ಬಾಗೇಪಲ್ಲಿ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಆರ್.ಮನೋಹರ್ ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಗೂಳೂರು ಹೊಬಳಿ ಮಾರ್ಗಾನುಕುಂಟೆ ಹಾಗೂ ಕೊತ್ತಕೊಟೆ, ದೇವಿಕುಂಟೆ, ಗೂಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ  ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಡಾ. ಸಿ.ಆರ್.ಮನೊಹರ್  ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲು ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದ್ದು ಕ್ಷೇತ್ರದಲ್ಲಿ ಒಳಚರಂಡಿ, ನಿರಂತರ ಕುಡಿಯುವ ನೀರು ಪೂರೈಕೆ, ಹಳ್ಳಿಗೆ ಉತ್ತಮ ರಸ್ತೆ, ಕೈಗಾರಿಕೆಗ ಸ್ಥಾಪನೆ ಮಾಡಿ‌ ನಿರುದ್ಯೋಗ ನಿರ್ಮೂಲನೆ ಸೇರಿದಂತೆ ಹಲವಾರು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಒಲವು ಕಂಡು ಬರುತ್ತಿದ್ದು, ಚುನಾವಣೆಯಲ್ಲಿ ಆಯ್ಕೆಯಾದ ನಂತರ ಇಡೀ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಆಯ್ಕೆಯಾಗಿದ್ದ ಎಸ್. ಎನ್.ಸುಬ್ಬಾರೆಡ್ಡಿ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ. ಇದರಿಂದಾಗಿಯೇ ಈಗಲೂ ಸಹ ಕ್ಷೇತ್ರದಲ್ಲಿ ಹತ್ತು ಹಲವು ಯೋಜನೆಗಳು ಕುಂಟುತ್ತ ಸಾಗಿವೆ ಎಂದು ದೂರಿದರು.

ರಾಜಕಾರಣ ಮಾಡುವುದಕ್ಕಾಗಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಮತಕ್ಷೇತ್ರವನ್ನು ಇಡೀ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸುವ ಮೂಲಕ ಶ್ರೀಸಾಮಾನ್ಯರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡಬೇಕೆಂಬ ಸದಾಶಯದಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಕ್ಷೇತ್ರದ ಜನತೆ ಪ್ರಚಂಡ ಬಹುಮತದಿಂದ ತಮ್ಮ ಗೆಲುವು ತಂದುಕೊಡುವ ಮೂಲಕ ಆಶೀರ್ವದಿಸ ಬೇಕೆಂದು ಕೋರಿಕೊಂಡರು. ಕ್ಷೇತ್ರದಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ತಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಉಸ್ತುವಾರಿ ಕೋನಪರೆಡ್ಡಿ, ಜೆಡಿಎಸ್ ಮುಖಂಡ ಭಾಸ್ಕರ ರೆಡ್ಡಿ, ದೇವಿಕುಂಟೆ ಶ್ರೀನಿವಾಸ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯ್ಡು, ಮುಖಂಡರಾದ ಗೂಳೂರು ಬಾಬು,ಯುವ ಮುಖಂಡ ಪ್ರಶಾಂತ್ ಮುಂತಾದವರು ಭಾಗವಹಿಸಿದ್ದರು.

ವರದಿ : ಪ್ರಶಾಂತ್, ಚಿಕ್ಕಬಳ್ಳಾಪುರ

Please follow and like us:
0
http://bp9news.com/wp-content/uploads/2018/04/jds-Karnatakada-Miditha-1024x576.jpeghttp://bp9news.com/wp-content/uploads/2018/04/jds-Karnatakada-Miditha-150x150.jpegBP9 Bureauಚಿಕ್ಕಬಳ್ಳಾಪುರರಾಜಕೀಯಬಾಗೇಪಲ್ಲಿ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಆರ್.ಮನೋಹರ್ ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಗೂಳೂರು ಹೊಬಳಿ ಮಾರ್ಗಾನುಕುಂಟೆ ಹಾಗೂ ಕೊತ್ತಕೊಟೆ, ದೇವಿಕುಂಟೆ, ಗೂಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ  ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಡಾ. ಸಿ.ಆರ್.ಮನೊಹರ್  ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲು ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದ್ದು ಕ್ಷೇತ್ರದಲ್ಲಿ ಒಳಚರಂಡಿ, ನಿರಂತರ ಕುಡಿಯುವ...Kannada News Portal