ಬಾಗೇಪಲ್ಲಿ: ಕಾಂಗ್ರೇಸ್‍ನ ಕೆಲವು ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದ ಬಾಗೇಪಲ್ಲಿ 14 ನೇ ವಾರ್ಡಿನಲ್ಲಿ ನಡೆದ ಜೆಡಿಎಸ್​​​​ಅಲ್ಪಸಂಖ್ಯಾತರ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಆರ್.ಮನೋಹರ್ ನೇತೃತ್ವದಲ್ಲಿ  ಜೆಡಿಎಸ್​​ ಸೇರ್ಪಡೆಗೊಂಡಿದ್ದಾರೆ.

ಯುವ ಕಾಂಗ್ರೆಸ್​​ನ ಇರ್ಫಾನ್ ಅಸೀಪ್, ಅರೀಪ್ ಇನ್ನೂ ಮುಂತಾದ ನಲವತ್ತಕ್ಕೂ ಹೆಚ್ಚು  ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನ ಮಹಿಳಾ ಘಟಕದ ಅಂಬಜಾನ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖರಾಗಿದ್ದಾರೆ.

ಕಾರ್ಯಕರ್ತರ ಸೇರ್ಪಡೆ ನಂತರ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಆರ್.ಮನೋಹರ್, ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ಇದೆ, ಪ್ರತಿಯೊಂದು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಸರಿಯಾಗಿ ಇಲ್ಲ. ಯಾವ ಗ್ರಾಮದಲ್ಲಿ ನೋಡಿದರು ಗುಡಿಸಲು ಮನೆಗಳು ಕಾಣುತ್ತವೆ. ಅದರೆ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ 1200 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ ಅಂತ ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.ಕ್ಷೇತ್ರದಲ್ಲಿ ಯಾವುದಾದರೂ ಶಾಶ್ವತವಾದ ಕೆಲಸ ಮಾಡಿದ್ದರೆ ತೋರಿಸಲಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಸಾವಲ್ ಹಾಕಿದ್ದಾರೆ.

ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಾಧನ ಕಾರ್ಯದರ್ಶಿ ನರಸಿಂಹನಾಯ್ಡು, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ,ಯುವ ಮುಖಂಡ ಸಿ.ಆರ್. ಗೋಪಿ, ದಲಿತ ಮುಖಂಡ ಎ.ವಿ.ಪೂಜಪ್ಪ,ರಾಶ್ಚೆರವು  ಲಕ್ಷ್ಮೀನಾರಾಯಣ, ಅಲ್ಪಸಂಖ್ಯಾತರ ಮುಖಂಡ ನೂರುಲ್ಲಾ,ಅಪ್ಸರ್ ,ಮುಂತಾದವರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-22-at-9.58.50-AM-1024x485.jpeghttp://bp9news.com/wp-content/uploads/2018/04/WhatsApp-Image-2018-04-22-at-9.58.50-AM-150x150.jpegBP9 Bureauಚಿಕ್ಕಬಳ್ಳಾಪುರರಾಜಕೀಯಬಾಗೇಪಲ್ಲಿ: ಕಾಂಗ್ರೇಸ್‍ನ ಕೆಲವು ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದ ಬಾಗೇಪಲ್ಲಿ 14 ನೇ ವಾರ್ಡಿನಲ್ಲಿ ನಡೆದ ಜೆಡಿಎಸ್​​​​ಅಲ್ಪಸಂಖ್ಯಾತರ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಆರ್.ಮನೋಹರ್ ನೇತೃತ್ವದಲ್ಲಿ  ಜೆಡಿಎಸ್​​ ಸೇರ್ಪಡೆಗೊಂಡಿದ್ದಾರೆ. ಯುವ ಕಾಂಗ್ರೆಸ್​​ನ ಇರ್ಫಾನ್ ಅಸೀಪ್, ಅರೀಪ್ ಇನ್ನೂ ಮುಂತಾದ ನಲವತ್ತಕ್ಕೂ ಹೆಚ್ಚು  ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನ ಮಹಿಳಾ ಘಟಕದ ಅಂಬಜಾನ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖರಾಗಿದ್ದಾರೆ. ಕಾರ್ಯಕರ್ತರ ಸೇರ್ಪಡೆ ನಂತರ ಮಾತನಾಡಿದ ಜೆಡಿಎಸ್ ಅಭ್ಯರ್ಥಿ...Kannada News Portal