ಸಿನಿಮಾ ಟಾಕ್​ : ನಟಿಯರನ್ನು ಬಳಸಿಕೊಂಡು ಹೈ ಸೆಕ್ಸ್​ ಸ್ಕ್ಯಾಂಡಲ್​ ನಡೆಸುತ್ತಿದ್ದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕ, ತೆಲುಗು ಉದ್ಯಮಿ ಮತ್ತು ಆತನ ಪತ್ನಿಯನ್ನು ಚಿಕಾಗೋದಲ್ಲಿ ಪೊಲೀಸರು ಬಂಧಿಸಿದ್ದಾರೆ.  ವೇಶ್ಯಾವಾಟಿಕೆ  ನಡೆಸುತ್ತಿದ್ದ ತೆಲುಗು ಸಿನಿಮಾ   ನಿರ್ಮಾಪಕ ದಂಪತಿ ಇದೀಗ  ಪೊಲೀಸರ ಅತಿಥಿಗಳಾಗಿದ್ದಾರೆ. ಕಿಶನ್​​ ಅಲಿಯಾಸ್​ ಸಿರಾಜ್​ ಚೌನಪಟ್ಟಿ (34) ಮತ್ತು ಆತನ ಪತ್ನಿ ಚಂದ್ರಾ(31) ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ  ದಂಪತಿಗಳಾಗಿದ್ದಾರೆ.

ಈ ದಂಪತಿ ಟಾಲಿವುಡ್ ಸಹ ನಟಿಯರನ್ನು ಅಮೆರಿಕಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು. ಅಮೆರಿಕಾದಲ್ಲಿ ನಡೆಯುವ ಭಾರತೀಯ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸ್ಥಳೀಯ ಜಾಹಿರಾತುಗಳಲ್ಲಿ ನಿಮ್ಮ ಕಲೆಯನ್ನು ಪ್ರದರ್ಶಿಸುತ್ತೇವೆ ಅಂತಾ ಹೇಳಿ ಅವರನ್ನು ಈ ದಂಧೆಗೆ ದೂಡುತ್ತಿದ್ದರು.

ಚಿಕಾಗೋ ಜಿಲ್ಲೆಯ ನ್ಯಾಯಾಲಯಕ್ಕೆ ಆರೋಪಿ ದಂಪತಿ ವಿರುದ್ಧ 42 ಪುಟಗಳ ದೂರು ದಾಖಲಾಗಿದೆ. ದಂಪತಿ ಅಡ್ಡಕ್ಕೆ ಬರುವ ಒಬ್ಬ ವ್ಯಕ್ತಿಯಿಂದ 3 ಸಾವಿರ ಡಾಲರ್ (ಅಂದಾಜು 2 ಲಕ್ಷ ರೂ.) ಪಡೆಯುತ್ತಿದ್ರು. ತಾತ್ಕಾಲಿಕ ವೀಸಾ ಮುಖಾಂತರ ನಟಿಯರನ್ನು ಚಿಕಾಗೋ ಕರೆ ತಂದು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಡ ಹಾಕುತ್ತಿದ್ರು. ಬೆಲ್ಮಾಂಟ್ ಕ್ರಾಗಿನ್ ನಲ್ಲಿರುವ ಎರಡು ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿ ಉಳಿಯಲು ಅವರನ್ನು ಒತ್ತಾಯಿಸಿರುವುದಾಗಿ ಪೋಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಡಲ್ಲಾಸ್, ನ್ಯೂಜೆರ್ಸಿ ಮತ್ತು ವಾಷಿಂಗ್ಟನ್ ನ ಸಮಾವೇಶಗಳಲ್ಲಿ ಗ್ರಾಹಕರಿಗೆ ನಟಿಯರನ್ನು ಭೇಟಿ ಮಾಡಿಸಲು ಕರೆದೊಯ್ಯಲಾಗುತ್ತಿತ್ತು ಎಂದು ವರದಿಯಾಗಿದೆ.

ಕಿಶನ್ ಪ್ರಮುಖ ಆರೋಪಿಯಾಗಿದ್ದು, ಟಾಲಿವುಡ್ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ಮಾಪಕನಾಗಿ ಕೆಲಸ ಮಾಡಿದ್ದಾನೆ. ಆರೋಪಿಯ ಬಂಧನದ ನಂತರ ಆತನ ಇ-ಮೇಲ್ ಬಳಸಿ ನಟಿಯನ್ನು ಸಂಪರ್ಕಿಸಿದಾಗ, “ನನಗೆ ಪೋನ್ ಮಾಡಬೇಡಿ ಮತ್ತು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಬೇಡಿ. ತನ್ನ ಮೇಲಿನ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯವನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ಬಂಧಿತ ದಂಪತಿಯನ್ನು ಜೈಲಿನಲ್ಲಿ ಇರಿಸಲಾಗಿದೆ. ದಂಪತಿಯ ಇಬ್ಬರು ಮಕ್ಕಳನ್ನು ವರ್ಜೀನಿಯಾದ ಮಕ್ಕಳ ಕಲ್ಯಾಣ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಇತ್ತೀಚೆಗೆ ಇಡೀ ರಾಷ್ಟವೇ ತಿರುಗಿ ನೋಡುವಂತೆ ಕಾಸ್ಟಿಂಗ್​ ಕೌಚ್​ ಪ್ರತಿಭಟನೆಗೆ ನಾಂದಿ ಹಾಕಿದ್ದ ನಟಿ ಶ್ರೀ ರೆಡ್ಡಿ ವಿರುದ್ಧ ಟಾಲಿವುಡ್​ನ ಅನೇಕ ಸ್ಟಾರ್​ ನಟಿಯೇ ತಿರುಗಿ ಬಿದ್ದಿದ್ದರು. ಒಟ್ಟಾರೆ  ತೆಲುಗು ಇಂಡಸ್ಟ್ರಿಯಲ್ಲಿ  ಬಯಲಾದ ಕಾಸ್ಟಿಂಗ್​ ಕೌಚ್​ ಅಮೆರಿಕಾದಲ್ಲೂ ಸದ್ದು ಮಾಡಿದೆ. ಇನ್ನೂ ಕಾಸ್ಟಿಂಗ್​ ಕೌಚ್​ ಸೌಂಡ್​ ತಣ್ಣಗಾಗುವ ಮೊದಲೇ ಟಾಲಿವುಡ್​ ಸಿನಿ ವಲಯ ಬೆಚ್ಚಿ ಬೇಳುವಂತೆ ಮತ್ತೊ.ದು ಶಾಕಿಂಗ್​ ನ್ಯೂಸ್​ ಹೊರಬಿದ್ದಿರೋದು ನಿಜಕ್ಕೂ ದುರಾದೃಷ್ಟ.

Please follow and like us:
0
http://bp9news.com/wp-content/uploads/2018/06/prostitution-criminalisation-1.jpghttp://bp9news.com/wp-content/uploads/2018/06/prostitution-criminalisation-1-150x150.jpgBP9 Bureauಪ್ರಮುಖರಾಷ್ಟ್ರೀಯಸಿನಿಮಾಸಿನಿಮಾ ಟಾಕ್​ : ನಟಿಯರನ್ನು ಬಳಸಿಕೊಂಡು ಹೈ ಸೆಕ್ಸ್​ ಸ್ಕ್ಯಾಂಡಲ್​ ನಡೆಸುತ್ತಿದ್ದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕ, ತೆಲುಗು ಉದ್ಯಮಿ ಮತ್ತು ಆತನ ಪತ್ನಿಯನ್ನು ಚಿಕಾಗೋದಲ್ಲಿ ಪೊಲೀಸರು ಬಂಧಿಸಿದ್ದಾರೆ.  ವೇಶ್ಯಾವಾಟಿಕೆ  ನಡೆಸುತ್ತಿದ್ದ ತೆಲುಗು ಸಿನಿಮಾ   ನಿರ್ಮಾಪಕ ದಂಪತಿ ಇದೀಗ  ಪೊಲೀಸರ ಅತಿಥಿಗಳಾಗಿದ್ದಾರೆ. ಕಿಶನ್​​ ಅಲಿಯಾಸ್​ ಸಿರಾಜ್​ ಚೌನಪಟ್ಟಿ (34) ಮತ್ತು ಆತನ ಪತ್ನಿ ಚಂದ್ರಾ(31) ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ  ದಂಪತಿಗಳಾಗಿದ್ದಾರೆ. var domain = (window.location != window.parent.location)? document.referrer :...Kannada News Portal