ಬಾಗೇಪಲ್ಲಿ: ಶಿಕ್ಷಕರು ಮಕ್ಕಳಿಗೆ ಶಿಕ್ಷಣವನ್ನು ಭೋದನೆ ಮಾಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಬಿ.ಆರ್.ಸಿ ಸಂಯೋಜಕ ಎನ್.ವಿ.ಭೈರಾರೆಡ್ಡಿ ತಿಳಿಸಿದರು.

ಪಟ್ಟಣದ ಶ್ರೀ ಸಾಯಿಮಹಿತಿ ಹೈಟೆಕ್ ಪ್ಲೇಹೋಮ್‍ನ 5ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ತಮ್ಮ ಮಕ್ಕಳನ್ನು ವೈದ್ಯ, ಇಂಜಿನಿಯರ್‍ಗಳನ್ನು ಮಾಡುವ ಒಂದು ಆಸೆಯಿಂದ ಅವರ ಮೇಲೆ ಅತಿಯಾದ ಒತ್ತಡ ಹೇರುವುದರ ಬದಲು ಗುಣಾತ್ಮಕ ಶಿಕ್ಷಣವನ್ನು ಕೊಡಿಸಬೇಕಾಗಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ದೇಶ ಭಕ್ತಿ, ಗುರುಹಿರಿಯರಲ್ಲಿ ಗೌರವ, ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸ ಶಿಕ್ಷಕರು ಹಾಗೂ ಪೋಷಕರು ಮಾಡಬೇಕೆಂದು ಸಲಹೆ ನೀಡಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತ ರೆಡ್ಡಿ ಮಾತನಾಡಿ ಮಕ್ಕಳು ಕೇವಲ ರ್ಯಾಂಕ್‍ಗಳನ್ನು ಪಡೆದರೆ ಮಾತ್ರ ಸಾಲದು ತಂದೆ ತಾಯಿಗಳನ್ನು ಗೌರವಿಸುವವರಾಗಿರಬೇಕು ಎಂದ ಅವರು ಪೋಷಕರು ಮೊದಲ ಕಾಲದಲ್ಲಿ ತಮ್ಮ ಮಕ್ಕಳಿಗೆ ಆಸ್ತಿಗಳನ್ನು ಸಂಪಾದನೆ ಮಾಡುತ್ತಿದ್ದರು ಆದರೆ ಈಗಿನ ಕಾಲಕ್ಕೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಅವರನ್ನೇ ಆಸ್ತಿಗಳನ್ನಾಗಿ ಮಾಡಿಕೊಳ್ಳಬೇಕಾಗಿ ಪೋಷಕರಿಗೆ ಕಿವಿ ಮಾತನ್ನು ಹೇಳಿದರು. ಶ್ರೀ ಸಾಯಿ ಮಹಿತಿ ಹೈಟೆಕ್ ಪ್ಲೇಹೋಮ್‍ನ ಅಧ್ಯಕ್ಷ ಎಂ.ನವೀನ್ ಕುಮಾರ್ ರವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಟ್ಟಪರ್ತಿ ಸತ್ಯಸಾಯಿ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ  ನಿರ್ದೇಶಕರಾದ ಎಂ.ಸಾಯಿಸುಬ್ರಮಣ್ಯಂ ರವರಿಂದ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳ ಆಕರ್ಷಕ ನೃತ್ಯಗಳು ಪೋಷಕರನ್ನು ಹಾಗೂ ಸಾರ್ವಜನಿಕರನ್ನು ರಂಜಿಸಿದವು.ಕಾರ್ಯಕ್ರಮದಲ್ಲಿ ಮುಖ್ಯೋಪಾದ್ಯಾಯರಾದ ಎಂ.ಮಮತಾದೇವಿ, ಶಿಕ್ಷಕರಾದ ವರಲಕ್ಷ್ಮಿ, ಭಾರತಿ, ನಂದಿನಿ ಉಪಸ್ಥಿತರಿದ್ದರು

ವರದಿ : ಪ್ರಶಾಂತ್ ಚಿಕ್ಕಬಳ್ಳಾಪುರ

Please follow and like us:
0
http://bp9news.com/wp-content/uploads/2018/03/WhatsApp-Image-2018-03-14-at-4.08.52-PM-1024x680.jpeghttp://bp9news.com/wp-content/uploads/2018/03/WhatsApp-Image-2018-03-14-at-4.08.52-PM-150x150.jpegBP9 Bureauಚಿಕ್ಕಬಳ್ಳಾಪುರಬಾಗೇಪಲ್ಲಿ: ಶಿಕ್ಷಕರು ಮಕ್ಕಳಿಗೆ ಶಿಕ್ಷಣವನ್ನು ಭೋದನೆ ಮಾಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಬಿ.ಆರ್.ಸಿ ಸಂಯೋಜಕ ಎನ್.ವಿ.ಭೈರಾರೆಡ್ಡಿ ತಿಳಿಸಿದರು. ಪಟ್ಟಣದ ಶ್ರೀ ಸಾಯಿಮಹಿತಿ ಹೈಟೆಕ್ ಪ್ಲೇಹೋಮ್‍ನ 5ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ತಮ್ಮ ಮಕ್ಕಳನ್ನು ವೈದ್ಯ, ಇಂಜಿನಿಯರ್‍ಗಳನ್ನು ಮಾಡುವ ಒಂದು ಆಸೆಯಿಂದ ಅವರ ಮೇಲೆ ಅತಿಯಾದ ಒತ್ತಡ ಹೇರುವುದರ ಬದಲು ಗುಣಾತ್ಮಕ ಶಿಕ್ಷಣವನ್ನು ಕೊಡಿಸಬೇಕಾಗಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ದೇಶ ಭಕ್ತಿ,...Kannada News Portal