ಚಾಮರಾಜನಗರ : ವಿದ್ಯಾರ್ಥಿನಿಯರು  ಸಂಚಾರಿ ನಿಯಮ ಪಾಲನೆ ಮಾಡುವ ಜೊತೆಗೆ ವಾಹನ ಚಾಲನಾ ಪರವಾನಗಿ ಮತ್ತು ವಾಹನ ವಿಮೆ  ಪಾಲಿಸಿಯನ್ನು  ನೊಂದಾಣಿಸಿಕೊಳ್ಳುವುದು  ಅತಿ ಮುಖ್ಯವಾಗಿರುತ್ತದೆ ಎಂದು ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸತೀಶ್‍ಕುಮಾರ್ ಅರಸು ತಿಳಿಸಿದರು.

ನಗರದ  ಜೆಎಸ್‍ಎಸ್ ಮಹಿಳಾ ಪದವಿ ಕಾಲೇಜಿನಲ್ಲಿ  ಸಂಚಾರ  ಪೊಲೀಸ್ ಠಾಣೆಯ ವತಿಯಿಂದ ನಡೆದ ರಸ್ತೆ ಸಂಚಾರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚಾರಿ ಸುರಕ್ಷತಾ ನಿಯಮಗಳನ್ನು ಪಾಲನೆ  ಮಾಡಿದರೆ ಅಪಘಾತಗಳು ತಪ್ಪುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ  ಶಿಸ್ತು ಪಾಲನೆ ರೂಡಿಸಿಕೊಳ್ಳಬೇಕು. ಅನೇಕ ಘಟನಾವಳಿಗಳನ್ನು  ನೋಡಿದ್ದು, ಇಂತಹ ಕಹಿ ಘಟನೆಗಳು ತಮ್ಮ ಜೀವನದಲ್ಲಿ  ನಡೆಯದಂತೆ ಮಾಡುವುದು ನಿಮ್ಮ ಕೈಯಲ್ಲಿದೆ. ಕೇವಲ ಪೊಲೀಸರು ಕೇಳುತ್ತಾರೆ, ದಂಡ ವಿಧಿಸುತ್ತಾರೆ ಎಂಬ ಕಾರಣಕ್ಕೆ  ಹೆಲ್ಮೆಟ್ ಹಾಕಿಕೊಳ್ಳಬೇಡಿ, ನಿಮ್ಮ ಅಮೂಲ್ಯ ಜೀವವನ್ನು ಉಳಿಸುವ ಸಲುವಾಗಿ  ಧರಿಸಬೇಕು ಎಂದರು.

ಚಾಮರಾಜನಗರ ಜಿಲ್ಲಾ ಕೇಂದ್ರ ರಸ್ತೆಗಳು ಇನ್ನು ಬಹಳವಾಗಿ ಸುಧಾರಣೆಯಾಗಬೇಕು. ಎಲ್ಲೆಂದರಲ್ಲಿ  ಧೂಳು ಮಾಯವಾಗಿದೆ. ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ.  ಮುಂದಿನ ದಿನಗಳಲ್ಲಿ ಇವೆಲ್ಲವು  ಸರಿಯಾಗುತ್ತವೆ. ಈ ನಿಟ್ಟಿನಲ್ಲಿ ತಾವುಗಳು ರಸ್ತೆ  ಸುರಕ್ಷತೆಯ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಟ್ರಾಫಿಕ್ಸ್ ಸಿಗ್ನಲ್‍ಗಳನ್ನು  ನೋಡಿ ಮುಂದೆ ಸಾಗಬೇಕು ಎಂದು ತಿಳಿಸಿದರು.

ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ವಾಹನ ಇನ್ಸೂರೆನ್ಸ್ ಮಾಡಿರುವುದರಿಂದ  ಹೆಚ್ಚಿನ ಉಪಯೋಗವಿದೆ. ಅರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಿದೆ.  ವಾಹನ ವಿಮೆ  ಹಾಗು ಡ್ರೈವಿಂಗ್ ಲೈಸನ್ಸ್ ಇಲ್ಲದೇ  ವಾಹನ ಚಲಿಸಿ, ಅಪಘಾತ ಮಾಡಿದರೆ  ಕ್ರಿಮಿನಾಲ್ ಮೊಕದ್ದಮೆ ದಾಖಲಿಸುವ ಸಾಧ್ಯತೆಗಳಿವೆ. ಇದನ್ನು ಅರಿತು ತಾವೆಲ್ಲರು ಜಾಗೃತಬೇಕು ಎಂದರು.

ಕಾಲೇಜಿನ ಪ್ರಾಂಶಪಾಲ ಎ.ಜೆ. ಶಿವಕುಮಾರ್ ಮಾತನಾಡಿ, ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಲು ಸಂಚಾರಿ ನಿಯಮಗಳನ್ನುಪಾಲನೆ ಮಾಡಬೇಕು. ಈಗ ಸಂಚಾರಿ ಪೊಲೀಸ್ ಠಾಣೆಯವರು ತೋರಿಸಿದ ವಿಡಿಯೋಗಳನ್ನಾದರು ನೋಡಿ ನಾವೆಲ್ಲರು ಎಚ್ಚೆತ್ತುಕೊಳ್ಳಬೇಕಾಗಿದೆ.  ಮನೆಯಿಂದ ಹೊರ ಬಂತು, ಮತ್ತೇ ಸುರಕ್ಷಿತವಾಗಿ ಮನೆಗೆ ಮರಳಿದರೆ  ಸಾಕು ಎನ್ನುವಂತಾಗಿವೆ. ಈ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳಾದ ತಾವುಗಳು ವಾಹನ ಚಾಲನೆ ಮಾಡುವಾಗ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ನೆರ ಹೊರೆಯವರು ಹಾಗು ಸಂಬಂಧಿಕರಲ್ಲಿ ಜಾಗೃತಿ   ಮೂಡಿಸಬೇಕು ಎಂದು ತಿಳಿಸಿದರು.

ಟ್ರಾಫಿಕ್ ಪೊಲೀಸ್ ಠಾಣೆಯ ಮುಖ್ಯಪೇದೆಗಳಾದ ಎಸ್.ವಿ. ಮಂಜು, ಎಂ. ಕುಮಾರ್ ಅವರು ಸಂಚಾರಿ ನಿಯಮಗಳ ಪಾಲನೆ ಮತ್ತು  ಅದರಿಂದಾಗುವ ಅನುಕೂಲ ಬಗ್ಗೆ  ತಿಳುವಳಿಕೆ ಮೂಡಿಸಿದರು. ಕಾರ್ಯಕ್ರಮದಲ್ಲಿ  ಕಾಲೇಜಿನ  ಉಪನ್ಯಾಸಕರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/03/JSS.jpghttp://bp9news.com/wp-content/uploads/2018/03/JSS-150x150.jpgBP9 Bureauಚಾಮರಾಜನಗರಚಾಮರಾಜನಗರ : ವಿದ್ಯಾರ್ಥಿನಿಯರು  ಸಂಚಾರಿ ನಿಯಮ ಪಾಲನೆ ಮಾಡುವ ಜೊತೆಗೆ ವಾಹನ ಚಾಲನಾ ಪರವಾನಗಿ ಮತ್ತು ವಾಹನ ವಿಮೆ  ಪಾಲಿಸಿಯನ್ನು  ನೊಂದಾಣಿಸಿಕೊಳ್ಳುವುದು  ಅತಿ ಮುಖ್ಯವಾಗಿರುತ್ತದೆ ಎಂದು ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸತೀಶ್‍ಕುಮಾರ್ ಅರಸು ತಿಳಿಸಿದರು. ನಗರದ  ಜೆಎಸ್‍ಎಸ್ ಮಹಿಳಾ ಪದವಿ ಕಾಲೇಜಿನಲ್ಲಿ  ಸಂಚಾರ  ಪೊಲೀಸ್ ಠಾಣೆಯ ವತಿಯಿಂದ ನಡೆದ ರಸ್ತೆ ಸಂಚಾರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚಾರಿ ಸುರಕ್ಷತಾ ನಿಯಮಗಳನ್ನು ಪಾಲನೆ  ಮಾಡಿದರೆ ಅಪಘಾತಗಳು ತಪ್ಪುತ್ತದೆ. ವಿದ್ಯಾರ್ಥಿ...Kannada News Portal