ಬಾಗೇಪಲ್ಲಿ :  ಕರ್ನಾಟಕ ರಕ್ಷಣಾ ವೇದಿಕೆ ರಾಜಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ 47 ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ  ಬಾಗೇಪಲ್ಲಿ‌ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಂಚಿ ಹುಟ್ಟು ಹಬ್ಬವನ್ನು  ಆಚರಿಸಿದರು.  ಈ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಯುವ ಮುಖಂಡ ನಾರಾಯಣಸ್ವಾಮಿ,  ಕರ್ನಾಟಕ ರಕ್ಷಣಾ ವೇದಿಕೆ  ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಅನೇಕ ಕನ್ನಡಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ಅವರು ನಿರಂತರ ಬಡವರ, ಶ್ರಮೀಕರ, ನಿರ್ಗತಿಕರ ಪರ ನಿಂತಿದ್ದಾರೆ ಅವರ ಹುಟ್ಟುಹಬ್ಬವನ್ನು ಬಾಗೇಪಲ್ಲಿ ಕರವೇ ಘಟಕದಿಂದ ವಿಶೇಷವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.  ಈ ಕಾರ್ಯಕ್ರಮದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಎಸ್. ಜನಾರ್ಧನ, ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್‌, ಮುಖಂಡರಾದ ನರೇಂದ್ರ ಕುಮಾರ್, ನವೀನ್ ಕುಮಾರ್, ಪ್ರವೀಣ್, ಶಿವಶಂಕರ್,ಶ್ರೀನಾಥ್, ವೆಂಕಟೇಶ್, ಬಾಬಾ ಪಕೃದೀನ್ ಮುಂತಾದವರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/09/WhatsApp-Image-2018-09-20-at-1.39.26-PM-1024x768.jpeghttp://bp9news.com/wp-content/uploads/2018/09/WhatsApp-Image-2018-09-20-at-1.39.26-PM-150x150.jpegBP9 Bureauಚಿಕ್ಕಬಳ್ಳಾಪುರಪ್ರಮುಖಸಂಘಟನೆಬಾಗೇಪಲ್ಲಿ :  ಕರ್ನಾಟಕ ರಕ್ಷಣಾ ವೇದಿಕೆ ರಾಜಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ 47 ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ  ಬಾಗೇಪಲ್ಲಿ‌ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಂಚಿ ಹುಟ್ಟು ಹಬ್ಬವನ್ನು  ಆಚರಿಸಿದರು.  ಈ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಯುವ ಮುಖಂಡ ನಾರಾಯಣಸ್ವಾಮಿ,  ಕರ್ನಾಟಕ ರಕ್ಷಣಾ ವೇದಿಕೆ  ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಅನೇಕ ಕನ್ನಡಪರ...Kannada News Portal