ಚಾಮರಾಜನಗರ : ಶಿಕ್ಷಕ ಅಂದ್ರೆ ಪ್ರತ್ಯಕ್ಷ ದೇವರು. ಕತ್ತಲು ತುಂಬಿದ ಬಾಳನ್ನು ಬೆಳಕಿನತ್ತ ತೆಗೆದುಕೊಂಡು ಹೋಗುವವನೇ ಶಿಕ್ಷಕ. ಹೀಗೆ ಶಿಕ್ಷಕನ ಬಗ್ಗೆ ಹಲವು ಗೌರವಯುತ ಮಾತುಗಳು ಕೇಳಿಬರುತ್ತಿವೆ. ಆದರೆ ಇಲ್ಲೊಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ, ಆತನ ಬಾಳನ್ನು ಅಂಧಕಾರಕ್ಕೆ ನೂಕಿದ್ದಾನೆ.

ಹೌದು. ಇಂತಹದೊಂದು ಅಮಾನವೀಯ ಘಟನೆ ನಡೆದಿರುವುದು ಚಾಮರಾಜನಗರದಲ್ಲಿ. ಅಲ್ಲಿನ ರಾಮಸಮುದ್ರ ಬಡಾವಣೆಯ ನಿವಾಸಿಗಳಾದ ಸೋಮೇಶ್, ರತ್ನಮ್ಮ ಎಂಬುವವರ ಪುತ್ರ ಗಿರಿಮಲ್ಲೇಶ್ ಎಂಬ ಎಂಟನೇ ತರಗತಿ ಬಾಲಕನೇ ಶಿಕ್ಷಕನ ಏಟಿಗೆ ಕಣ್ಣು ಕಳೆದುಕೊಂಡವನು. ಸದಾ ಪಠ್ಯ ಮತ್ತ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದ ಬಾಲಕ ಸಹಪಾಠಿಗಳೊಂದಿಗೆ ಮಾತನಾಡಿದ್ದಕ್ಕೇ ಪ್ರಭಾರ ಮುಖ್ಯಶಿಕ್ಷಕ ಯೋಸೆಫ್ ಎಂಬ ಕಿರಾತಕನಿಂದ ಏಟು ತಿಂದು ಕಣ್ಣು ಕಳೆದುಕೊಂಡಿದ್ದಾನೆ. ಜನವರಿ ತಿಂಗಳಲ್ಲಿ ಘಟನೆ ನಡೆದಾಗ ವಿಷಯವನ್ನು ಯಾರಿಗಾದರೂ ಹೇಳಿದರೆ ಟಿಸಿ ಕೊಡುತ್ತೇನೆ ಎಂದು ಹೆದರಿಸಿದ ಶಿಕ್ಷಕ, ಸತತ ಆರು ತಿಂಗಳಿನಿಂದ ವಿದ್ಯಾರ್ಥಿಯ ಕಣ್ಣಿಗೆ ನಿತ್ಯವೂ ಔಷಧ ಹಾಕುತ್ತಾ ಬಂದಿದ್ದಾನೆ. ಆದರೆ ಕೊನೆಗೂ ಎಡಗಣ್ಣು ಕಾಣದಂತಾದಾಗ ವಿಷಯ ತಡವಾಗಿ ಬಯಲಾಗಿದೆ. ಇನ್ನು ಬಡ ಕುಟುಂಬದ ಕುಡಿಯಾದ ಗಿರಿಮಲ್ಲೇಶ್ ಕಣ್ಣು ಕಳೆದುಕೊಂಡಿರುವುದರಿಂದ ಹೆತ್ತವರ ಗೋಳು ಹೇಳತೀರದಾಗಿದೆ.

ಇನ್ನು ಕಣ್ಣು ಕಳೆದುಕೊಂಡಿರುವ ಬಾಲಕನಿಗೆ ಮೈಸೂರು, ಬೆಂಗಳೂರು ಮಾತ್ರವಲ್ಲದೆ, ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಅರವಿಂದ ಕಣ್ಣಾಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲೇ ಹೋದರು ಎಡಗಣ್ಣಿನ ನರ ಸಂಪೂರ್ಣ ನಿಷ್ಕ್ರಿಯವಾಗಿದೆ. ಇನ್ನು ಮುಂದೆ ಎಡಗಣ್ಣಿನ ದೃಷ್ಟಿ ಬರುವುದಿಲ್ಲ ಎಂದೇ ಹೇಳಲಾಗಿದೆ. ಇನ್ನು ತಮ್ಮ ಮಗನಿಗೆ ಕಣ್ಣು ಬರುವುದಿಲ್ಲ ಎಂದು ತಿಳಿದ ಪೋಷಕರು, ಕೃತ್ಯ ಎಸಗಿದ ಶಿಕ್ಷಕನ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಚಾಮರಾಜನಗರ ಕ್ಷೇತ್ರ ಶಿಕ್ಷಣಾಧಿಕಾರಿಯೂ ಸಹ ಶಾಲೆಗೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದು, ಆರೋಪಿ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಆದರೆ ಜೀವನ ಪೂರ್ತಿ ಒಂದು ಕಣ್ಣು ಕಳೆದುಕೊಂಡ ಬಾಲಕನ ಗತಿಯೇನು? ಆತನ ಮುಂದಿನ ಭವಿಷ್ಯವೇನು ಅನ್ನೋ ಚಿಂತೆ ಪೋಷಕರನ್ನು ಕಾಡುತ್ತಿದೆ. ಒಟ್ಟಾರೆ ಮುಂದಾದರೂ ಶಿಕ್ಷಣ ಇಲಾಖೆ ಶಿಕ್ಷಕರ ದುಂಡಾವರ್ತನೆಗೆ ಬ್ರೇಕ್ ಹಾಕುತ್ತಾ ಅಂತ ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/06/Karnatakada-Miditha-20.jpeghttp://bp9news.com/wp-content/uploads/2018/06/Karnatakada-Miditha-20-150x150.jpegBP9 Bureauಚಾಮರಾಜನಗರಪ್ರಮುಖಚಾಮರಾಜನಗರ : ಶಿಕ್ಷಕ ಅಂದ್ರೆ ಪ್ರತ್ಯಕ್ಷ ದೇವರು. ಕತ್ತಲು ತುಂಬಿದ ಬಾಳನ್ನು ಬೆಳಕಿನತ್ತ ತೆಗೆದುಕೊಂಡು ಹೋಗುವವನೇ ಶಿಕ್ಷಕ. ಹೀಗೆ ಶಿಕ್ಷಕನ ಬಗ್ಗೆ ಹಲವು ಗೌರವಯುತ ಮಾತುಗಳು ಕೇಳಿಬರುತ್ತಿವೆ. ಆದರೆ ಇಲ್ಲೊಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ, ಆತನ ಬಾಳನ್ನು ಅಂಧಕಾರಕ್ಕೆ ನೂಕಿದ್ದಾನೆ. ಹೌದು. ಇಂತಹದೊಂದು ಅಮಾನವೀಯ ಘಟನೆ ನಡೆದಿರುವುದು ಚಾಮರಾಜನಗರದಲ್ಲಿ. ಅಲ್ಲಿನ ರಾಮಸಮುದ್ರ ಬಡಾವಣೆಯ ನಿವಾಸಿಗಳಾದ ಸೋಮೇಶ್, ರತ್ನಮ್ಮ ಎಂಬುವವರ ಪುತ್ರ ಗಿರಿಮಲ್ಲೇಶ್ ಎಂಬ ಎಂಟನೇ ತರಗತಿ...Kannada News Portal