ಬೆಂಗಳೂರು : ಮತ್ತೆ ಗ್ರಾಮ ವಾಸ್ತವ್ಯ ಆರಂಭ ಮಾಡುತ್ತೇನೆ. ಈಗಾಗಲೇ ಜನತಾದರ್ಶನ ಆರಂಭವಾಗಿದ್ದು, ಕೃಷ್ಣ ಕಚೇರಿಯಲ್ಲಿ ನನ್ನನ್ನು ನೇರವಾಗಿ ಯಾರು ಬೇಕಾದರೂ ಭೇಟಿ ಮಾಡುವ ವ್ಯವಸ್ಥೆ ಮಾಡಿದ್ದೇನೆ ಎಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಹೀಗೆ ತಿಳಿಸಿದ್ದಾರೆ.

ಮರಳು ಹಾಗೂ ಗಾರ್ಬೇಜ್ ಮಾಫಿಯಾ ವಿರುದ್ಧ ಯಾವುದೇ ಮುಲಾಜಿಗೊಳಗಾಗದೇ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಇನ್ನು ಸಾಲಮನ್ನಾಗೆ ನಾನು ಈಗಲೂ ಬದ್ಧ ಎಂದು ಹೇಳಿರುವ ಕುಮಾರ ಸ್ವಾಮಿ ಮೂರು ತಿಂಗಳ ಕಾಲಾವಕಾಶ ನೀಡಿ, ನಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ನಿಮಗೆ ತಿಳಿಯುತ್ತದೆ ಎಂದು ಹೇಳಿದರು.

ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ನಾನು ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಿಲ್ಲ, ಅದಕ್ಕೆ ಖರ್ಚು ಮಾಡುವ ಹಣವನ್ನು ಯಾವುದಾದರೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇನೆ. ಅಲ್ದೇ ಮುಖ್ಯಮಂತ್ರಿಗಳ ಭದ್ರತೆ ಹಾಗೂ ಬೆಂಗಾವಲು ವಾಹನಗಳ ಸಂಖ್ಯೆ ಕಡಿಮೆ ಮಾಡಿ ಎಂದು ಹೇಳಿದರೆ ಅದಕ್ಕೆ ಅಧಿಕಾರಿಗಳು ಒಪ್ಪುತ್ತಿಲ್ಲ ಎಂಬ ವಿಚಾರವನ್ನು ಹೊರ ಹಾಕಿದ್ದಾರೆ.

ಜತೆಗೆ ಕೇಂದ್ರದ ಮನವೊಲಿಸಿ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತಿದ್ದೇನೆ, ಒಂದು ಕ್ಷಣವನ್ನು ವ್ಯರ್ಥ ಮಾಡದೆ ರಾಜ್ಯದ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದೇನೆ, ಸಾಲ ಮನ್ನಾ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಅದಕ್ಕಾಗಿ ಸಂಪನ್ಮೂಲ ಕ್ರೂಢೀಕರಣದ ಅವಶ್ಯಕತೆಯಿದೆ. ಆ ಕೆಲಸದಲ್ಲಿ ನಾನು ಈಗಾಗಲೇ ಕಾರ್ಯಗತದಲ್ಲಿ ಇದ್ದೇನೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಸಂಬಂಧ ಮಾತನಾಡಿದ ಕುಮಾರ ಸ್ವಾಮಿ ಸುಪ್ರೀಂ ಕೋರ್ಟ್ ನ ಯಾವುದೇ ಆದೇಶವನ್ನು ರಾಜ್ಯ ಸರ್ಕಾರ ಉಲ್ಲಂಘಿಸಿಲ್ಲ, ಸುಪ್ರೀಂ ಆದೇಶವನ್ನು ಉಲ್ಲಂಘಿಸುವ ಉದ್ದೇಶ ನಮಗಿಲ್ಲ, ನಿರ್ವಹಣಾ ಮಂಡಳಿ ವೈಜ್ಞಾನಿಕವಾಗಿ ರಚನೆಯಾಗಬೇಕು ಎಂಬುದು ನಮ್ಮ ಆಶಯವಾಗಿದೆ, ಅಂತರರಾಜ್ಯ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ನಿರ್ಧಾರ ಕೈಗೊಳ್ಳುವಾಗ ಸಂಸತ್ ನ ಎರಡೂ ಮನೆಗಳಲ್ಲಿ ಚರ್ಚಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಕುಮಾರ ಸ್ವಾಮಿ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/06/08-1510128371-23319452-1146675118798280-5339473344365067952-n.jpghttp://bp9news.com/wp-content/uploads/2018/06/08-1510128371-23319452-1146675118798280-5339473344365067952-n-150x150.jpgPolitical Bureauಪ್ರಮುಖರಾಜಕೀಯCM Kumaraswamy back home Village Wrestling Start !!!ಬೆಂಗಳೂರು : ಮತ್ತೆ ಗ್ರಾಮ ವಾಸ್ತವ್ಯ ಆರಂಭ ಮಾಡುತ್ತೇನೆ. ಈಗಾಗಲೇ ಜನತಾದರ್ಶನ ಆರಂಭವಾಗಿದ್ದು, ಕೃಷ್ಣ ಕಚೇರಿಯಲ್ಲಿ ನನ್ನನ್ನು ನೇರವಾಗಿ ಯಾರು ಬೇಕಾದರೂ ಭೇಟಿ ಮಾಡುವ ವ್ಯವಸ್ಥೆ ಮಾಡಿದ್ದೇನೆ ಎಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಹೀಗೆ ತಿಳಿಸಿದ್ದಾರೆ. ಮರಳು ಹಾಗೂ ಗಾರ್ಬೇಜ್ ಮಾಫಿಯಾ ವಿರುದ್ಧ ಯಾವುದೇ ಮುಲಾಜಿಗೊಳಗಾಗದೇ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. var domain...Kannada News Portal