ಬೆಂಗಳೂರು : ಮುಂದಿನ ಚುನಾವಣೆಯ ಯುದ್ದವನ್ನು ಎದುರಿಸಲು ಜೆಡಿಎಸ್​ ತನ್ನ ಕೈ ಬಲಿಷ್ಟಗೊಳಿಸಿಕೊಳ್ಳುತ್ತಿದೆ ಅದಕ್ಕೆ ಸಾಕ್ಷಿ ಇಂದಿನ ಕುತೂಹಲದ ಭೇಟಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಮೊಮ್ಮಗ ಶ್ರೀ. ಪ್ರಕಾಶ್ ಅಂಬೇಡ್ಕರ್, ಮಾಜಿ ಸಂಸದರು ಇಂದು ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಶ್ರೀ.ಹೆಚ್.ಡಿ. ದೇವೇಗೌಡರ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಆದರೆ ಈ ಭೇಟಿಯ ಹಿಂದೆ  ಏನೋ ರಹಸ್ಯ ಅಡಗಿರುವುದು ನಿಜ. ಜೆಡಿಎಸ್​ ನ್ನು ಬಲಿಷ್ಟ ಗೊಳಿಸಲು ಈಗಾಗಲೇ ಪಕ್ಷ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಮುಂದಿನ  ಮುಖ್ಯಮಂತ್ರಿ ಹೆಚ್​ಡಿಕೆ ಎಂಬುದು  ಎಲ್ಲೆಡೆ ಕೇಳಿ ಬರುತ್ತಿರುವ ಮಾಹಿತಿ. ಕುಮಾರಪರ್ವ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಪ್ರಕಾಶ್​ ಅಂಬೇಡ್ಕರ್​ರವರ ಶಕ್ತಿ ಪಕ್ಷದೊಟ್ಟಿಗೆ ಜೊತೆಯಾಗುವ ಎಲ್ಲಾ ಸಾಧ್ಯತೆಗಳ ಲಕ್ಷಣಗಳು ಮೇಲ್ನೋಟಕ್ಕೆ ಕಾಣುತ್ತಿವೆ.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕರಾದ ಮಧು ಬಂಗಾರಪ್ಪನವರು ಉಪಸ್ಥಿತರಿದ್ದರು. ಸುಧೀರ್ಘ ಚರ್ಚೆ ನಡೆಸಿದ ಈ ತಂಡ ಮುಂದಿನ ನಡೆ ಬಗ್ಗೆ ಗಂಭೀರ ಆಲೋಚನೆ ನಡೆಸಿರುವುದಂತೂ ಪಕ್ಕಾ ಎಂದು ತಿಳಿದು ಬಂದಿದೆ.

 

Please follow and like us:
0
http://bp9news.com/wp-content/uploads/2017/11/bangalore-BP9-News-Web-Portal-1024x576.jpeghttp://bp9news.com/wp-content/uploads/2017/11/bangalore-BP9-News-Web-Portal-150x150.jpegBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು : ಮುಂದಿನ ಚುನಾವಣೆಯ ಯುದ್ದವನ್ನು ಎದುರಿಸಲು ಜೆಡಿಎಸ್​ ತನ್ನ ಕೈ ಬಲಿಷ್ಟಗೊಳಿಸಿಕೊಳ್ಳುತ್ತಿದೆ ಅದಕ್ಕೆ ಸಾಕ್ಷಿ ಇಂದಿನ ಕುತೂಹಲದ ಭೇಟಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಮೊಮ್ಮಗ ಶ್ರೀ. ಪ್ರಕಾಶ್ ಅಂಬೇಡ್ಕರ್, ಮಾಜಿ ಸಂಸದರು ಇಂದು ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಶ್ರೀ.ಹೆಚ್.ಡಿ. ದೇವೇಗೌಡರ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಆದರೆ ಈ ಭೇಟಿಯ ಹಿಂದೆ  ಏನೋ ರಹಸ್ಯ ಅಡಗಿರುವುದು ನಿಜ. ಜೆಡಿಎಸ್​ ನ್ನು ಬಲಿಷ್ಟ ಗೊಳಿಸಲು ಈಗಾಗಲೇ ಪಕ್ಷ...Kannada News Portal