ಬಾಗೇಪಲ್ಲಿ : ಪಟ್ಟಣದ ಅಂಬೇಡ್ಕರ್ ‌ನಗರದ ಬಳಿ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಂಘಟನೆಯಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಆರ್.ಮನೋಹರ್ ರವರಿಗೆ ಬೆಂಬಲಿಸಿ ಸೆರ್ಪಡೆ ಕಾರ್ಯಕ್ರಮ ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಾಧನ ಕಾರ್ಯದರ್ಶಿ ನರಸಿಂಹನಾಯ್ಡು ಮಾತನಾಡಿ 5  ವರ್ಷಗಳ ಹಿಂದೆ ಸುಬ್ಬಾರೆಡ್ಡಿ ಅಧಿಕಾರದ ಆಸೆಯಿಂದ ಬಡವರಿಗೆ ಕಡಿಮೆ ಖರ್ಚಿನಲ್ಲಿ ಊಟ ನೀಡುತ್ತೇನೆ. ಜನರ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಗೆದ್ದು ವಿಧಾನಸಭೆಗೆ ಹೋದ ಎಸ್.ಎನ್. ಸುಬ್ಬಾರೆಡ್ಡಿ ಕೇವಲ ತಮ್ಮ ಬಾರ್ ಅಂಡ್ ರೆಸ್ಟೋರೆಂಟ್ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು  ಮಾತ್ರ ಶ್ರಮಿಸುತ್ತಿದ್ದಾರೆ ಎಂದ್ರು.

ನಂತರ ಮಾತನಾಡಿದ ಗೂಳೂರು ಲಕ್ಷ್ಮೀನಾರಾಯಣ  ಈಡೀ ವಿಧಾನ ಪರಿಷತ್ ಷೇತ್ರದ ಎಲ್ಲಾ ತಾಲ್ಲೂಕುಗಳ ಅಭಿವೃದ್ದಿಗೆ ಶ್ರಮಿಸುತ್ತಿರುವ ಮನೋಹರ್ ರವರನ್ನ ಗೆಲ್ಲಿಸಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ದಲಿತ ಮುಖಂಡ ಗೂಳೂರಯ ಲಕ್ಷ್ಮೀ ನಾರಾಯಣ ಕರೆ ನೀಡಿದರು.

11 ತಾಲ್ಲೂಕುಗಳ ಅಭಿವೃದ್ದಿಗೆ ಶ್ರಮಿಸುತ್ತಿರುವ ಮನೋಹರ್ ರವರ ಬಗ್ಗೆ ಮಾತನಾಡುವ ಬದಲು ಕೇವಲ ಎರಡು ತಾಲ್ಲೂಕುಗಳನ್ನು ಸಹ ಅಭಿವೃದ್ಧಿ ಮಾಡಲಾಗದ ಶಾಸಕರು ತಮ್ಮ ಹಿಂಬಾಲಕರ ಮುಖಾಂತರ ಅನಗತ್ಯವಾಗಿ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದ್ರು.

ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಆರ್.ಮನೋಹರ್  ಕಾಂಗ್ರೇಸ್ ಅಭ್ಯರ್ಥಿ ಎಸ್.ಎನ್ ಸುಬ್ಬಾರೆಡ್ಡಿ ಕುತಂತ್ರ ರಾಜಕೀಯ ‌ಮಾಡಲು ಹೊರಟಿದ್ದಾರೆ ಅದು ಸಲ್ಲದು ನಿಮಗೆ ಜನರೇ ತಕ್ಕ ಉತ್ತರ ಚುನಾವಣೆಯಲ್ಲಿ ನೀಡುತ್ತಾರೆ ಎಂದ್ರು,ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಲು ಆಗದೆ 1200 ಕೋಟಿ ಅಭಿವೃದ್ಧಿ ಮಾಡಿದ್ದೇನೆ ಎಂದು ಸುಳ್ಳು ಮಾತನ್ನು ಹೇಳುತ್ತಿದ್ದಾರೆ ಅದರೆ ಜನ ಬುದ್ದಿವಂತರಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಬುದ್ದಿ ಕಳುಹಿಸುತ್ತಾರೆ ಎಂದ್ರು  ಪಾಪ ಸುಬ್ಬಾರೆಡ್ಡಿ ಅವರಿಗೆ ಸರಿಯಾಗಿ ಕನ್ನಡ ಮಾತಾಡಲು ಬರಲ್ಲ ವಿಧಾನಸಭೆಯಲ್ಲಿ ದಂಡ ಕಟ್ಟಿದ್ದರು ಅಂತ ವ್ಯಂಗ್ಯ ವಾಡಿದರು ಕಾರ್ಯಕ್ರಮದಲ್ಲಿ ಜೆಡಿಎಸ್ ಉಸ್ತುವಾರಿ ಕೋನಪರೆಡ್ಡಿ, ದಲಿತ ಮುಖಂಡರಾದ ಸಿ.ಡಿ.ಗಂಗುಲಪ್ಪ,ಕಾವೇರಿ ಗೋವಿಂದಪ್ಪ,ಯುವ ಮುಖಂಡ ವೆಂಕಟೇಶ್, ಯುವ ಮುಖಂಡ ಸಿ.ಆರ್.ಗೋಪಿ,ತಾಲ್ಲೂಕು ಪಂಚಾಯತಿ ಸದಸ್ಯ ಕಲ್ಲಿಪಲ್ಲಿ ವೆಂಕಟೇಶ್, ಪುರಸಭೆ ಸದಸ್ಯ ಶ್ರೀನಿವಾಸ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನೂರುಲ್ಲ ಮುಂತಾದವರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/04/join-to-jds-BP9-News-Web-Portal.jpeghttp://bp9news.com/wp-content/uploads/2018/04/join-to-jds-BP9-News-Web-Portal-150x150.jpegBP9 Bureauಚಿಕ್ಕಬಳ್ಳಾಪುರರಾಜಕೀಯಬಾಗೇಪಲ್ಲಿ : ಪಟ್ಟಣದ ಅಂಬೇಡ್ಕರ್ ‌ನಗರದ ಬಳಿ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಂಘಟನೆಯಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಆರ್.ಮನೋಹರ್ ರವರಿಗೆ ಬೆಂಬಲಿಸಿ ಸೆರ್ಪಡೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಾಧನ ಕಾರ್ಯದರ್ಶಿ ನರಸಿಂಹನಾಯ್ಡು ಮಾತನಾಡಿ 5  ವರ್ಷಗಳ ಹಿಂದೆ ಸುಬ್ಬಾರೆಡ್ಡಿ ಅಧಿಕಾರದ ಆಸೆಯಿಂದ ಬಡವರಿಗೆ ಕಡಿಮೆ ಖರ್ಚಿನಲ್ಲಿ ಊಟ ನೀಡುತ್ತೇನೆ. ಜನರ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಗೆದ್ದು ವಿಧಾನಸಭೆಗೆ ಹೋದ ಎಸ್.ಎನ್....Kannada News Portal