ಬೆಂಗಳೂರು: ಅರ್ನಾ ಡೈರಿಯ ನೂತನ ೨೦೧೮ ನೇ ವರ್ಷದ ಕ್ಯಾಲೆಂಡರ್‌ನ ಸಿಎಂ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ರು. ಬೆಂಗಳೂರಿನ ಗೃಹ ಕೃಷ್ಣಾದ ಬಳಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯಾಗಿರುವ ಕೇಶವರಾಜಣ್ಣ ಸಿಎಂಗೆ ಶುಭಕೋರಲು ತೆರಳಿದ್ದ ವೇಳೆ ಅರ್ನಾ ಡೈರಿಯ ಕ್ಯಾಲೆಂಡರ್ ಕೂಡ ಲೋಕರ್ಪಾಣೆಗೊಳಿಸಿದ್ರು.

ಜತೆಗೆ ಕೆಪಿಸಿಸಿ ಕಾರ್ಯದರ್ಶಿಯಾಗಿರುವ ನೀವು ಇನ್ನಷ್ಟು ಜವಾಬ್ದಾರಿ ನಿಮ್ಮ ಮೇಲೆ ಇದೆ. ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅಂತಾ ಕೇಶವರಾಜಣ್ಣರಿಗೆ ಸಿಎಂ ಕಿವಿಮಾತು ಹೇಳಿದ್ರು. ಜತೆಗೆ ಅರ್ನಾ ಸೇವಾ ಟ್ರಸ್ಟ್‌ನಿಂದ ಮಾಡುತ್ತಿರುವ ಸಮಾಜೀಕ ಕೆಲಸಗಳಿಗೆ ಸಿಎಂ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ಯಾಲೆಂಡರ್ ಬಿಡುಗಡೆ ವೇಳೆಯಲ್ಲಿ ಕಾನೂನು ಸಚಿವ ಡಿಬಿ ಜಯಚಂದ್ರ ಕೂಡ‌ ಉಪಸ್ಥಿತರಿದ್ದು ಶುಭ ಕೋರಿದ್ರು ಇನ್ನೂ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಯಲಹಂಕ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೇಶವರಾಜಣ್ಣ ಸಿಎಂ ಸಾಕಷ್ಟು ಸಲಹೆಗಳನ್ನ ನೀಡಿದ್ದಾರೆ.

ಈಗಾಗಲೇ ಯಲಹಂಕ ಕ್ಷೇತ್ರದಲ್ಲಿ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮವನ್ನ ಯಶಸ್ವಿಯಾಗಿ ಮಾಡಿದ್ದೇವೆ. ಇನ್ನಷ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಬಲಗೊಳಿಸಿ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು. ಸಿಎಂ ಭೇಟಿ ವೇಳೆಯಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ಕಾರ್ಯದರ್ಶಿ ಚಿರಂಜೀವಿ ಜೆಟ್ಟಿ ಕೂಡ ಜತೆಗಿದ್ದು ಸಿಎಂಗೆ ಹೊಸ ವರ್ಷದ ಶುಭಾಶಯ ಕೋರಿದ್ರು.

Please follow and like us:
0
http://bp9news.com/wp-content/uploads/2018/01/WhatsApp-Image-2018-01-02-at-10.46.11-AM-1024x683.jpeghttp://bp9news.com/wp-content/uploads/2018/01/WhatsApp-Image-2018-01-02-at-10.46.11-AM-150x150.jpegBP9 Bureauಚಿಕ್ಕಬಳ್ಳಾಪುರಬೆಂಗಳೂರು: ಅರ್ನಾ ಡೈರಿಯ ನೂತನ ೨೦೧೮ ನೇ ವರ್ಷದ ಕ್ಯಾಲೆಂಡರ್‌ನ ಸಿಎಂ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ರು. ಬೆಂಗಳೂರಿನ ಗೃಹ ಕೃಷ್ಣಾದ ಬಳಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯಾಗಿರುವ ಕೇಶವರಾಜಣ್ಣ ಸಿಎಂಗೆ ಶುಭಕೋರಲು ತೆರಳಿದ್ದ ವೇಳೆ ಅರ್ನಾ ಡೈರಿಯ ಕ್ಯಾಲೆಂಡರ್ ಕೂಡ ಲೋಕರ್ಪಾಣೆಗೊಳಿಸಿದ್ರು. ಜತೆಗೆ ಕೆಪಿಸಿಸಿ ಕಾರ್ಯದರ್ಶಿಯಾಗಿರುವ ನೀವು ಇನ್ನಷ್ಟು ಜವಾಬ್ದಾರಿ ನಿಮ್ಮ ಮೇಲೆ ಇದೆ. ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅಂತಾ ಕೇಶವರಾಜಣ್ಣರಿಗೆ ಸಿಎಂ ಕಿವಿಮಾತು ಹೇಳಿದ್ರು. ಜತೆಗೆ...Kannada News Portal