ಚಾಮರಾಜನಗರ: ಅಚ್ಚ ಕನ್ನಡಿಗನಾದ ನನ್ನನ್ನು ಶಾಸನ ಸಭೆಗೆ ಕಳುಹಿಸಿಕೊಡಿ ಎಂದು ಚಾ.ನಗರದ ಜನತೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

ಚಾಮರಾಜನಗರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿ ಸಿರುವ ವಾಟಾಳ್ ನಾಗರಾಜ್, ಅವರ ಜೊತೆ ಪುತ್ರಿ ಅನುಪಮಾ ಹಾಗು ಮೊಮ್ಮಗ ಚಂದನ್,  ಹುಲ್ಲೆಪುರ, ಮಂಗಲಹೊಸೂರು, ಮಂಗಲ, ಮಸಗಾಪುರ, ಕಾಡಹಳ್ಳಿ, ಜಾಲಹಳ್ಳಿಹುಂಡಿ, ದೊಡ್ಡರಾಯಪೇಟೆ, ಕೂಡ್ಲೂರು, ಬೂದಿತಿಟ್ಟು, ಹಂಡರಕಳ್ಳಿ, ಮಾದಪುರ ಗ್ರಾಮಗಳಲ್ಲಿ ತೆರದ ವಾಹನದಲ್ಲಿ ಮತಯಾಚನೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ಚುನಾವಣೆಯಲ್ಲಿ ಒಳ್ಳೆಯದಕ್ಕಿಂತ ಹೆಚ್ಚಾಗಿ ಅಪ ಪ್ರಚಾರ ಮಾಡುವವರು ಜಾಸ್ತಿ ಇರುತ್ತಾರೆ. ಅವರಿವರ ಮಾತಿಗೆ ಬೆಲೆ ಕೊಡದೆ ನನ್ನನ್ನು ನಂಬಿ ಬೆಂಬಲಿಸಿ. ನಾನು ಚಾ.ನಗರದಲ್ಲಿ ಗೆದ್ದರೆ ನಾಡಿನ ಸಮಸ್ತ 6 ವರೆ ಕೋಟಿ ಕನ್ನಡಿಗರ ಗೆಲುವು. ಜೊತೆಗೆ ಚಾ.ನಗರಕ್ಕೆ ಶಕ್ತಿ ಬರುತ್ತದೆ, ಗೌರವ ಬರುತ್ತದೆ ಎಂದು ವಾಟಾಳ್ ನುಡಿದರು.

ಶಾಸನ ಸಭೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಚುನಾವಣೆಗೆ ಸ್ಪರ್ದಿಸಿ ಬರುತ್ತಿದ್ದಾರೆ. ತಮಿಳರು ಗೆದ್ದು ಬರುತ್ತಾರೆ. ಅಚ್ಚ ಕನ್ನಡಿಗನಾದ ನನ್ನನ್ನು ಚಾ.ನಗರದ ಜನತೆ ಶಾಸನ ಸಭೆಗೆ ಕಳುಹಿಸಿಕೊಡಿ. ಕ್ಷೇತ್ರದ ಜನತೆ ಮೊದಲಿನಿಂದಲೂ ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸ, ಅಭಿಮಾನ ಇಟ್ಟು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ಈ ಬಾರಿಯೂ ಸಹ ನನಗೆ ಮತ ಹಾಕುವುದರ ಮೂಲಕ ಶಾಸನ ಸಭೆಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇವರನ್ನು ಅವರು, ಅವರನ್ನು ಇವರು, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಾಲಿಗೆ ಭದ್ರ ಇಲ್ಲ. ನಾಟಕವಾಡುತ್ತಿದ್ದಾರೆ. ರಾಜ್ಯದಲ್ಲಿ ನಾನಾ ಸಮಸ್ಯೆಗಳಿವೆ ಅದನ್ನು ಬಿಟ್ಟು ವಯಕ್ತಿಕವಾಗಿ, ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ನನ್ನನ್ನು ಗೆಲ್ಲಿಸಿ ಕೊಟ್ಟರೆ ಚಾ.ನಗರ ಸೇರಿದಂತೆ ನಾಡಿದ ಸಮಗ್ರ ಕನ್ನಡಿಗರ ಧ್ವನಿಯಾಗಿ ಯಾವುದೇ ಸಮಸ್ಯೆ ಇದ್ದರೂ ಸರ್ಕಾರದ ಜೊತೆ ಸಮಗ್ರವಾಗಿ ಚರ್ಚಿಸಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಯವುದೆ ಊರುಗಳಿಗೆ ಹೋಗಲಿ ನೀವು ಮಾಡಿದ ಕೆಲಸವೇ ಶಾಶ್ವತವಾಗಿ ಉಳಿದಿವೆ. ಇನ್ನು ಕೂಡ ನೆನೆಪಿಸಿ ಕೊಳ್ಳುತ್ತಿದ್ದೇವೆ. ಇದೇ ನಿಮ್ಮ ಗೆಲುವಿಗೆ ಶ್ರೀರಕ್ಷೆ ಯಾಗಿದೆ ಎಂದು ಮತದಾರರು ಹೇಳುತ್ತಿದ್ದಾರೆ, ನನಗೆ, ನನ್ನ ಮಗಳಿಗೆ, ನನ್ನ ಮೊಮ್ಮಗನಿಗೆ ಹಾರ ತುರಾಯಿ ಹಾಕಿ, ಬೆಲ್ಲದ ಆರತಿ ಎತ್ತಿ ತಮ್ಮ ತಮ್ಮ ಗ್ರಾಮಗಳಿಗೆ ಬರಮಾಡಿಕೊಳ್ಳುತ್ತಿದ್ದಾರೆ ಎಂದು ವಾಟಾಳ್ ಹೇಳಿದರು.

ಮತಯಾಚನೆ ಮಾಡುವಾಗ ವಾಟಾಳ್ ನಾಗರಾಜ್ ಅವರ ಪುತ್ರಿ ಅನುಪಮ, ಮೊಮ್ಮಗ ಚಂದನ್, ದಳಪತಿವೀರತಪ್ಪ, ಸಿ,ಜಿ,ನಾಗೇಶ್, ಶ್ರೀನಿವಾಸಗೌಡ, ರಾಜು, ರಾಜಗೋಪಾಲ, ವರದರಾಜು, ನಿಂಗರಾಜು, ಚಿಕ್ಕಅಂಕಶೆಟ್ಟಿ, ಶಿವಲಿಂಗಮೂರ್ತಿ, ನಿಂಗಶೆಟ್ಟಿ, ಸಿ.ಜಿ.ಬಾಬು, ಲಿಂಗಣ್ಣನಾಯಕ, ಗುರುಸ್ವಾಮಿ, ನಂಜುಂಡಸ್ವಾಮಿ, ಬಸವರಾಜು, ನಾಗರಾಜು, ರಾಮಣ್ಣ, ತಿಬ್ಬಣ್ಣ, ಲಕ್ಷಣ್, ಜಯರಾಮನಾಯಕ, ಗುರುಮಲ್ಲಪ್ಪ, ಬಸವರಾಜು, ಚಿಕ್ಕಅಂಕಶೆಟ್ಟಿ, ಮಹದೇವಸ್ವಾಮಿ, ವರದನಾಯಕ, ಹೇಮಂತ್  ಸೇರಿದಂತೆ ಇತರರು ಇದ್ದರು.

Please follow and like us:
0
http://bp9news.com/wp-content/uploads/2018/05/Vatal-Nagaraj.jpghttp://bp9news.com/wp-content/uploads/2018/05/Vatal-Nagaraj-150x150.jpgBP9 Bureauಚಾಮರಾಜನಗರಪ್ರಮುಖರಾಜಕೀಯಚಾಮರಾಜನಗರ: ಅಚ್ಚ ಕನ್ನಡಿಗನಾದ ನನ್ನನ್ನು ಶಾಸನ ಸಭೆಗೆ ಕಳುಹಿಸಿಕೊಡಿ ಎಂದು ಚಾ.ನಗರದ ಜನತೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ಚಾಮರಾಜನಗರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿ ಸಿರುವ ವಾಟಾಳ್ ನಾಗರಾಜ್, ಅವರ ಜೊತೆ ಪುತ್ರಿ ಅನುಪಮಾ ಹಾಗು ಮೊಮ್ಮಗ ಚಂದನ್,  ಹುಲ್ಲೆಪುರ, ಮಂಗಲಹೊಸೂರು, ಮಂಗಲ, ಮಸಗಾಪುರ, ಕಾಡಹಳ್ಳಿ, ಜಾಲಹಳ್ಳಿಹುಂಡಿ, ದೊಡ್ಡರಾಯಪೇಟೆ, ಕೂಡ್ಲೂರು, ಬೂದಿತಿಟ್ಟು, ಹಂಡರಕಳ್ಳಿ, ಮಾದಪುರ ಗ್ರಾಮಗಳಲ್ಲಿ ತೆರದ ವಾಹನದಲ್ಲಿ ಮತಯಾಚನೆ ಮಾಡಿದರು. ನಂತರ...Kannada News Portal