ಪತ್ನಿ ಕರೀನಾ ಕಪೂರ್​ ಮಗ ತೈಮೂರ್​ ಫೋಟೋ ತೆಗೆಯುತ್ತಿದ್ದ ಅಭಿಮಾನಿ ವಿರುದ್ಧ ಸಿಕ್ಕಾಪಟ್ಟೆ ರೊಚ್ಚಿಗೆದ್ರು ನಟ ಸೈಫ್​ ಅಲಿಖಾನ್​. ಸೈಫ್​ ತನ್ನ ಫ್ಯಾಮಿಲಿಯೊಟ್ಟಿಗೆ ರಜೆ ಕಳೆಯಲು ಲಂಡನ್​ಗೆ  ಹೋಗಿದ್ದ ಸಂದರ್ಭದಲ್ಲಿ  ಈ ಘಟನೆ ಸಂಭವಿಸಿದ್ದು, ರಸ್ತೆ ಬದಿ ತಿರುಗಾಡುವಾಗ ಪತ್ನಿ ಮತ್ತು ಮಗನ ಫೋಟೋ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತಡೆದ್ರು ಸೈಫ್, ಆದರೂ ಸುಮ್ಮನಿರದ ಅಭಿಮಾನಿ ಫೋಟೋ ತೆಗೆಯಲು ಮುಂದಾದಾಗ ಸೈಫ್​ ಅಲಿಖಾನ್​ ರೊಚ್ಚಿಗೆದ್ದಿದ್ದಾರೆ. ​ಸದ್ಯ ಆತ ತೆಗೆದ ಫೋಟೋ ಎಲ್ಲೆಡೆ ವೈರಲ್​ ಆಗಿದೆ.

ಆ ಅಭಿಮಾನಿ ವಿರುದ್ಧ ಸೈಫ್​ ಹೇಯ್​, ತಡೀ  ಫೋಟೋ ಬೇಡ ಬೇಡ ಎಂದು ಕೋಪ ಮಾಡಿಕೊಂಡು  ಕೈ ತೋರಿಸಿ  ತಡೆದಿದ್ದಾರೆ. ಆದರೆ ಅಭಿಮಾನಿ ಸೈಫ್​ ಮಾತು ಕೇಳದೇ ಕ್ಲಿಕ್ಕಿಸಿಕೊಂಡಿದ್ದಾನೆ.

 

ಸದ್ಯ ಸೈಫ್ ಹಾಗೂ ಕರೀನಾ ರಜೆ ಮುಗಿಸಿ ಭಾರತಕ್ಕೆ ಹಿಂತಿರುಗಿದ್ದಾರೆ. ಈಗ ಈ ಸ್ಟಾರ್ ಜೋಡಿ ದೊಡ್ಡ ಬ್ರಾಂಡ್‍ವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ. ಇದೇ ಜಾಹೀರಾತಿನಲ್ಲಿಯೇ ಸೈಫ್ ಪತ್ನಿಗೆ ಸಾಥ್ ನೀಡಲಿದ್ದಾರೆ ಎಂದು ವರದಿಯಾಗಿದೆ.

ಕರೀನಾ  ಹಿಂದೆ ಬಾರಿ ಸುದ್ದಿಯಲ್ಲಿದ್ದರು.  ಮೈತೂಕ ಇಳಿಸಿಕೊಳ್ಳುವುದರ ಮೂಲಕ  ಬಾಲಿವುಡ್​ ಹೀರೋಯಿನ್​ಗಳಿಗೆ ಮಾದರಿಯಾಗಿದ್ದರು. ಇನ್ನು ಮಗ ತೈಮೂರ್​ ಕೂಡ ಸಾಮಾಜಿಕ ಜಾಲತಾಣಗಳ ಹೀರೋ ಎನಿಸಿಕೊಂಡಿದ್ದಾರೆ. ಸೋಶಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್​ ಕ್ರಿಯೇಟ್ ಮಾಡ್ತಿರೋ ಬೇಬಿ ಅಂದ್ರೆ ಅದು ತೈಮೂರ್ ಅಂತಾರೇ ಬಾಲಿವುಡ್​ ಮಂದಿ.

ಇನ್ನು ಕರೀನಾ ಕೂಡ ತಮ್ಮ ಟ್ವಿಟ್ಟರ್​ ಮೂಲಕ ತೈಮೂರ್​ ಆಟ-ತುಂಟಾಟಗಳ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿರುತ್ತಾರೆ.  ಸೈಫ್​​- ಮತ್ತು ಕರೀನಾ ಬಾಲಿವುಡ್ ಸಿನಿಮಾ ಮತ್ತು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/06/saif.jpghttp://bp9news.com/wp-content/uploads/2018/06/saif-150x150.jpgBP9 Bureauಸಿನಿಮಾಪತ್ನಿ ಕರೀನಾ ಕಪೂರ್​ ಮಗ ತೈಮೂರ್​ ಫೋಟೋ ತೆಗೆಯುತ್ತಿದ್ದ ಅಭಿಮಾನಿ ವಿರುದ್ಧ ಸಿಕ್ಕಾಪಟ್ಟೆ ರೊಚ್ಚಿಗೆದ್ರು ನಟ ಸೈಫ್​ ಅಲಿಖಾನ್​. ಸೈಫ್​ ತನ್ನ ಫ್ಯಾಮಿಲಿಯೊಟ್ಟಿಗೆ ರಜೆ ಕಳೆಯಲು ಲಂಡನ್​ಗೆ  ಹೋಗಿದ್ದ ಸಂದರ್ಭದಲ್ಲಿ  ಈ ಘಟನೆ ಸಂಭವಿಸಿದ್ದು, ರಸ್ತೆ ಬದಿ ತಿರುಗಾಡುವಾಗ ಪತ್ನಿ ಮತ್ತು ಮಗನ ಫೋಟೋ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತಡೆದ್ರು ಸೈಫ್, ಆದರೂ ಸುಮ್ಮನಿರದ ಅಭಿಮಾನಿ ಫೋಟೋ ತೆಗೆಯಲು ಮುಂದಾದಾಗ ಸೈಫ್​ ಅಲಿಖಾನ್​ ರೊಚ್ಚಿಗೆದ್ದಿದ್ದಾರೆ. ​ಸದ್ಯ ಆತ ತೆಗೆದ...Kannada News Portal