ಚಾಮರಾಜನಗರ : ಜಿಲ್ಲೆಯ ಹೊನ್ನಹಳ್ಳಿ ಬಳಿ ಇರುವ ಎಣ್ಣೆ ಹೊಳೆ ಮಾದಪ್ಪ ದೇವಾಲಯಕ್ಕೆ  ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ. ಶ್ರಾವಣ ಮಾಸ ವಿಶೇಷ ಪೂಜೆಗಳನ್ನು ಮುಗಿಸಿ ಭಕ್ತಾದಿಗಳು ಮತ್ತು ಅರ್ಚಕರು ಮನೆಗೆ ತೆರಳಿದ್ದಾರೆ. ಎಂದಿನಂತೆ ಬೆಳಿಗ್ಗೆ ಎದ್ದು ದೇವಾಲಯದ ಬಾಗಿಲನ್ನು ತೆಗುಯಲು ಅರ್ಚಕರು ಬಂದಾಗ  ಅವರಿಗೆ ಒಂದು ಶಾಕ್ ಕಾದಿತ್ತು.

ರಾತ್ರೋ ರಾತ್ರಿ ಯಾರೋ ದೇವಾಲಯದ ಬಾಗಿಲನ್ನು ಒಡೆದು ಒಳಗೆ ನುಗ್ಗಿ ಬಾಗಿಲನ್ನು ಮುರಿದು ಅಲ್ಲಿದ್ದ ಹುಂಡಿ ಒಡೆದು ಲಕ್ಷಾಂತರ ರೂ ಹಣಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಎಂಟು ತಿಂಗಳಿನಿಂದ ಕಾಣಿಕೆಹುಂಡಿಯಲ್ಲಿದ್ದ ಹಣವನ್ನು ಎಣಿಕೆಯ ಕಾರ್ಯಕೈಗೊಂಡಿಲ್ಲವಾಗಿತ್ತು. ಈ ಬಗ್ಗೆ ತಿಳಿದವರೇ  ಸರಿಹೊತ್ತಿನ್ನಲ್ಲಿ ದೇವಾಲಯಕ್ಕೆ ಬಂದು ಕಾಣಿಕೆ ಡಬ್ಬಕ್ಕೆ ಕನ್ನಹಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸಧ್ಯ ಈ ಪ್ರಕರಣ ಸಂಬಂಧಿಸಿದಂತೆ  ಸ್ಥಳೀಯ ಪೊಲೀಸ್ ಠಾಣೆಯೆಲ್ಲಿ ದೂರುದಾಖಲಾಗಿದೆ.

Please follow and like us:
0
http://bp9news.com/wp-content/uploads/2018/09/Karnatakada-Miditha-1.jpeghttp://bp9news.com/wp-content/uploads/2018/09/Karnatakada-Miditha-1-150x150.jpegBP9 Bureauಚಾಮರಾಜನಗರಪ್ರಮುಖಚಾಮರಾಜನಗರ : ಜಿಲ್ಲೆಯ ಹೊನ್ನಹಳ್ಳಿ ಬಳಿ ಇರುವ ಎಣ್ಣೆ ಹೊಳೆ ಮಾದಪ್ಪ ದೇವಾಲಯಕ್ಕೆ  ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ. ಶ್ರಾವಣ ಮಾಸ ವಿಶೇಷ ಪೂಜೆಗಳನ್ನು ಮುಗಿಸಿ ಭಕ್ತಾದಿಗಳು ಮತ್ತು ಅರ್ಚಕರು ಮನೆಗೆ ತೆರಳಿದ್ದಾರೆ. ಎಂದಿನಂತೆ ಬೆಳಿಗ್ಗೆ ಎದ್ದು ದೇವಾಲಯದ ಬಾಗಿಲನ್ನು ತೆಗುಯಲು ಅರ್ಚಕರು ಬಂದಾಗ  ಅವರಿಗೆ ಒಂದು ಶಾಕ್ ಕಾದಿತ್ತು.  var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal