ಚಿಕ್ಕಬಳ್ಳಾಪುರ: ಕೌನ್ ಬನೇಗಾ ಕರೋಡ್‍ಪತಿ ಹೆಸರನ್ನು ಬಳಸಿಕೊಂಡು ವಾಟ್ಸಪ್ ಮೂಲಕ ವಂಚನೆ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಾಟ್ಸಪ್ ಚಂದದಾರರು ಎಚ್ಚರ ವಹಿಸಬೇಕಾಗಿದೆ.

ಹೌದು..ಕೌನ್ ಬನೇಗಾ ಕರೋಡ್‍ಪತಿ ತರಹದ ಆಡಿಯೋ ವಿಡಿಯೋ ಸಂಭಾಷಣೆ ಹಾಗೂ ಚಿತ್ರವನ್ನು ಬಳಸಿಕೊಂಡು ವಾಟ್ಸಪ್ ಮೂಲಕ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.  ಅಲ್ಲದೇ ಬಾಗೇಪಲ್ಲಿ ತಾಲ್ಲೂಕಿನ ಚಿನ್ನಕಾಯಿಲಪಲ್ಲಿ ಗ್ರಾಮದ ಪ್ರಶಾಂತ್ ಎಂಬವರಿಗೆ +923023693026   ವಾಟ್ಸಪ್‍ ನಂಬರ್ ಮೂಲಕ ನಿಮ್ಮ ಜಿಯೋ ನಂಬರ್ 6361892617  ಕೌನ್ ಬನೇಗಾ ಕರೋಡ್‍ಪತಿ ಮೊಬೈಲ್ ಗ್ರಾಹಕರ ವಿಭಾಗದಲ್ಲಿ ವಿಜೇತರಾಗಿದ್ದೀರಾ, ಬಹುಮಾನದ ಮೊತ್ತಕ್ಕಾಗಿ ಕೂಡಲೇ ಕರೆ ಮಾಡಿ ಎನ್ನುವ ಸಂದೇಶ ಕಳುಹಿಸಿದ್ದಾರೆ.

ಇದರಿಂದ ಅನುಮಾನಗೊಂಡ ಪ್ರಶಾಂತ್ ವಾಟ್ಸಪ್ ಕರೆ ಮಾಡಿದಾಗ ಎಟಿಎಂ ಕಾರ್ಡ್ ನಂಬರ್ ಪಿನ್ ನಂಬರ್ ಪಾಸ್ ವರ್ಡ್ ಕೇಳಿ ಹಣ ಬ್ಯಾಂಕ್ ಗೆ ಹಾಕಲು 20 ಸಾವಿರ ತೆರಿಗೆ ಹಣ ಬ್ಯಾಂಕ್ ಖಾತೆಗೆ ಹಾಕಲು ತಿಳಿಸಿದ್ದು  ವಂಚನೆಯ ಜಾಲ ಪತ್ತೆಯಾಗಿದೆ.  ವಂಚನೆಕೋರರು ಚಿತ್ರದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್  ಫೋಟೋಗಳನ್ನು ಬಳಸಿಕೊಂಡು, ಗ್ರಾಹಕರನ್ನು ಸುಲಭವಾಗಿ ವಂಚನೆಮಾಡುವ ಯತ್ನ ಮಾಡುತ್ತಿದ್ದಾರೆ.

ಹೇಗೆ ವಂಚಿಸುತ್ತಾರೆ?

ವಾಟ್ಸಪ್ ಗ್ರಾಹಕರಿಗೆ ಕೌನ್ ಬನೇಗಾ ಕರೋಡ್‍ಪತಿ ವಿಡಿಯೋ ಸಂದೇಶ ಹಾಗೂ ವಿಜೇತರಾದ ಪ್ರಮಾಣಪತ್ರವನ್ನು ವಂಚಕರು ಕಳುಹಿಸಿ ಕೊಡುತ್ತಾರೆ. ಇದನ್ನು ನಿಜ ಎಂದು ನಂಬುವ ಜನರು, ಅವರು ನೀಡಿರುವ ಸಂಖ್ಯೆಗೆ ಕರೆ ಮಾಡುತ್ತಾರೆ. ಆಗ ವಂಚಕರ ಹಣವನ್ನು ವರ್ಗಾಯಿಸಲು ಇಂತಿಷ್ಟು ತೆರಿಗೆಯನ್ನು ಪಾವತಿಸಿ ಎಂದು ಹೇಳುತ್ತಾರೆ. ವಂಚನೆಯ ಜಾಲವನ್ನು ಅರಿಯದ ಜನ ಬಹುಮಾನದ ಆಸೆಗಾಗಿ ವಂಚಕರು ನೀಡುವ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತಾರೆ. ಹಣ ವರ್ಗಾವಣೆಯಾದ ಬಳಿಕ ಕೂಡಲೇ ವಂಚಕರು ತಮ್ಮ ಮೊಬೈಲ್‍ಗಳನ್ನು ಬಂದ್ ಮಾಡಿ ನಾಪತ್ತೆಯಾಗುತ್ತಾರೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-16-at-12.53.17-PM.jpeghttp://bp9news.com/wp-content/uploads/2018/09/WhatsApp-Image-2018-09-16-at-12.53.17-PM-150x150.jpegBP9 Bureauಚಿಕ್ಕಬಳ್ಳಾಪುರಪ್ರಮುಖಚಿಕ್ಕಬಳ್ಳಾಪುರ: ಕೌನ್ ಬನೇಗಾ ಕರೋಡ್‍ಪತಿ ಹೆಸರನ್ನು ಬಳಸಿಕೊಂಡು ವಾಟ್ಸಪ್ ಮೂಲಕ ವಂಚನೆ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಾಟ್ಸಪ್ ಚಂದದಾರರು ಎಚ್ಚರ ವಹಿಸಬೇಕಾಗಿದೆ. ಹೌದು..ಕೌನ್ ಬನೇಗಾ ಕರೋಡ್‍ಪತಿ ತರಹದ ಆಡಿಯೋ ವಿಡಿಯೋ ಸಂಭಾಷಣೆ ಹಾಗೂ ಚಿತ್ರವನ್ನು ಬಳಸಿಕೊಂಡು ವಾಟ್ಸಪ್ ಮೂಲಕ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.  ಅಲ್ಲದೇ ಬಾಗೇಪಲ್ಲಿ ತಾಲ್ಲೂಕಿನ ಚಿನ್ನಕಾಯಿಲಪಲ್ಲಿ ಗ್ರಾಮದ ಪ್ರಶಾಂತ್ ಎಂಬವರಿಗೆ +923023693026   ವಾಟ್ಸಪ್‍ ನಂಬರ್ ಮೂಲಕ ನಿಮ್ಮ ಜಿಯೋ ನಂಬರ್ 6361892617  ಕೌನ್...Kannada News Portal