ಈ ವರ್ಷ   ಸ್ಯಾಂಡಲ್​ವುಡ್​ಗೆ ಅದೃಷ್ಟ ಇಲ್ಲ ಅಂತಾ ಕಾಣುತ್ತೆ. ಕಾರಣ ಈ ಬಾರಿ ದುಡ್ಡು  ಮಾಡಿದ  ಸಿನಿಮಾಗಳು ಕೇವಲ ಕೆಲವೇ  ಕೆಲವು ಮಾತ್ರ. ಬಿಡುಗಡೆಯಾದ 103 ಚಿತ್ರಗಳ ಪೈಕಿ ಕೇವಲ 5 ಸಿನಿಮಾಗಳು ಮಾತ್ರ ಗಲ್ಲಾಪೆಟ್ಟಿಗೆ ತುಂಬಿಸಿದ್ದು. ಇನ್ನು ಸ್ಯಾಂಡಲ್​ವುಡ್​ ನಲ್ಲಿ ಹೆಚ್ಚು ಬ್ಯುಸಿನೆಸ್​ ಮಾಡಿದ್ದು ಕನ್ನಡ ಸಿನಿಮಾಗಳಿಗಿಂತ ಪರಭಾಷಾ ಸಿನಿಮಾಗಳು.

ಪ್ರತೀ ವಾರ ಕನ್ನಡದಲ್ಲಿ ಸರಾಸರಿ 4 ರಿಂದ 5 ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಳೆದ 23 ವಾರಗಳಲ್ಲಿ ಒಟ್ಟು 103 ಸಿನಿಮಾಗಳು  ರಿಲೀಸ್​ ಆಗಿವೆ. ಅದರಲ್ಲಿ ಐದು ತುಳು ಹಾಗೂ ಒಂದು ಕೊಡವ ಸೇರಿವೆ. ಒಟ್ಟಾರೆ ಬಿಡುಗಡೆಯಾದ ಅಷ್ಟು ಸಿನಿಮಾಗಳನ್ನುವೀಕ್ಷಕರು ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಇನ್ನು ಸ್ಯಾಂಡಲ್​ವುಡ್​ನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿದ್ರೂ ಅದು ಹೆಸರಿಗೆ ಮಾತ್ರ ಸಾಲುಗಟ್ಟಿ ನಿಂತಿವೆ. ಆದರೆ ನೋ ಕಲೆಕ್ಷನ್​ ಎನ್ನುತ್ತಿದ್ದಾರೆ ನಿರ್ಮಾಪಕರು. ಅದರಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಗೆದ್ದಿದ್ದು ಮಾತ್ರ ಟಗರು, ರಾಜು ಕನ್ನಡ ಮೀಡಿಯಂ, ರಾಂಬೋ-2 , ಗುಲ್ಟು ಸಿನಿಮಾಗಳು. ಇನ್ನು ಉಳಿದವು ಸ್ಪರ್ಧೆಯಲ್ಲಿ ಸೋತವು.

ಸ್ಯಾಂಡಲ್​ವುಡ್​ ಬಗ್ಗೆ ಒಂದು ಮಾತಿದೆ. ಅದೇನೆಂದರೆ  ಇಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳು ರಿಲೀಸ್​ ಆದರೆ ಇಲ್ಲಿನವರಿಗೆ ಕೆಲಸ ಸಿಗುತ್ತೆ ಎನ್ನುವಂತಹ ಮಾತಿದೆ. ಹಣವೂ ಕೂಡ ಬರುತ್ತದೆ ಎಂದು ಭಾವಿಸಿದ್ದಾರೆ ಕೆಲವರು. ಆದರೆ ಈ ಲೆಕ್ಕಾಚಾರ ತಪ್ಪು  ಎಂದು ಹೇಳುತ್ತಿದ್ದಾರೆ ಸ್ಯಾಂಡಲ್​ವುಡ್​​ ಸಿನಿಮಾ ವಿತರಕರು.

ಅಂದಹಾಗೇ ಸಿನಿಮಾಗಳು ಸೋಲಲು ನಾನಾ ಕಾರಣಗಳಿರುತ್ತವೆ. ಆದರೆ ಕೆಲವರು ಹೇಳುವ ಪ್ರಕಾರ ಈ ಸಲ  ಬಿಗ್​ ಸ್ಟಾರ್​ಗಳ ಕೊರತೆ ಇದೆ. ಅಲ್ಲದೇ ಕನ್ನಡ ಸಿನಿಮಾ ಮಾರುಕಟ್ಟೆಯು ಅಷ್ಟೇನು ಆಶಾದಾಯಕವಾಗಿರಲಿಲ್ಲ ಎಂಬುದು.

ಐಪಿಎಲ್, ಚುನಾವಣೆ ಸೀಸನ್ ಹೊರತುಪಡಿಸಿದರೆ, ಈ ಆರು ತಿಂಗಳಲ್ಲಿ ಬಿಗ್ ಸ್ಟಾರ್ ಸಿನಿಮಾಗಳು ಅಷ್ಟಾಗಿ ತೆರೆಕಂಡಿಲ್ಲ. “ನಾವು ಪರೀಕ್ಷೆಗಳು, ಐಪಿಎಲ್ ಮತ್ತು ವಿಧಾನಸಭೆ ಚುನಾವಣೆಗಳು ಮೂರು ನಾಲ್ಕು ವಾರ ಸಿನಿಮಾ ವ್ಯವಹಾರಕ್ಕೆ ಅಡ್ಡಿಯಾಗಬಹುದು ಎಂದು ಭಾವಿಸಿದ್ದೆವು. ಆದರೆ ಇದರ ಪ್ರಭಾವ ಎರಡು ತಿಂಗಳ ತನಕ ಇತ್ತು. ಇನ್ನೊಂದು ಸಮಸ್ಯೆ ಎಂದರೆ ಬಿಗ್ ಸ್ಟಾರ್ ನಟರ ಸಿನಿಮಾಗಳು ಇಲ್ಲದಿರುವುದು ಈ ಸೋಲಿಗೆ ಕಾರಣ” ಎನ್ನುತ್ತಾರೆ ನಿರ್ಮಾಪಕ ಕಮ್ ವಿತರಕ ಜಯಣ್ಣ.

Please follow and like us:
0
http://bp9news.com/wp-content/uploads/2018/06/Tagaru.jpghttp://bp9news.com/wp-content/uploads/2018/06/Tagaru-150x150.jpgBP9 Bureauಸಿನಿಮಾಈ ವರ್ಷ   ಸ್ಯಾಂಡಲ್​ವುಡ್​ಗೆ ಅದೃಷ್ಟ ಇಲ್ಲ ಅಂತಾ ಕಾಣುತ್ತೆ. ಕಾರಣ ಈ ಬಾರಿ ದುಡ್ಡು  ಮಾಡಿದ  ಸಿನಿಮಾಗಳು ಕೇವಲ ಕೆಲವೇ  ಕೆಲವು ಮಾತ್ರ. ಬಿಡುಗಡೆಯಾದ 103 ಚಿತ್ರಗಳ ಪೈಕಿ ಕೇವಲ 5 ಸಿನಿಮಾಗಳು ಮಾತ್ರ ಗಲ್ಲಾಪೆಟ್ಟಿಗೆ ತುಂಬಿಸಿದ್ದು. ಇನ್ನು ಸ್ಯಾಂಡಲ್​ವುಡ್​ ನಲ್ಲಿ ಹೆಚ್ಚು ಬ್ಯುಸಿನೆಸ್​ ಮಾಡಿದ್ದು ಕನ್ನಡ ಸಿನಿಮಾಗಳಿಗಿಂತ ಪರಭಾಷಾ ಸಿನಿಮಾಗಳು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal