ಚಾಮರಾಜನಗರ : ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ದ, ಈಗಾಗಲೇ ರಾಜ್ಯದ ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ನಿಶ್ಚಯ ಮಾಡಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಬಿಜೆಪಿ ಪರವಾದ ಅಲೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರೋ. ಕೆ.ಆರ್. ಮಲ್ಲಿಕಾರ್ಜುನಪ್ಪ ತಿಳಿಸಿದರು.

ನಗರದ ಸಮೀಪದ ಸರ್ಕಾರಿ  ಪಾಲಿಟೆಕ್ನಿಕ್ ಬಳಿಯ ನಂಜನಗೂಡು- ಚಾ.ನಗರ ಮುಖ್ಯ ರಸ್ತೆಯ ಬದಿಯ ಕಟ್ಟಡದಲ್ಲಿ ಬಿಜೆಪಿ ನಗರ ಘಟಕದಿಂದ  ಈ ಬಾರಿ ಬಿಜೆಪಿ ಗೋಡೆ ಬರಹಕ್ಕೆ ಚಾಲನೆ ನೀಡಿ,ವಿಜಯದ ಸಂಕೇತವನ್ನು ತೋರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ  ನೇತೃತ್ವದಲ್ಲಿ ರಾಜ್ಯದಲ್ಲಿ ಚುನಾವಣೆಯ ನಡೆಯಲಿದ್ದು,  ಮಿಷನ್ 150ಕ್ಕು ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿಯೇ ಯಾವುದೇ ಅನುಮಾನ ಬೇಡ ಎಂದರು.

ಅಧೇ ರೀತಿಯಲ್ಲಿ ಜಿಲ್ಲೆಯಲ್ಲಿಯೂ ಸಹ ಬದಲಾವಣೆ ಗಾಳಿ ಬೀಸಿದೆ, ನಾಲ್ಕು ಕ್ಷೇತ್ರಗಳ  ಮತದಾರರು  ಈ ಬಾರಿ ಬಿಜೆಪಿ ಎಂಬ ಘೋಷಣೆಗೆ ಹೆಚ್ಚಿನ  ಒಲವು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಭೇಸತ್ತಿದ್ದಾರೆ. ಜಿಲ್ಲಾ ಕೇಂದ್ರದ ಅಧ್ವಾನವನ್ನು ಜನರು ನೋಡಿ ಕಾಂಗ್ರೆಸ್ ಆಢಳಿತ ಬಗ್ಗೆ ಭ್ರಮನಿರಶಗೊಂಡಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಇದನ್ನು ಅರಿತು ರಾಜ್ಯದ ಜನರು ಸಹ ಮೋದಿ ಅವರು ಕೈ ಬಲಪಡಿಸಲು ಮನಸ್ಸು ಮಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿಯು ಸಹ ಈ ಬಾರಿ ಬಿಜೆಪಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಗರ ಘಟಕದ ಅಧ್ಯಕ್ಷ ಸುಂದರರಾಜ್, ಗ್ರಾಮಾಂತರ ಘಟಕದ ಅಧ್ಯಕ್ಷ ಸುಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರಸ್ವಾಮಿ, ನೂರೊಂದುಶೆಟ್ಟಿ, ಪುಟ್ಟರಸು, ಶಾಂತಮೂರ್ತಿ, ಪುರುಷೋತ್ತಮ್, ಚಂದ್ರಶೇಖರ್, ಪ್ರಥ್ವಿರಾಜ್, ಚಂದ್ರಶೇಖರ್ ರಾವ್ ಮೊದಲಾದವರು ಇದ್ದರು.

Please follow and like us:
0
http://bp9news.com/wp-content/uploads/2018/03/BJP-NEWS.jpghttp://bp9news.com/wp-content/uploads/2018/03/BJP-NEWS-150x150.jpgBP9 Bureauಚಾಮರಾಜನಗರಚಾಮರಾಜನಗರ : ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ದ, ಈಗಾಗಲೇ ರಾಜ್ಯದ ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ನಿಶ್ಚಯ ಮಾಡಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಬಿಜೆಪಿ ಪರವಾದ ಅಲೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರೋ. ಕೆ.ಆರ್. ಮಲ್ಲಿಕಾರ್ಜುನಪ್ಪ ತಿಳಿಸಿದರು. ನಗರದ ಸಮೀಪದ ಸರ್ಕಾರಿ  ಪಾಲಿಟೆಕ್ನಿಕ್ ಬಳಿಯ ನಂಜನಗೂಡು- ಚಾ.ನಗರ ಮುಖ್ಯ ರಸ್ತೆಯ ಬದಿಯ ಕಟ್ಟಡದಲ್ಲಿ ಬಿಜೆಪಿ ನಗರ ಘಟಕದಿಂದ  ಈ ಬಾರಿ ಬಿಜೆಪಿ ಗೋಡೆ...Kannada News Portal