ಚಿಕ್ಕಬಳ್ಳಾಪುರ: ಕಾಂಗ್ರೆಸ್ ತನ್ನ ಪ್ರಚಾರ ಕಾರ್ಯದಲ್ಲಿ ತೃತೀಯ ಲಿಂಗಿಗಳನ್ನು ಲೈಂಗಿಕವಾಗಿ ಬಳಸಿಕೊಂಡು ಅಶ್ಲೀಲ ನೃತ್ಯವನ್ನು ಮಾಡಿಸಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಖಂಡನೆ ವ್ಯಕ್ತವಾಗುತ್ತಿದೆ.

ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಎನ್.ಸುಬ್ಬಾರೆಡ್ಡಿ ಅವರೇ ಈ ಕೃತ್ಯವನ್ನು ಎಸಗಿದ್ದು, ತಮ್ಮ ಪ್ರಚಾರ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಗಳನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ಒಂದು ಇದೀಗ ಹೊರಬಿದ್ದಿದೆ.

ಇನ್ನೂ ವರಲಕೊಂಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸುಬ್ಬಾರೆಡ್ಡಿಯವರ ಪರ ಪ್ರಚಾರ ಕೈಗೊಳ್ಳಲಾಗಿತ್ತು. ಅವರು ಬರುವ ಮುನ್ನವೇ ಸಾರ್ವಜನಿಕರನ್ನು ಹಿಡಿದಿಡುವ ಉದ್ದೇಶದಿಂದ ಸುಮಾರು ೨೦ ಜನ ತೃತೀಯ ಲಿಂಗಿಗಳಿಂದ (ಲಿಂಗತ್ವ ಅಲ್ಪಸಂಖ್ಯಾತರು) ನಡು ರಸ್ತೆಯಲ್ಲಿಯೇ ನೃತ್ಯ ಮಾಡಿಸಲಾಗಿದೆ.

ಈ ವೇಳೆ ಗ್ರಾಮಸ್ಥರು ಅವರ ಎದೆ ಭಾಗವನ್ನು ಮುಟ್ಟಿ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ವಿರೋಧಿಸುವ ಗೋಜಿಗೂ ಅವರು ಹೋಗದಿರುವುದು ವಿಪರ್ಯಾಸ. ಈ ಅಶ್ಲೀಲ ನೃತ್ಯ, ಕೆಲವರ ಅಸಭ್ಯ ವರ್ತನೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಂಜೆ ವೇಳೆಯಲ್ಲಿ ನಡು ರಸ್ತೆಯಲ್ಲಿ ಈ ರೀತಿ ಆಮಿಷಗಳನ್ನು ನೀಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಜ್ಞಾವಂತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವರದಿ: ಪ್ರಶಾಂತ್ ಚಿಕ್ಕಬಳ್ಳಾಪುರ

Please follow and like us:
0
http://bp9news.com/wp-content/uploads/2018/04/Pornography-from-Congress-Video-of-Chikkaballapur-Viral-Karnatakada-Miditha.jpeghttp://bp9news.com/wp-content/uploads/2018/04/Pornography-from-Congress-Video-of-Chikkaballapur-Viral-Karnatakada-Miditha-150x150.jpegPolitical Bureauಚಿಕ್ಕಬಳ್ಳಾಪುರಪ್ರಮುಖರಾಜಕೀಯPornography from Congress: Video of Chikkaballapur Viral !!!ಚಿಕ್ಕಬಳ್ಳಾಪುರ: ಕಾಂಗ್ರೆಸ್ ತನ್ನ ಪ್ರಚಾರ ಕಾರ್ಯದಲ್ಲಿ ತೃತೀಯ ಲಿಂಗಿಗಳನ್ನು ಲೈಂಗಿಕವಾಗಿ ಬಳಸಿಕೊಂಡು ಅಶ್ಲೀಲ ನೃತ್ಯವನ್ನು ಮಾಡಿಸಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಖಂಡನೆ ವ್ಯಕ್ತವಾಗುತ್ತಿದೆ. ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಎನ್.ಸುಬ್ಬಾರೆಡ್ಡಿ ಅವರೇ ಈ ಕೃತ್ಯವನ್ನು ಎಸಗಿದ್ದು, ತಮ್ಮ ಪ್ರಚಾರ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಗಳನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ಒಂದು ಇದೀಗ ಹೊರಬಿದ್ದಿದೆ. ಇನ್ನೂ ವರಲಕೊಂಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸುಬ್ಬಾರೆಡ್ಡಿಯವರ ಪರ...Kannada News Portal