ಚಿಕ್ಕಮಗಳೂರು :  ರಾಜ್ಯಾದ್ಯಂತ ದಿನದಿಂದ ದಿನಕ್ಕೆ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೃಷಿಯ ವಿಫಲತೆ ಹಾಗೂ ಸಾಲದ ಸೂಲಕ್ಕೆ ಬಡ್ಡಿ ಕಟ್ಟಲಾರದೇ ಮನನೊಂದ ಅನ್ನದಾತ ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾನೆ. ಆದ್ರೆ, ಕಾಫಿನಾಡಿನ ಬಯಲುಸೀಮೆ ರೈತನೋರ್ವ ಫುಲ್ ಡಿಫರೆಂಟ್. ಇವರಿಗಿರೋ 6 ಎಕರೆ ಜಮೀನಲ್ಲಿ ವಿವಿಧ ಬೆಳೆ ಬೆಳೆಯೋ ಮೂಲಕ ಮಿಶ್ರ ಬೆಳೆಗಾರನಾಗಿ ಯಶಸ್ವಿ ರೈತನಾಗಿದ್ದಾನೆ. ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಹಾಡೇ ಇವರಿಗೆ ಸ್ಫೂರ್ತಿ.

ಹೌದು.. ದಿನಬೆಳಗಾದ್ರೆ ಬೆಳೆ ವೈಫಲ್ಯ, ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದು ಸಾಮಾನ್ಯವಾಗಿದೆ. ಇಂತಹ ಕಠಿಣ ನಿರ್ಧಾರಕ್ಕೆ ಬರೋ ರೈತರಿಗೆ ನೈತಿಕ ಸ್ಥೈರ್ಯ ತುಂಬುವ ರೀತಿ ಚಿಕ್ಕಮಗಳೂರಿನ ರೈತನೊಬ್ಬ ಕೃಷಿಯಲ್ಲಿ ಯಶೋಗಾಥೆ ಬರೆದಿದ್ದಾರೆ. ಒಂದೇ ರೀತಿಯ ಬೆಳೆ  ಮಾಡುವ ಬದಲು, ಮಿಶ್ರ ಬೆಳೆಯಲ್ಲಿ ಹೇಗೆ ಆರ್ಥಿಕ ಲಾಭ ಪಡೆಯಬಹುದು ಎಂಬುದನ್ನು ತೋರಿಸಿದ್ದಾರೆ ಜನಾರ್ಧನ್. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ರಸ್ತೆಯಲ್ಲಿರುವ ಕಲಾ ಫಾರಂನ ಜನಾರ್ಧನ್ ರವರ ರೈತ ವೃತ್ತಿ ರಾಜ್ಯಕ್ಕೆ ಮಾದರಿ ಅಂದ್ರು ತಪ್ಪಿಲ್ಲ. ಜನಾರ್ಧನ್ ಮೊದಲು ಜ್ಯುವೆಲರಿ ಶಾಪ್ ತೆರೆದು ಅಕ್ಕಸಾಲಿಗ (ಆಭರಣ ತಯಾರಕ) ಕೆಲಸ ಮಾಡ್ತಿದ್ರು. ಜನಾರ್ಧನ್ 1992ರ ಅವಧಿಯಲ್ಲಿ ಕೇವಲ 6 ಎಕರೆ ಜಮೀನು ಖರೀದಿಸಿದ ಇವರು ತೋಟಗಾರಿಕೆ ಬೆಳೆ ಕಡೆಗೆ ಒಲವು ತೋರಿಸಿದ್ರು.


ಅಡಿಕೆ, ತೆಂಗು, ಸಪೋಟ, ಹಲಸು, ಮಾವು ಬೆಳೆಯನ್ನ ಬೆಳೆಯಲು ನಿರ್ಧರಿಸಿದ್ರು. ಸದ್ಯ ಅಡಿಕೆ, ತೆಂಗು, ಮಾವು, ಸಪೋಟ, ಹಲಸು ಪ್ರಮುಖ ಬೆಳೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಎಲ್ಲಾ ಬೆಳೆಗಳು ನನಗೆ ಲಾಭ ತಂದು ಕೊಡುತ್ತಿವೆ. ಯಾವ್ದಾದ್ರೂ ಒಂದು ಬೆಳೆಯಲ್ಲಿ ಏರುಪೇರಾದ್ರೆ, ಮತ್ತೊಂದು ಬೆಳೆಯ ಮೂಲಕ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬಹುದು ಅನ್ನೋದು ಜನಾರ್ಧನ್ ಮಾತು. ಜರ್ನಾಧನ್ ತೋಟದಲ್ಲಿ ನೂರಾರು ಜಾತಿಯ ಹಣ್ಣಿನ ಗಿಡಗಳನ್ನ ಕೂಡ ಬೆಳೆಸಿದ್ದಾರೆ. ಇದರ ಜೊತೆ ಜೇನು ಸಾಕಾಣಿಕೆ ಕೂಡ ಮಾಡ್ತಾರೆ. ಜೇನಿನಲ್ಲಿ ತುಪ್ಪ ತೆಗೆದು ಮಾರ್ತಾರೆ. ಇವರ ಜೇನು ತುಪ್ಪಕ್ಕೆ ಅಮೇರಿಕಾದಲ್ಲಿ ಭಾರೀ ಬೇಡಿಕೆ ಇದೆಯಂತೆ. ಇನ್ನು ಕಲಾ ಫಾರಂಗೆ ಎಂಟ್ರಿಯಾಗ್ತಿದ್ದಂತೆ ಒಂದು ಸಂದೇಶವನ್ನ ಹಾಕಲಾಗಿದೆ. ಪ್ರಕೃತಿಯ ದೇಗುಲ ಕೈ ಮುಗಿದು ಒಳಗೆ ಬನ್ನಿ. ಇನ್ನು ಪ್ರತಿನಿತ್ಯ ಹತ್ತಾರು ರೈತರು ಕಲಾ ಫಾರಂಗೆ ಬಂದು ಇವ್ರ ಸಲಹೆ ಪಡೆದು ತಾವೂ ಕೃಷಿಯಲ್ಲಿ ತೊಡಗಿಸಿಕೊಳ್ತಿದ್ದಾರೆ.


ಕೇವಲ ಜನಾರ್ಧನ್ ಮಾತ್ರವಲ್ಲ, ಅವರ ಕುಟುಂಬ ವರ್ಗ ಕೂಡ ಈ ರೀತಿಯ ಮಿಶ್ರ ಬೆಳೆ ಕೃಷಿಯಲ್ಲಿ ಸಾಥ್ ನೀಡಿದೆ. ಜನಾರ್ಧನ್ ಪತ್ನಿ ಸಾವಿತ್ರಿ ಕೂಡ ಇವರ ಜೊತೆ ಕೈ ಜೋಡಿಸಿದ್ದಾರೆ. ತೋಟದಲ್ಲಿ ಕೆಲಸ ಮಾಡಿ ಕೊಡುವ ಜೊತೆಗೆ ಡ್ರೈ ಪ್ರೂಟ್ ಗಳನ್ನ ತಯಾರಿಸುತ್ತಾರೆ. ಇದರ ಜೊತೆಗೆ ಹಲಸಿನಲ್ಲಿ ಮಂಚೂರಿ, ಈರುಳ್ಳಿ ದೋಸೆ, ಮಂಗಳೂರು ಭಜ್ಜಿ ಮಾಡೋದು ಹೇಗೆ ಅನ್ನೋದು ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡ್ತಿದ್ದಾರೆ. ಯಾವ ಬೆಳೆಯೂ ಹಾಳಾಗದಂತೆ ಕಾಪಾಡಿಕೊಂಡು ಬರುವಲ್ಲಿ ಜನಾರ್ಧನ್ ಪತ್ನಿಯದ್ದು ಮಹತ್ವದ ಪಾತ್ರವಿದೆ. ಭೂಮಿ ತಾಯಿ ಭಂಜೆಯಲ್ಲ, ತಾಳ್ಮೆ ಇರಬೇಕು, ಶ್ರಮ ಪಟ್ಟರೇ ಫಲ ಸಿಗುತ್ತೆ. ಈ ಜಮೀನಿಗೆ ಬಂದ್ರೆ ನಮ್ಮಗೆ ತುಂಬಾ ಖುಷಿ ಆಗುತ್ತೆ, ನಾವು ಇಲ್ಲಿ ಪ್ರಕೃತಿ ದೇವತೆಯನ್ನ ಕಾಣ್ತಿವಿ. ನಮ್ಮ ಮೂವರು ಮಕ್ಕಳು ಅಮೇರಿಕದಲ್ಲಿ ಕೆಲಸ ಮಾಡ್ತಿದ್ದಾರೆ. ನಮ್ಮ ಮಕ್ಕಳು ಸಾಕಷ್ಟು ಸಲ ತೋಟ ಮಾರಿ ನಮ್ಮನ್ನ ಅಮೇರಿಕ ಬರೋಕೆ ಹೇಳ್ತಾರೆ, ಆದ್ರೆ, ನಾನು ನನ್ನ ಪತಿ ತೋಟ ಬಿಟ್ಟು ಎಲ್ಲೂ ಹೋಗೋದಿಲ್ಲ, ತೋಟ ನಮಗೆ ಜೀವ, ನಾವು ಇಲ್ಲೇ ದೇವರನ್ನ ಕಾಣೋದು. ಹಾಗಾಗಿ ನಾವು ಎಲ್ಲೂ ಹೋಗೋದಿಲ್ಲ ಅಂತಾರೆ ಜನಾರ್ಧನ್ ಪತ್ನಿ ಸಾವಿತ್ರಿ. ಸ್ವಾಭಿಮಾನದಿಂದ ಒಬ್ಬ ರೈತ, ಯಾವುದೇ ನಷ್ಟ ಇಲ್ಲದೆ ಈ ರೀತಿ ಬೆಳೆದಿರೋದು ನಿಜಕ್ಕೂ ಖುಷಿ ಕೊಡುತ್ತೆ, ಜೊತೆಗೆ ಯುವಕರಿಗೆ ಜನಾರ್ಧನ್ ಒಂದು ಸ್ಪೂರ್ತಿ ಅಂತಾರೆ ಸ್ಥಳಿಯರು.ಒಟ್ಟಾರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ ಸಾಕಷ್ಟು ಮಂದಿ ರೈತರು  ಬೆಳೆ ವೈಫಲ್ಯದಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರು ಮಿಶ್ರ ಬೆಳೆ ಬೆಳೆದ್ರೆ ಯಾವುದಾದರೂ ಒಂದು ಬೆಳೆ ಕೈಹಿಡಿಯುತ್ತೇ. ಹಾಗಾಗಿ ರೈತ ಮಿತ್ರರು ಮಿಶ್ರಬೆಳೆಯತ್ತ ಗಮನ ಹರಸಿದ್ರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲ್ಲ ಅನ್ನೋದು ಜನಾರ್ಧನ್ ರವರ ಸಲಹೆ. ಇನ್ನು ನಗರ ಪ್ರದೇಶದಲ್ಲಿ ದುಡಿಯೋ ಸಂಬಳಕ್ಕಿಂತ 10 ಪಟ್ಟು ಹೆಚ್ಚು ಕೃಷಿಯಲ್ಲಿ ದುಡಿಯಬಹುದು ಅನ್ನೋದು ಜನಾರ್ಧನ್ ನಂಬಿಕೆ. ಇವ್ರ ಮೈಮನವೆಲ್ಲಾ ಕೃಷಿಗೆ ಅವಲಂಬಿತವಾಗಿರೋದು ನಿಜಕ್ಕೂ ಶ್ಲಾಘನೀಯ.

ವರದಿ : ಅನಿಲ್, ಚಿಕ್ಕಮಗಳೂರು

Please follow and like us:
0
http://bp9news.com/wp-content/uploads/2018/10/ಮಾದರಿ-ರೈತ-BP9News-Kannada8.jpeghttp://bp9news.com/wp-content/uploads/2018/10/ಮಾದರಿ-ರೈತ-BP9News-Kannada8-150x150.jpegBP9 Bureauಕೃಷಿಪ್ರಮುಖಮಂಗಳೂರುಚಿಕ್ಕಮಗಳೂರು :  ರಾಜ್ಯಾದ್ಯಂತ ದಿನದಿಂದ ದಿನಕ್ಕೆ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೃಷಿಯ ವಿಫಲತೆ ಹಾಗೂ ಸಾಲದ ಸೂಲಕ್ಕೆ ಬಡ್ಡಿ ಕಟ್ಟಲಾರದೇ ಮನನೊಂದ ಅನ್ನದಾತ ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾನೆ. ಆದ್ರೆ, ಕಾಫಿನಾಡಿನ ಬಯಲುಸೀಮೆ ರೈತನೋರ್ವ ಫುಲ್ ಡಿಫರೆಂಟ್. ಇವರಿಗಿರೋ 6 ಎಕರೆ ಜಮೀನಲ್ಲಿ ವಿವಿಧ ಬೆಳೆ ಬೆಳೆಯೋ ಮೂಲಕ ಮಿಶ್ರ ಬೆಳೆಗಾರನಾಗಿ ಯಶಸ್ವಿ ರೈತನಾಗಿದ್ದಾನೆ. ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಆಗದು ಎಂದು ಕೈಕಟ್ಟಿ...Kannada News Portal