ಚಾಮರಾಜನಗರ : ಗಡಿಜಿಲ್ಲೆ ಚಾಮರಾಜನಗರ ಇದೀಗ ಕೆಸರು ನಗರವಾಗಿ ಮಾರ್ಪಾಡಾಗಿದೆ. ಜಿಲ್ಲಾ ಕೇಂದ್ರವಾಗಿ ಇಪ್ಪತ್ತು ವರ್ಷಗಳಾದ್ರೂ ಸಹ ಅಭಿವೃದ್ಧಿಯನ್ನು ಕಾಣದ ಚಾಮರಾಜನಗರದಲ್ಲೀಗ ಮಳೆ ಬಿದ್ರೆ ರಸ್ತೆಗಳೆಲ್ಲವೂ ಕೆಸರುಮಯವಾಗಿರುತ್ತೆ. ಹೀಗಾಗಿಯೇ ನಗರದ ಸಾರ್ವಜನಿಕರು, ಆಕ್ರೋಶದಿಂದಲೇ ಚಾಮರಾಜನಗರವನ್ನು ಕೆಸರು ನಗರ ಎನ್ನತೊಡಗಿದ್ದಾರೆ.

ಹೌದು. ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ ಮಾರ್ಪಾಡಾಗಿ ಎರಡು ದಶಕಗಳೇ ಕಳೆದಿವೆ. ಆದ್ರೆ ಜಿಲ್ಲಾ ಕೇಂದ್ರದ ಸ್ವರೂಪ ಮಾತ್ರ ಇನ್ನೂ ಬದಲಾಗಿಲ್ಲ. ನಗರದಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆಗಳ ಸಮಸ್ಯೆಯಂತೂ ಸಾರ್ವಕಾಲಿಕವಾಗಿದೆ. ಅದರಲ್ಲೂ ಮಳೆಗಾಲದಲ್ಲಂತೂ ಚಾಮರಾಜನಗರದ ರಸ್ತೆಗಳಲ್ಲಿ ತಿರುಗಾಡುವುದು ಎಂದ್ರೆ ಇಲ್ಲಿನ ಸಾರ್ವಜನಿಕರಿಗೆ ಅದು ಪ್ರಯಾಸದ ಕೆಲಸವೇ ಆಗಿದೆ. ಈ ಸಮಸ್ಯೆಯಿಂದ ಯಾವಾಗ ಮುಕ್ತಿ ದೊರೆಯುತ್ತದೆಯೋ ಅನ್ನೋದು ಸಾರ್ವಜನಿಕರ ಅಳಲಾಗಿದೆ.

ಇನ್ನು ಜಿಲ್ಲಾ ಕೇಂದ್ರದ ಅಭಿವೃದ್ಧಿಗಾಗಿ ನಗರೋತ್ಥಾನದಿಂದ ಪ್ರತಿವರ್ಷವೂ ಹಣ ಬಿಡುಗಡೆಯಾಗುತ್ತೆ. ಕಳೆದ ವರ್ಷವೂ ೫೦ ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಒಂದಷ್ಟು ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಕಳೆದ 7 ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ರಸ್ತೆಯನ್ನು ಅಗೆಯಲಾಗಿರುವುದರಿಂದ ಮಳೆ ಬಿದ್ದಾಗ ಗುಂಡಿಗಳಲ್ಲಿ ನೀರು ನಿಲ್ಲುವುದು, ರಸ್ತೆಯೆಲ್ಲಾ ಕೆಸರು ಗದ್ದೆಯಾಗುವುದು ಮಾಮೂಲಿಯಾಗಿದೆ. ಇನ್ನು ಈ ಕಾಮಗಾರಿಗಳಲ್ಲಿ ಕಮಿಶನ್ ಸಿಗೋದ್ರಿಂದ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ, ಬೇಗ ಕಾಮಗಾರಿಗಳನ್ನು ಮುಕ್ತಾಯಗೊಳಿಸುತ್ತಿಲ್ಲ ಅನ್ನೋ ಆರೋಪ ಸಹ ಕೇಳಿಬಂದಿದೆ.

ಒಟ್ಟಾರೆ ಗಡಿಜಿಲ್ಲೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಂತೂ ಮೂಲಭೂತ ಸಮಸ್ಯೆಗಳದ್ದೇ ರಾಜ್ಯಭಾರವಾಗಿದೆ. ಇಲ್ಲಿನ ಅಭಿವೃದ್ಧಿ ವಿಚಾರಕ್ಕೆ ಬಂದ್ರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದೀಗ ಜಿಲ್ಲೆಯವರೇ ಇಬ್ಬರಿಗೆ ಸಚಿವ ಸ್ಥಾನ ದೊರಕಿದ್ದು, ಅಭಿವೃದ್ಧಿಗೆ ವೇಗ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/06/Karnatakada-Miditha-58.jpeghttp://bp9news.com/wp-content/uploads/2018/06/Karnatakada-Miditha-58-150x150.jpegBP9 Bureauಚಾಮರಾಜನಗರಚಾಮರಾಜನಗರ : ಗಡಿಜಿಲ್ಲೆ ಚಾಮರಾಜನಗರ ಇದೀಗ ಕೆಸರು ನಗರವಾಗಿ ಮಾರ್ಪಾಡಾಗಿದೆ. ಜಿಲ್ಲಾ ಕೇಂದ್ರವಾಗಿ ಇಪ್ಪತ್ತು ವರ್ಷಗಳಾದ್ರೂ ಸಹ ಅಭಿವೃದ್ಧಿಯನ್ನು ಕಾಣದ ಚಾಮರಾಜನಗರದಲ್ಲೀಗ ಮಳೆ ಬಿದ್ರೆ ರಸ್ತೆಗಳೆಲ್ಲವೂ ಕೆಸರುಮಯವಾಗಿರುತ್ತೆ. ಹೀಗಾಗಿಯೇ ನಗರದ ಸಾರ್ವಜನಿಕರು, ಆಕ್ರೋಶದಿಂದಲೇ ಚಾಮರಾಜನಗರವನ್ನು ಕೆಸರು ನಗರ ಎನ್ನತೊಡಗಿದ್ದಾರೆ.  ಹೌದು. ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ ಮಾರ್ಪಾಡಾಗಿ ಎರಡು ದಶಕಗಳೇ ಕಳೆದಿವೆ. ಆದ್ರೆ ಜಿಲ್ಲಾ ಕೇಂದ್ರದ ಸ್ವರೂಪ ಮಾತ್ರ ಇನ್ನೂ ಬದಲಾಗಿಲ್ಲ. ನಗರದಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆಗಳ ಸಮಸ್ಯೆಯಂತೂ ಸಾರ್ವಕಾಲಿಕವಾಗಿದೆ....Kannada News Portal