ಚಿಕ್ಕಬಳ್ಳಾಪುರ : ವಾಮಾ ಮಾರ್ಗದ ಮೂಲಕ ಬಿಜೆಪಿ, ಸರ್ಕಾರ ಮಾಡೊಕೆ  ಹೊರಟಿದೆ. ಇದರಿಂದ  ಬಿಜೆಪಿಯವರು ಅವರ ನಾಶಕ್ಕೆ ಅವರೇ ಕಾರಣವಾಗುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಬಿಜೆಪಿ ನಾಶವಾಗುತ್ತೆ ಅಂತ ಮಾಜಿ ಮುಖ್ಯಮಂತ್ರಿ ಚಿಕ್ಕಬಳ್ಳಾಪುರ ಸಂಸದ ಡಾ.ಎಂ.ವೀರಪ್ಪಮೋಯ್ಲಿ ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರ ನಗರದ ಎಸ್.ಜೆ.ಸಿ.ಐ.ಟಿ. ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯ ಆಪರೇಷನ್ ಕಮಲವನ್ನು ಈ ಹಿಂದೆ ಮಾಡೋಕೆ ಹೋಗಿ ಹೀನಾಯವಾಗಿ ಸೋತಿತ್ತು.


ಈಗ ಮತ್ತೆ ಆಪರೇಷನ್ ಕಮಲ ಮಾಡೋಕೆ ಹೋಗಿದೆ, ಇನ್ನು ಮಹಾರಾಷ್ಟ್ರ ಸಿಎಂ ಸತೀಶ್ ಜಾರಕಿಹೋಳಿ ಭೇಟಿಯಾಗಿರೋದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹಾ ಸಿ.ಎಂ. ದೇವೇಂದ್ರ ಫಡ್ನವೀಸ್ ಶುಗರ್ ಫ್ಯಾಕ್ಟರಿ ವಿಚಾರಕ್ಕೆ ಮಾತನಾಡಲು ಭೇಟಿಯಾಗಿದ್ದಾರೆ ಅಷ್ಟೆ. ಅದಕ್ಕೂ ರಾಜಕೀಯ ಬೆಳವಣಿಗೆಗೂ ಸಂಬಂಧವಿಲ್ಲ, ಕಾಂಗ್ರೆಸ್ ಪಕ್ಷವನ್ನ ಯಾವುದೇ ವ್ಯಕ್ತಿಗಳು ಒಡೆಯಲಿಕ್ಕೆ ಸಾಧ್ಯವಿಲ್ಲ. ಸತೀಶ್ ಜಾರಕಿಹೋಳಿ ರಾಜಿನಾಮೆ ಕೊಡೋ ವಿಚಾರ ಕೇವಲ ಉಹಾಪೋಹ ಅಷ್ಟೇ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನ ಹಿರಿಯ ನಾಯಕ, ಅವರ ಲೇವಾದೇವಿ ವಿಷಯದಲ್ಲಿ ಅನವಶ್ಯಕವಾಗಿ ಕಿರುಕುಳ ನೀಡುಲಾಗುತ್ತಿದೆ. ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಸಿಬಿಐ ಹಾಗೂ ಐಟಿಯನ್ನ ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಮೋಯ್ಲಿ ಆರೋಪಿಸಿದರು.

ವರದಿ : ಪ್ರಶಾಂತ್ ಚಿಕ್ಕಬಳ್ಳಾಪುರ

Please follow and like us:
0
http://bp9news.com/wp-content/uploads/2018/09/-ಮೋಯ್ಲಿ-BP9NEWS-e1536665315735.jpeghttp://bp9news.com/wp-content/uploads/2018/09/-ಮೋಯ್ಲಿ-BP9NEWS-e1536665315735-150x150.jpegBP9 Bureauಚಿಕ್ಕಬಳ್ಳಾಪುರಪ್ರಮುಖರಾಜಕೀಯಚಿಕ್ಕಬಳ್ಳಾಪುರ : ವಾಮಾ ಮಾರ್ಗದ ಮೂಲಕ ಬಿಜೆಪಿ, ಸರ್ಕಾರ ಮಾಡೊಕೆ  ಹೊರಟಿದೆ. ಇದರಿಂದ  ಬಿಜೆಪಿಯವರು ಅವರ ನಾಶಕ್ಕೆ ಅವರೇ ಕಾರಣವಾಗುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಬಿಜೆಪಿ ನಾಶವಾಗುತ್ತೆ ಅಂತ ಮಾಜಿ ಮುಖ್ಯಮಂತ್ರಿ ಚಿಕ್ಕಬಳ್ಳಾಪುರ ಸಂಸದ ಡಾ.ಎಂ.ವೀರಪ್ಪಮೋಯ್ಲಿ ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರ ನಗರದ ಎಸ್.ಜೆ.ಸಿ.ಐ.ಟಿ. ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯ ಆಪರೇಷನ್ ಕಮಲವನ್ನು ಈ ಹಿಂದೆ ಮಾಡೋಕೆ ಹೋಗಿ ಹೀನಾಯವಾಗಿ ಸೋತಿತ್ತು. var domain = (window.location...Kannada News Portal