ಬೆಂಗಳೂರು : ದೇಶಕ್ಕೆ ಕಾಂಗ್ರೆಸ್ ಬಹುದೊಡ್ಡ ಕೊಡುಗೆ ಅಂದ್ರೆ ಆರು ಪಿಡುಗುಗಳು. ಅಂದ್ರೆ ರೋಗಗಳು. ಆ ರೋಗಗಳು ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಿದೆ. ಅಭಿವೃದ್ಧಿಗೆ ಕಂಟಕವಾಗಿದೆ. ಆ ಆರು ರೋಗಗಳು ಯಾವುದೆಂದರೇ, ಕಾಂಗ್ರೆಸ್ ಸಂಸ್ಕೃತಿ, ಜಾತಿವಾದ, ಕೋಮುವಾದ, ಅಪರಾಧ , ಗುತ್ತಿಗೆದಾರಿಕೆ , ಭ್ರಷ್ಟಾಚಾರ . ಕಾಂಗ್ರೆಸ್​ಗೆ  ಸರ್ಕಾರ ರಚಿಸುವ ಅವಕಾಶ ಸಿಕ್ಕಾಗಲೆಲ್ಲಾ ಈ ಆರು ರೋಗಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಲೇ ಬಂದಿದೆ ಎಂದು ಪ್ರಧಾನಿ ಮೋದಿ ಬುಧವಾರ ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಹೋತಾಪ್ರೇತವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.

ಇನ್ನು ಬಂಗಾರಪೇಟೆಯಲ್ಲಿ ನಡೆದ ಬೃಹತ್ ಪ್ರಚಾರ ಕಾರ್ಯಕ್ರಮ ಇದಾಗಿದ್ದು, ಈ ಚುನಾವಣೆ ಯಾರು ಎಂಎಲ್ಎ ಆಗುತ್ತಾರೆ, ಯಾರು ಮಂತ್ರಿ ಆಗುತ್ತಾರೆ, ಯಾರು ಸರ್ಕಾರ ರಚನೆ ಮಾಡುತ್ತಾರೆ ಎನ್ನುವ ಸಲುವಾಗಿ ನಡೆಯುತ್ತಿಲ್ಲ. ಮುಂದಿನ 5 ವರ್ಷಗಳಲ್ಲಿ ಯುವಕರ, ಮಧ್ಯಮವರ್ಗದ , ಬಡವರ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ ಇದಾಗಿದೆ. ಅಭಿವೃದ್ಧಿಯ ದಿಕ್ಕು ಸೂಚಿಯಾಗಿ ಈ ಚುನಾವಣೆ ಕೆಲಸ ಮಾಡಲಿದೆ ಎಂದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ, ಅಭಿವೃದ್ಧಿಯ ಧ್ಯೇಯವೇ ನಮ್ಮ ಸರ್ಕಾರ ಎಂಬ ಅಂಶದ ಸಾಕಾರ ಪಡಿಸುವ ಸರ್ಕಾರವನ್ನು ಆಡಳಿತಕ್ಕೆ ತರಬೇಕಾಗಿ ಮನವಿ ಮಾಡಿದರು.

ನಂತರ ಇವತ್ತು ಇಡೀ ದೇಶಕ್ಕೆ ಕಾಂಗ್ರೆಸ್ನ ಮನಸ್ಸು ಮತ್ತು ಕೃತ್ಯಗಳು ಗೊತ್ತಿದೆ. ಭಾರತದಲ್ಲಿ ಎಲ್ಲೆಡೆ ಚುನಾವಣೆ ಸಾಲು ಸಾಲಾಗಿ ನಡೆಯಿತು. ರಾಜಸ್ಥಾನದಿಂದ   ತ್ರಿಪುರಾದವರೆಗೂ  ಭಾರತೀಯ ಜನತ ಪಕ್ಷ ಅಧಿಕಾರಕ್ಕೆ ಬಂದಿದೆ. ಇದು ಕಾಂಗ್ರೆಸ್ನ ಕುಕೃತ್ಯಗಳಿಗೆ ಜನ ನೀಡಿದ ತೀರ್ಪು. ಕಾಂಗ್ರೆಸ್ನ ಕುಟುಂಬದ ವಂಶವಾದದ ಮೇಲೆ ದೇಶದ ಜನರಿಗೆ ಸಿಟ್ಟಿದೆ. ಆದ ಕಾರಣವಾಗಿಯೇ ಕಾಂಗ್ರೆಸ್ ಇವತ್ತು ಈ ಸ್ಥಿತಿಗೆ ತಲುಪಿದೆ ಎಂದು ಛೇಡಿಸಿದರು.

ಕಾಂಗ್ರೆಸ್ನ ವ್ಯವಹಾರ ಸಂವಿಧಾನವನ್ನು ಹಾಳುಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ರಚಿಸುವ ಅವಕಾಶ ಸಿಕ್ಕಾಗಲೆಲ್ಲಾ ಅದು ಅಕ್ರಮ, ಭ್ರಷ್ಟಾಚಾರ ಮಾಡುವುದರಲ್ಲಿ ನಿರತವಾಗಿರುತ್ತದೆ.

ಕಾಂಗ್ರೆಸ್ನವರು ಕೇಳುತ್ತಾರೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ 4 ವರ್ಷಗಳಿಂದ ಆಡಳಿತ ನಡೆಸುತ್ತಿದೆ, ಪ್ರಧಾನಿ ಮೋದಿ ಏನು ಕೆಲಸ ಮಾಡಿದ್ದಾರೆ. ಬರೀ ಮಾತನಾಡುತ್ತಿದ್ದಾರೆ ಎಂಬ ಟೀಕೆಗಳನ್ನು ಮಾಡುತ್ತಾರೆ. ಅದೇ ಕೇಂದ್ರದಲ್ಲಿ ಹಿಂದೆ 10 ವರ್ಷಗಳ ಕಾಲ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ರು. ಆದರೆ ಅವರ ಮೇಲೆ ರಿಮೋರ್ಟ್ ಕಂಟ್ರೋಲಿಂಗ್ ಇತ್ತು. ಅವರು ಏನು ಮಾಡಲು ಬಿಟ್ರಿ ನೀವು ಎಂದು ಪ್ರಶ್ನಿಸಿದ ಮೋದಿ, ಕಾಂಗ್ರೆಸ್ನಲ್ಲಿ ಹೈಕಮಾಂಡ್ ಒಂದು ಕುಟುಂಬಕ್ಕೆ ಸೇರಿದ ಆಸ್ತಿಯಾಗಿದೆ ಎಂದು ಟೀಕಿಸಿದರು.

ನಂತರ ಪ್ರಧಾನಿ ಮೋದಿಯವರು ಏರು ಧ್ವನಿಯಲ್ಲೇ ನನಗೂ ಹೈಕಮಾಂಡ್ ಇದೆ. ಅದು ನೀವು. ಈ ದೇಶದ 125 ಕೋಟಿ ಜನ. ನೀವೆ ನನ್ನ ಕಂಟ್ರೋಲರ್ಸ್ ಎಂದರು. ಇತ್ತ ಈ ಮಾತು ಕೇಳುತ್ತಿದ್ದಂತೆ ನೆರೆದಿದ್ದ ಜನಸಾಗರ ಉಧೋ ಎಂಬ ಹರ್ಷೊದ್ಘಾರವನ್ನು ಹೊರ ಹೊಮ್ಮಿಸಿದರು.

ಮಾತು ಮುಂದುವರೆಸಿದ ಪ್ರಧಾನಿ ನಮೋ,ನಮಗೆ ಎಲೆಲ್ಲಿ ಅಧಿಕಾರ ಸಿಕ್ಕಿದೆಯೋ ಅಲೆಲ್ಲಾ ನಾವು ಬದಲಾವಣೆ ತಂದಿದ್ದೇವೆ. ಆದರೆ ಕಾಂಗ್ರೆಸ್ ಅವಕಾಶ ಸಿಕ್ಕಾಗಲೆಲ್ಲ ದುರಾಡಳಿತ ನಡೆಸಿದೆ. ಅದಕ್ಕೆ ಸಾಕ್ಷಿ ಕರ್ನಾಟಕದಲ್ಲಿಯೂ ಇದೆ. ಇಲ್ಲಿ ಎಷ್ಟು ಅಧಿಕಾರಿಗಳ ನಿಗೂಢ ಸಾವಿಗೆ ಈ ಸರ್ಕಾರ ಕಾರಣವಾಗಿದೆ ಎಂದು ನಾನು ಹೇಳಿ ಬೇಕಾದ ಅವಶ್ಯಕತೆ ಇಲ್ಲ, ನಿಮಗೆ ತಿಳಿದಿದೆ ಎಂದರು.

ಇನ್ನು ಚಿನ್ನದ ಚಮಚ ಹಿಡಿದೇ ಹುಟ್ಟಿದ ವ್ಯಕ್ತಿಗಳಿಗೆ ಬಡತನದ ಬಗ್ಗೆ ಏನು ಗೊತ್ತಿರುತ್ತದೆ. ಅದರಲ್ಲೂ ಕಾಂಗ್ರೆಸ್ ಈ ಚಿನ್ನದ ಚಮಚವನ್ನು ಹೊರ ದೇಶದಿಂದ ತಂದು, ಈ ದೇಶದಲ್ಲಿ ಭ್ರಷ್ಟಾಚಾರ ಮಾಡಲಾಗುತ್ತಿದೆ ಎಂದು ಮಾರ್ಮಿಕವಾಗಿ ವ್ಯಂಗ್ಯವಾಡಿದರು.

ಎಸಿ ಕೋಣೆಯಲ್ಲಿ ಕೂತವರಿಗೆ ನಮ್ಮ ಜನರ ಬಡತನ , ಸಂಕಷ್ಟ ಗೊತ್ತಾಗುವುದಿಲ್ಲ. ನಮ್ಮ ಕರ್ನಾಟಕ ಭಾರತದ ಗರ್ವದ ವಿಚಾರ. ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ಅಭಿವೃದ್ಧಿ ಮಂತ್ರ ಜಪಿಸುವ ಮತ್ತು ಸಾಕಾರಗೊಳಿಸುವ ಸರ್ಕಾರಕ್ಕೆ ಮಾತ್ರ ಈ ಬಾರಿ ಅವಕಾಶ ಮಾಡಿಕೊಡಿ. ಈ ಆಡಳಿತ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ಈ ಬಾರಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಯಾಗಿ ನಿಮ್ಮ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ. ರಾಷ್ಟ್ರದಲ್ಲಿ ಮೊದಲ ಕೃಷಿ ಬಜೆಟ್ ನೀಡಿದ ನೇತಾರ ಬಿಎಸ್​ವೈ. ತಾವು ಬಿಜೆಪಿ ಗೆಲ್ಲಿಸಿ ಸರ್ಕಾರ ಬದಲಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

Please follow and like us:
0
http://bp9news.com/wp-content/uploads/2018/05/PICNEWS2-e1525147315269.jpghttp://bp9news.com/wp-content/uploads/2018/05/PICNEWS2-e1525147315269-150x150.jpgPolitical Bureauಕೋಲಾರಪ್ರಮುಖರಾಜಕೀಯCongratulations to Congress for 6 diseases Modi blasts in Kolarಬೆಂಗಳೂರು : ದೇಶಕ್ಕೆ ಕಾಂಗ್ರೆಸ್ ಬಹುದೊಡ್ಡ ಕೊಡುಗೆ ಅಂದ್ರೆ ಆರು ಪಿಡುಗುಗಳು. ಅಂದ್ರೆ ರೋಗಗಳು. ಆ ರೋಗಗಳು ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಿದೆ. ಅಭಿವೃದ್ಧಿಗೆ ಕಂಟಕವಾಗಿದೆ. ಆ ಆರು ರೋಗಗಳು ಯಾವುದೆಂದರೇ, ಕಾಂಗ್ರೆಸ್ ಸಂಸ್ಕೃತಿ, ಜಾತಿವಾದ, ಕೋಮುವಾದ, ಅಪರಾಧ , ಗುತ್ತಿಗೆದಾರಿಕೆ , ಭ್ರಷ್ಟಾಚಾರ . ಕಾಂಗ್ರೆಸ್​ಗೆ  ಸರ್ಕಾರ ರಚಿಸುವ ಅವಕಾಶ ಸಿಕ್ಕಾಗಲೆಲ್ಲಾ ಈ ಆರು ರೋಗಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಲೇ ಬಂದಿದೆ ಎಂದು ಪ್ರಧಾನಿ ಮೋದಿ...Kannada News Portal