ಚಿಕ್ಕಬಳ್ಳಾಪುರ: ನಾಮ ಪತ್ರ ಸಲ್ಲಿಸಲು 24 ಕೊನೆಯ ದಿನಾಂಕವಾದ್ದರಿಂದ ಬಿ ಫಾರಂ ಪಡೆದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಿಂದ ಜೆ ಡಿ ಎಸ್ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಅಭ್ಯರ್ಥಿ  ಡಾ.ಸಿ.ಆರ್.ಮನೋಹರ್ ಇಂದು ನಲವತ್ತು ಸಾವಿರಕ್ಕೂ ಹೆಚ್ಚು ಅಪಾರ ಬೆಂಬಲಿಗರೊಂದಿಗೆ ನ್ಯಾಷನಲ್ ಕಾಲೇಜ್ ನಿಂದ ರೋಡ್ ಶೋ ಮುಖಾಂತರ ಬಂದು  ನಾಮಪತ್ರ ಸಲ್ಲಿಸಿದರು.

ನಂತರ  ಡಾ.ಸಿ.ಆರ್.ಮನೋಹರ್ ಮಾತನಾಡಿ  ಕ್ಷೇತ್ರದಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿದವರು ಇದುವರೆಗೂ  ಈ ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ‌, ರೈತರ ಸಮಸ್ಯೆಗಳು ಪರಿಹರಿಸಿಲ್ಲ ಎಂದು ಆರೋಪಿಸಿದರು. ಸ್ವತಂತ್ರ ಬಂದಾಗಿನಿಂದ ಇದುವರೆಗೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಖಾತೆ ತೆರೆದಿಲ್ಲಾ ಈ ಭಾರಿ  ತೀವ್ರ ಪೈಪೋಟಿಯ ನಡುವೆ ಜೆಡಿಎಸ್ ಖಾತೆ ತೆರೆಯಲಿದೆ ಎಂದರಲ್ಲದೇ, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಡಳಿತಾವಧಿಯ ಜನಪರ ಕಾರ್ಯಗಳನ್ನು ಮುಂದಿಟ್ಟು ಕೊಂಡು ಹಾಗೂ ಬಾಗೇಪಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವುದಾಗಿ ಹೇಳಿದರು.   ಈ‌ ಸಂದರ್ಭದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನರಸಿಂಹನಾಯ್ಡು, ದಲಿತ ಮುಖಂಡ ಎ.ವಿ.ಪೂಜಪ್ಪ,ಯುವ ಮುಖಂಡ ಸಿ.ಆರ್.ಗೋಪಿ,ಗೂಳೂರು ಲಕ್ಷ್ಮೀನಾರಾಯಣ,ತಾಲ್ಲೂಕು ಪಂಚಾಯತಿ ಸದಸ್ಯರಾದ ರಾಮಕೃಷ್ಣರೆಡ್ಡಿ,ರೆಡ್ಡಪ್ಪ, ಕಲ್ಲಿಪಲ್ಲಿ ವೆಂಕಟೇಶ್, ದಲಿತ ಮುಖಂಡ ಎಂ.ಜಿ.ಕಿರಣ್ ಕುಮಾರ್, ಯುವ ಜನತಾದಳ ಅಧ್ಯಕ್ಷ ಲಕ್ಷ್ಮೀನಾರಾಯಣ, ಮುಂತಾದವರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/04/JDS-chikkaballapur-BP9-News-Web-Portal.jpeghttp://bp9news.com/wp-content/uploads/2018/04/JDS-chikkaballapur-BP9-News-Web-Portal-150x150.jpegBP9 Bureauಚಿಕ್ಕಬಳ್ಳಾಪುರರಾಜಕೀಯಚಿಕ್ಕಬಳ್ಳಾಪುರ: ನಾಮ ಪತ್ರ ಸಲ್ಲಿಸಲು 24 ಕೊನೆಯ ದಿನಾಂಕವಾದ್ದರಿಂದ ಬಿ ಫಾರಂ ಪಡೆದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಿಂದ ಜೆ ಡಿ ಎಸ್ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಅಭ್ಯರ್ಥಿ  ಡಾ.ಸಿ.ಆರ್.ಮನೋಹರ್ ಇಂದು ನಲವತ್ತು ಸಾವಿರಕ್ಕೂ ಹೆಚ್ಚು ಅಪಾರ ಬೆಂಬಲಿಗರೊಂದಿಗೆ ನ್ಯಾಷನಲ್ ಕಾಲೇಜ್ ನಿಂದ ರೋಡ್ ಶೋ ಮುಖಾಂತರ ಬಂದು  ನಾಮಪತ್ರ ಸಲ್ಲಿಸಿದರು. ನಂತರ  ಡಾ.ಸಿ.ಆರ್.ಮನೋಹರ್ ಮಾತನಾಡಿ  ಕ್ಷೇತ್ರದಲ್ಲಿ...Kannada News Portal