಮಿಶ್ರ ಸರ್ಕಾರ, ಇದು ನನ್ನ ಒಬ್ಬನ ತಿರ್ಮಾನವಲ್ಲ ಎಲ್ಲಾರ ಅಭಿಪ್ರಾಯ ಪಡೆದು ಸಾಲ ಮನ್ನಾ ಮಾಡಬೇಕು ಎನ್ನುತ್ತಾರೆ ಎಂದು ಮಾಜಿ ಶಾಸಕಿ ಪರಿಮಳನಾಗಪ್ಪ ಆರೋಪಿಸಿದರು. ಹನೂರು ಪಟ್ಟಣದ ಪೆಟ್ರೋಲ್ ಬಂಕ್‍ನಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಾಣ ಮಾಡಿ ಘೋಷಣೆಗಳನ್ನು ಕೂಗುತ್ತಾ ನಂತರ ವಿಶೇಷ ತಹಶೀಲ್ದಾರ್ ಕಛೇರಿಗೆ...Kannada News Portal