ಬೆಂಗಳೂರು: ಮೇ 15 ರ ಮಧ್ಯಾಹ್ನದಿಂದ ನಡೆದ ಕ್ಷಣ ಕ್ಷಣದ  ರಾಜಕೀಯ ಬೆಳವಣಿಗಳ ನಂತರ ಇವತ್ತು ಬೆಳಗ್ಗೆ 9 ಗಂಟೆಗೆ ಬಿಎಸ್‌ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಸಿಎಂ ಸ್ಥಾನ ಅಲಂಕರಿಸಿದ ಅವರು ಮೊದಲು ಕ್ಯಾಬಿನೆಟ್‌ ಸಭೆ ನಡೆಸಿದ್ರು. ಇನ್ನು  ಮುಖ್ಯಮಂತ್ರಿ ಕಛೇರಿಯಲ್ಲಿ ಪೂಜೆ ಸಲ್ಲಿಸಿ, ಕುರ್ಚಿಗೆ ಕೈಮುಗಿದು, ತಲೆಬಾಗಿ ಸ್ಥಾನ ಅಲಂಕರಿಸಿದ್ರು.

ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಠಿಯಲ್ಲಿ ಎಲ್ಲಾ ಬಿಜೆಪಿ ನಾಯಕರು ಪಾಲ್ಗೊಂಡಿದ್ರು. ಆರುವರೆ ಕೋಟಿ ಜನತೆ ಮತ್ತು ಮಾಧ್ಯಮ ಮಿತ್ರರಿಗೆ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿ ತಮ್ಮ ಭಾಷಣ ಆರಂಭಿಸಿದ್ರು. ಪಕ್ಷ ಮತ್ತು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಪ್ರೀತಿಗೆ ನಾನು 3 ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾನೆ. ಅದಕ್ಕಾಗಿ ರಾಜ್ಯದ ಜನತೆ ಮತ್ತು ರೈತರಿಗೆ, ಹಿಂದುಳಿದ ಮತ್ತು ದೀನದಲಿತ ಬಂಧುಗಳಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ರು.

ರಾಜ್ಯದ ರೈತ ಸಮುದಾಯಕ್ಕೆ ಭರವಸೆ ಕೊಟ್ಟಂತೆ, 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನ ಮಾಡುವ ವಿಚಾರವಾಗಿ ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದ್ರು. ಅದರಂತೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ಬೆಳೆ ಸಾಲ, ಸಹಕಾರಿ ಬ್ಯಾಂಕ್‌ನಲ್ಲಿ ಬೆಳೆಸಾಲ ಮತ್ತು ನೇಕಾರರ ಸಾಲವನ್ನ 1 ಲಕ್ಷದವರೆಗೆ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಸಿಎಂ ಇವತ್ತು ಸಾಲ ಮನ್ನಾ ಮಾಡುವ ಘೋಷಣೆ ಮಾಡಿಲ್ಲ. ಬದಲಾಗಿ 24ಗಂಟೆಯೊಳಗೆ ಅಧಿಕಾರಿಗಳಿಗೆ ಅಂಕಿಅಂಶಗಳನ್ನು ಸಂಗ್ರಹಿಸಿ ಕೊಡುವುದಾಗಿ ಹೇಳಿದ್ದೇನೆ ಎಂದು ತಿಳಿಸಿದ್ರು.

ಇನ್ನು ಸಿಎಂ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್‌ ಮತ್ತು ಜೆಡಿಎಸ್‌  ಅನೈತಿಕವಾಗಿ ಒಪ್ಪಂದ ಮಾಡಿಕೊಂಡು ಅಧಿಕಾರ ಕಬಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಜನರ ಸಹಾಕರದಿಂದ ಅಧಿಕಾರಕ್ಕೆ ಬಂದಿದ್ದೇನೆ. 100 ಕ್ಕೆ 100ರಷ್ಟು ನಾನು ಯಶಸ್ಸು ಕಾಣುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿರುವ 224 ಶಾಸಕರು ತಮ್ಮ ಆತ್ಮಸಾಕ್ಷಿಯನ್ನ ಪ್ರಶ್ನಿಸಿಕೊಂಡು ನಮಗೆ ಬೆಂಬಲ ನೀಡುತ್ತಾರೆ. ನಾವು ಖಂಡಿತ ಬಹುಮತ ಸಾಧಿಸುತ್ತೇವೆ. ಆದರೆ  ಈ ವಿಷಯ ಸರ್ವೋಚ್ಛ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಹೆಚ್ಚು ಚರ್ಚಿಸುವುದಿಲ್ಲ ಎಂದು ಸುದ್ದಿಗೋಷ್ಠಿಯನ್ನು ಮುಕ್ತಾಯಗೊಳಿಸಿದ್ರು.

Please follow and like us:
0
http://bp9news.com/wp-content/uploads/2018/05/B.S.-Yeddyurappa-addresses-a-Meet-the-press-programme1.jpghttp://bp9news.com/wp-content/uploads/2018/05/B.S.-Yeddyurappa-addresses-a-Meet-the-press-programme1-150x150.jpgBP9 Bureauಪ್ರಮುಖಬೆಂಗಳೂರು: ಮೇ 15 ರ ಮಧ್ಯಾಹ್ನದಿಂದ ನಡೆದ ಕ್ಷಣ ಕ್ಷಣದ  ರಾಜಕೀಯ ಬೆಳವಣಿಗಳ ನಂತರ ಇವತ್ತು ಬೆಳಗ್ಗೆ 9 ಗಂಟೆಗೆ ಬಿಎಸ್‌ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಸಿಎಂ ಸ್ಥಾನ ಅಲಂಕರಿಸಿದ ಅವರು ಮೊದಲು ಕ್ಯಾಬಿನೆಟ್‌ ಸಭೆ ನಡೆಸಿದ್ರು. ಇನ್ನು  ಮುಖ್ಯಮಂತ್ರಿ ಕಛೇರಿಯಲ್ಲಿ ಪೂಜೆ ಸಲ್ಲಿಸಿ, ಕುರ್ಚಿಗೆ ಕೈಮುಗಿದು, ತಲೆಬಾಗಿ ಸ್ಥಾನ ಅಲಂಕರಿಸಿದ್ರು. ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಠಿಯಲ್ಲಿ ಎಲ್ಲಾ ಬಿಜೆಪಿ ನಾಯಕರು ಪಾಲ್ಗೊಂಡಿದ್ರು....Kannada News Portal