ಚಾಮರಾಜನಗರ : ನಮ್ಮಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಮುಂದುವರೆದ tತ್ರಜ್ಞಾನದ ಯುಗದಲ್ಲೂ ವಿಜ್ಞಾನಕ್ಕೂ ಮಿರಿದ ಸವಾಲಿನ ಘಟನೆಗಳು ಕಾಣ ಸಿಗುತ್ತದೆ. ಅದರಲ್ಲೂ ಈ ಭಗವಂತನ ಸೃಷ್ಠಿ ಎಲ್ಲರನ್ನ ಚಕಿತ ಗೊಳಿಸುತ್ತದೆ. ಈ ಸಮಾಜದಲ್ಲಿನ ಕೆಲವು ಸೃಷ್ಟಿಗಳಿಗೆ ಉತ್ತರ ಸಿಕ್ಕರೆ, ಇನ್ನು ಕೆಲವುದಕ್ಕೆ ಉತ್ತರವೇ ಸಿಗದೆ ನಿಗೂಢವಾಗಿಯೇ ಇರುತ್ತದೆ. ಇಂತಹ ಒಂದು ನಿಗೂಢವಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಹೌದು ಚಾಮರಾಜನಗರ ಜಿಲ್ಲೆಯ  ಗುಂಡ್ಲುಪೇಟೆಯಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ.  ಇಲ್ಲಿಯ ನಾಯಕರ ಬೀದಿಯ 14ನೇ ವಾರ್ಡ್​​ನ ಶಿವಮ್ಮ ಎಂಬುವವರ ಮನೆಯ ಮುಂದೆ ಒಂದು ಕಲ್ಲು ಉದ್ಭವವಾಗಿದೆ. ಆ ಜಾಗದಲ್ಲಿ ಮೊದಲು ಏನು ಇರಲಿಲ್ಲವಾಗಿತ್ತು. ಆದರೆ ಕಳೆದ ಎರಡು ದಿನದ ಹಿಂದೆ ತನ್ನಿಂದ ತಾನೆ ಒಂದು ಕಲ್ಲು ಉದ್ಭವಾಗಿದ್ದು, ಅದರ ಮೇಲೆ ಕಣ್ಣಿನ ಆಕರ ಕೂಡಾ ಮೂಡಿದೆ. ಇದನ್ನು ನೋಡಿದ ಜನರು ಆ ಕಲ್ಲಿಗೆ ಪೂಜೆ ಸಲ್ಲಿಸಿದ್ದಾರೆ. ಅದಾ ನಂತರ ಮತ್ತೊಂದು ಆಶ್ಚರ್ಯಕರ ಘಟನೆ ನಡೆದಿದ್ದು, ಆ ಉದ್ಭವವಾದ ಕಲ್ಲಿನ ಸುತ್ತ ಒಂದು ಹಾವು ಬಂದು ಸುತ್ತುತ್ತಿದ್ದು, ಅಲ್ಲಿಂದ ಕದಲುತ್ತಿಲ್ಲವಂತೆ.ಇದು ಜನರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇನ್ನು ಈ ಕಲ್ಲು ಉದ್ಭವವಾದ ಜಾಗದ ಹತ್ತಿರ ಇರುವ ಮನೆಯಲ್ಲಿ ಮಾದಮ್ಮ ಎನ್ನುವ ಪಟಾಲಮ್ಮನ ಭಕ್ತೆ ವಾಸವಾಗಿದ್ದು, ಅವರು ಸತ್ತು ಈಗ 5 ವರ್ಷ ಆಗಿದೆಯಂತೆ. ಈ ಘಟನೆಯನ್ನು ಸಾರ್ವಜನಿಕರು ಈ ನಿಗೂಢ ಸೃಷ್ಠಿಗೆ ತಳಕು ಹಾಕುತ್ತಿದ್ದಾರೆ. ಇನ್ನೊಂದೆಡೆ ಪಟ್ಟಣದ ಅಲ್ಪ ದೂರದಲ್ಲಿರುವ ಪಟಾಲಮ್ಮನ ದೇವಾಲಯದಲ್ಲಿ ಕಳೆದ ಶುಕ್ರವಾರ ಮತ್ತು ಶನಿವಾರ ಜಾತ್ರೆ ನಡೆದಿದ್ದು, ಅದಾದ 2 ದಿನದಲ್ಲೇ ಈ ಕಲ್ಲು ಉದ್ಭವವಾಗಿದ್ದು, ಸಾಕ್ಷಾತ್​​​ ಪಟಾಲಮ್ಮನೇ  ಪ್ರತ್ಯಕ್ಷವಾಗಿದ್ದಾಳೆ ಎಂದು ಭಕ್ತರು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಸೃಷ್ಠಿಯ ಈ ವಿಚಿತ್ರವಾದ ಘಟನೆಗೆ ಹಲವರು ಭಗವಂತ ಸ್ವರೂಪ ನೀಡುತ್ತಿದ್ದರೆ, ಕೆಲವರು ಹಿಗೂಉಂಟೆ ಎನ್ನುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-17-at-3.01.46-PM-1024x768.jpeghttp://bp9news.com/wp-content/uploads/2018/06/WhatsApp-Image-2018-06-17-at-3.01.46-PM-150x150.jpegBP9 Bureauಚಾಮರಾಜನಗರಪ್ರಮುಖಚಾಮರಾಜನಗರ : ನಮ್ಮಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಮುಂದುವರೆದ tತ್ರಜ್ಞಾನದ ಯುಗದಲ್ಲೂ ವಿಜ್ಞಾನಕ್ಕೂ ಮಿರಿದ ಸವಾಲಿನ ಘಟನೆಗಳು ಕಾಣ ಸಿಗುತ್ತದೆ. ಅದರಲ್ಲೂ ಈ ಭಗವಂತನ ಸೃಷ್ಠಿ ಎಲ್ಲರನ್ನ ಚಕಿತ ಗೊಳಿಸುತ್ತದೆ. ಈ ಸಮಾಜದಲ್ಲಿನ ಕೆಲವು ಸೃಷ್ಟಿಗಳಿಗೆ ಉತ್ತರ ಸಿಕ್ಕರೆ, ಇನ್ನು ಕೆಲವುದಕ್ಕೆ ಉತ್ತರವೇ ಸಿಗದೆ ನಿಗೂಢವಾಗಿಯೇ ಇರುತ್ತದೆ. ಇಂತಹ ಒಂದು ನಿಗೂಢವಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. var domain = (window.location != window.parent.location)? document.referrer : document.location.href; var...Kannada News Portal