ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಬಿಜೆಪಿಯ ಅ.ದೇವೇಗೌಡ ಆಯ್ಕೆಯಾಗಿದ್ದಾರೆ. ಅ. ದೇವೇಗೌಡ ಅವರು 17,702 ಮತ ಪಡೆದು ಜಯಶಾಲಿಯಾಗಿದ್ದು, ಕಾಂಗ್ರೆಸ್‌ನ ರಾಮೋಜಿಗೌಡ 12,838, ಜೆಡಿಎಸ್‌ನ ಅಚ್ಚೇಗೌಡ ಶಿವಣ್ಣ 7,177 ಮತ ಪಡೆದು ಪರಾಭವಗೊಂಡಿದ್ದಾರೆ.

ಅ.ದೇವೇಗೌಡ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಬಿಜೆಪಿಯ ರಾಮಚಂದ್ರಗೌಡ ಅವರ ಎದುರು ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿ ಜೆಡಿಎಸ್‌ ಟಿಕೆಟ್‌ ಸಿಗದ ಕಾರಣ ಬಿಜೆಪಿ ಸೇರ್ಪಡೆಗೊಂಡು ಸ್ಪರ್ಧೆ ಮಾಡಿದ್ದರು.

ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ ಹುಮನಾಬಾದ ಅವರು ಬಿಜೆಪಿ ಅಭ್ಯರ್ಥಿ ಹೊಸಪೇಟೆಯ ಕೆ.ಬಿ.ಶ್ರೀನಿವಾಸ ಅವರನ್ನು 321 ಮತಗಳ ಅಂತರದಿಂದ ಸೋಲಿಸಿದ್ದಾರೆ. ಡಾ.ಚಂದ್ರಶೇಖರ ಪಾಟೀಲ 18,768 ಮತಗಳನ್ನು ಪಡೆದರೆ, ಕೆ.ಬಿ. ಶ್ರೀನಿವಾಸ 18, 447 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ವಿಧಾನಪರಿಷತ್‌ ಬಲಾ ಬಲ:

ಈ ಫ‌ಲಿತಾಂಶದ ಬಳಿಕ ಒಟ್ಟು 75 ಸದಸ್ಯ ಬಲದ ಮೇಲ್ಮನೆಯಲ್ಲಿ ಕಾಂಗ್ರೆಸ್‌ ತನ್ನ ಬಲವನ್ನು 35ಕ್ಕೆ ಹೆಚ್ಚಿಸಿಕೊಂಡಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಪ್ರಸ್ತುತ ಐದು ಸ್ಥಾನಗಳು ಖಾಲಿ ಇವೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ ಅರ್ಧದಷ್ಟು ಸ್ಥಾನಗಳನ್ನು ಪಡೆದಂತಾಗಿದೆ.ಅಲ್ಲದೆ, ಜೆಡಿಎಸ್‌ನ 15 ಸದಸ್ಯರೂ ಸೇರಿದಂತೆ ಮಿತ್ರ ಪಕ್ಷಗಳ ಒಟ್ಟು ಸದಸ್ಯಬಲ 50ಕ್ಕೆ ಏರಿದಂತಾಗಿದೆ. ಪ್ರಸ್ತುತ 70 ಸದಸ್ಯರ ಪೈಕಿ ಕಾಂಗ್ರೆಸ್‌- 35,ಬಿಜೆಪಿ- 18, ಜೆಡಿಎಸ್- 15 ಸದಸ್ಯರನ್ನು ಹೊಂದಿದ್ದು, ಒಬ್ಬ ಕಾಂಗ್ರೆಸ್‌ ಬೆಂಬಲಿತ ಮತ್ತು ಇನ್ನೊಬ್ಬ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯರು ಇದ್ದಾರೆ.

Please follow and like us:
0
http://bp9news.com/wp-content/uploads/2018/06/cong-melmane-1.jpghttp://bp9news.com/wp-content/uploads/2018/06/cong-melmane-1-150x150.jpgPolitical Bureauಪ್ರಮುಖಬೆಂಗಳೂರುರಾಜಕೀಯCongress is the largest party in the Upper Houseಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಬಿಜೆಪಿಯ ಅ.ದೇವೇಗೌಡ ಆಯ್ಕೆಯಾಗಿದ್ದಾರೆ. ಅ. ದೇವೇಗೌಡ ಅವರು 17,702 ಮತ ಪಡೆದು ಜಯಶಾಲಿಯಾಗಿದ್ದು, ಕಾಂಗ್ರೆಸ್‌ನ ರಾಮೋಜಿಗೌಡ 12,838, ಜೆಡಿಎಸ್‌ನ ಅಚ್ಚೇಗೌಡ ಶಿವಣ್ಣ 7,177 ಮತ ಪಡೆದು ಪರಾಭವಗೊಂಡಿದ್ದಾರೆ. ಅ.ದೇವೇಗೌಡ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಬಿಜೆಪಿಯ ರಾಮಚಂದ್ರಗೌಡ ಅವರ ಎದುರು ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿ ಜೆಡಿಎಸ್‌ ಟಿಕೆಟ್‌ ಸಿಗದ ಕಾರಣ ಬಿಜೆಪಿ ಸೇರ್ಪಡೆಗೊಂಡು ಸ್ಪರ್ಧೆ ಮಾಡಿದ್ದರು. ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ...Kannada News Portal