ಚಾಮರಾಜನಗರ : ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಮತ್ತು ಕನ್ನಡ- ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀಕೃಷ್ಣ ಜಯಂತಿಯನ್ನ ಆಚರಿಸಲಾಯ್ತು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ, ಜಿಲ್ಲಾಧಿಕಾರಿ.ಬಿ.ಬಿ.ಕಾವೇರಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಸಂಸ್ಕೃತ ಪಂಡಿತ್ ಆರ್.ಪ್ರದೀಪ್ ಕುಮಾರ್ ದೀಕ್ಷಿತ್ ಶ್ರೀಕೃಷ್ಣ ಒಬ್ಬ ಧರ್ಮ ರಕ್ಷಕ ಎಂದರು.

ಶ್ರೀ ಕೃಷ್ಣನ ವಿಶಿಷ್ಠವಾದ ಗುಣಗಳ ಬಗ್ಗೆ ಸರಿಯಾಗಿ ಅರಿಯದೆ, ಛೇಡಿಸುವಂತಹ ಕೆಲಸ  ಪ್ರಸ್ತುತದಲ್ಲಿ ನಡೆಯುತ್ತಿವೆ. ಕಪಟಿ, ಸ್ತ್ರೀ ಲೋಲ, ಹೀಗೆ ಅನೇಕ ವಿಚಾರಗಳಿಂದ ಶ್ರೀಕೃಷ್ಣನನ್ನು ಛೇಡಿಸುತ್ತಾರೆ. ಕೃಷ್ಣನ ಜನ್ಮ ಅಸುರರ ನಾಶ ಕ್ಕಾಗಿ ಆದಂತಹದ್ದು.ಕಂಶಾಸುರ, ಬಕಾಶುರ ಹೀಗೆ ಅನೇಕ ಅಸುರರನ್ನ ನಾಶ ಮಾಡುತ್ತಾನೆ. ಯಾಕೆಂದ್ರೆ ಧರ್ಮದ ಉದ್ಧಾರಕ್ಕಾಗಿ ಜನ್ಮತಾಳಿದವನು ವಸುದೇವ ತನಯ. ಪ್ರಸ್ತುತ ರಾಜನೀತಿಯನ್ನ ಅರಿತುಕೊಳ್ಳಬೇಕಾದ್ರೆ, ಶ್ರೀಕೃಷ್ಣ ನನ್ನ ಅರ್ಥ ಮಾಡಿಕೊಳ್ಳಬೇಕು.ಧರ್ಮಶ್ರೇಷ್ಠ, ರಾಜನೀತಿಜ್ಞ ಶ್ರೀಕೃಷ್ಣ. ಅವನನ್ನ ವಿವಿಧ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳುವಂತಹ ಪ್ರಯತ್ನ ಆಗಬೇಕಾಗಿದೆ ಎಂದು ತಿಳಿಸಿದರು.

ಮೈಸೂರು ಮತ್ತು ಚಾಮರನಗರದಲ್ಲಿ ವಿಜೃಂಭಣೆಯ ಕೃಷ್ಣ ಜನ್ಮಾಷ್ಠಮಿ :

ಎಲ್ಲಡೆ ಕೃಷ್ಣಜನ್ಮಾಷ್ಠಮಿಯನ್ನು ಕೃಷ್ಣ ಮತ್ತು ನಾರಾಯಣ ದೇವಾಲಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು, ಮುಂಜಾನೆಯಿಂದ ರಾತ್ರಿವರೆಗೂ ವಿಶೇಷ ಪೂಜೆ, ಅಲಂಕಾರದಿಂದ ದೇವರನ್ನು ಶೃಂಗರಿಸಿಲಾಗಿತ್ತು. ಇನ್ನು ಬೆಳಿಗ್ಗೆಯಿಂದ ಅಭಿಷೇಕ ಮತ್ತು ಬಗೆ ಬಗೆಯ ತಿಂಡಿತಿನಸುಗಳನ್ನು ಮುದ್ದು ಕೃಷ್ಣನಿಗೆ ನೈವೇದ್ಯಕ್ಕೆ ಇಡಲಾಗಿತ್ತು.
ಬಹುತೇಕ ದೇವಾಲಯಗಳಲ್ಲಿ ಜಗದ್ಧೋದಾರನಿಗೆ ಬೆಣ್ಣಯಿಂದ ಅಲಂಕರಿಸಲಾಗಿತ್ತು. ಇತ್ತ ಇಸ್ಕಾನ್ ಮತ್ತು ನಗರದ ದೇವಾಲಯಗಳಲ್ಲಿ ಭಕ್ತಾದಿಗಳೂ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆಯುತ್ತಿದ್ದು ಸಾಮಾನ್ಯವಾಗಿತ್ತು.

Please follow and like us:
0
http://bp9news.com/wp-content/uploads/2018/09/Karnatakada-Miditha-3.jpeghttp://bp9news.com/wp-content/uploads/2018/09/Karnatakada-Miditha-3-150x150.jpegBP9 Bureauಚಾಮರಾಜನಗರಪ್ರಮುಖಮೈಸೂರುಚಾಮರಾಜನಗರ : ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಮತ್ತು ಕನ್ನಡ- ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀಕೃಷ್ಣ ಜಯಂತಿಯನ್ನ ಆಚರಿಸಲಾಯ್ತು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ, ಜಿಲ್ಲಾಧಿಕಾರಿ.ಬಿ.ಬಿ.ಕಾವೇರಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಸಂಸ್ಕೃತ ಪಂಡಿತ್ ಆರ್.ಪ್ರದೀಪ್ ಕುಮಾರ್ ದೀಕ್ಷಿತ್ ಶ್ರೀಕೃಷ್ಣ ಒಬ್ಬ ಧರ್ಮ ರಕ್ಷಕ ಎಂದರು.  ಶ್ರೀ ಕೃಷ್ಣನ ವಿಶಿಷ್ಠವಾದ ಗುಣಗಳ ಬಗ್ಗೆ ಸರಿಯಾಗಿ ಅರಿಯದೆ, ಛೇಡಿಸುವಂತಹ ಕೆಲಸ  ಪ್ರಸ್ತುತದಲ್ಲಿ ನಡೆಯುತ್ತಿವೆ. ಕಪಟಿ, ಸ್ತ್ರೀ ಲೋಲ, ಹೀಗೆ ಅನೇಕ...Kannada News Portal